ಮಲೆಯಾಳಂನ ಒರು ಅಡಾರ್ ಲವ್ ಕಿರಿಕ್ ಲವ್ ಸ್ಟೋರಿಯಾಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಫೆಬ್ರವರಿ ಹದಿನಾಲಕ್ಕರ ಪ್ರೇಮಿಗಳ ದಿನದ ಪುಣ್ಯ ದಿನದಂದೇ ಈ ಸಿನಿಮಾ ತೆರೆ ಕಾಣುತ್ತಿದೆ. ಹೇಳಿ ಕೇಳಿ ಇದು ಒಂದೇ ಒಂದು ಸೀನಿನಿಂದ ಯುವ ಸಮೂಹವನ್ನೇ ಆಕ್ರಮಿಸಿಕೊಂಡಿರೋ ಚಿತ್ರ. ಹಾಗೆಂದ ಮೇಲೆ ಅದರ ಅಸಲೀ ಕಥೆ ಏನೆಂಬ ಕೌತುಕ ಎಲ್ಲರಲ್ಲಿಯೂ ಇದ್ದೇ ಇದೆ.
ಈ ಸಿನಿಮಾ ಸುದ್ದಿಯಾಗಿದ್ದು ಒಂದು ಕಣ್ಣೇಟಿನ ದೃಷ್ಯದಿಂದ ಅನ್ನೋದು ನಿರ್ವಿವಾದ. ಆದರೆ ಚಿತ್ರದುದ್ದಕ್ಕೂ ಯುವ ಪ್ರೇಮಿಗಳನ್ನು ಮತ್ತಿನಲ್ಲಿ ಮೀಯಿಸುವಂಥಾ ಇನ್ನೂ ಒಂದಷ್ಟು ವಿಚಾರಗಳಿವೆಯಂತೆ. ಅದರ ಭಾಗವಾಗಿಯೇ ಪ್ರೋಮೋದಲ್ಲಿ ಲಿಪ್ ಲಾಕ್ ಶಾಕ್ ಕೂಡಾ ರವಾನೆಯಾಗಿದೆ.
ಹಾಗೆಂದ ಮಾತ್ರಕ್ಕೆ ಈ ಸಿನಿಮಾ ಬರೀ ಇಂಥಾ ವಿಚಾರಗಳತ್ತಲೇ ಫೋಕಸ್ ಮಾಡಿದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇಡೀ ಚಿತ್ರದಲ್ಲಿ ಯುವ ಸಮುದಾಯಕ್ಕೊಂದು ಸಂದೇಶವಿದೆಯಂತೆ. ಎಲ್ಲಿಯೂ ಸಲೀಸಾಗಿ ದಾಖಲಿಸಲಾಗದ ಯುವ ಮನಸುಗಳ ತಲ್ಲಣದ ಸೂಕ್ಷ್ಮ ಕಥೆಯನ್ನೂ ಕಿರಿಕ್ ಲವ್ ಸ್ಟೋರಿ ಹೊಂದಿದೆಯಂತೆ.
#
No Comment! Be the first one.