ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಭಾರೀ ಸದ್ದು ಮಾಡಿದ್ದೀಗ ಇತಿಹಾಸ. ಈ ಚಿತ್ರ ಬಾಲಿವುಡ್ಗೆ ರೀಮೇಕ್ ಆಗಲು ರೆಡಿಯಾಗೋ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇದೀಗ ಕನ್ನಡ ಕಿರಿಕ್ ಪಾರ್ಟಿಯ ಹಿಂದಿ ರೀಮೇಕ್ನಲ್ಲಿ ಯಾರ್ಯಾರು ಯಾವ ಪಾತ್ರಗಳನ್ನು ಮಾಡಲಿದ್ದಾರೆಂಬ ಬಗ್ಗೆ ಕನ್ನಡದ ಪ್ರೇಕ್ಷಕರೆಲ್ಲ ಕುತೂಹಲಗೊಂಡಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಪಾತ್ರವನ್ನು ಯಾರು ಮಾಡುತ್ತಿದ್ದಾರೆಂಬ ವಿಚಾರ ಜಾಹೀರಾಗಿದೆ. ಕಾರ್ತಿಕ್ ಆರ್ಯನ್ ಆ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಕನ್ನಡದ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದ ಸಾನ್ವಿ ಪಾತ್ರವನ್ನು ಯಾರು ಮಾಡಲಿದ್ದಾರೆಂಬ ವಿಚಾರ ಈ ವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಈಗ ಅದೂ ಈಗ ಪಕ್ಕಾ ಆಗಿದೆ. ಸಲ್ಮಾನ್ ಖಾನ್ ಪ್ರೇಯಸಿ ಜಾಕ್ವೆಲಿನ್ ಫೆರ್ನಾಂಡಿಸ್ ಸಾನ್ವಿಯಾಗಿ ನಟಿಸಲು ಆಯ್ಕೆಯಾಗಿದ್ದಾಳೆ.
ಚಿತ್ರತಂಡ ಕಿರಿಕ್ ಪಾರ್ಟಿ ರೀಮೇಕ್ ಮಾಡಲು ನಿರ್ಧರಿಸಿ ಅದರಲ್ಲಿನ ಪಾತ್ರಗಳಿಗೆ ಸೂಕ್ತವಾಗ ಬಾಲಿವುಡ್ ನಟ ನಟಿಯರಿಗಾಗಿ ತಲಾಶು ನಡೆಸುತ್ತಿತ್ತು. ನಾಯಕನಾಗಿ ಕಾರ್ತಿಕ್ ಆಯ್ಕೆಯಾದರೂ ಸಾನ್ವಿ ಪಾತ್ರಕ್ಕೆ ಮಾತ್ರ ಯಾರೂ ಸೂಟ್ ಆಗುತ್ತಿರಲಿಲ್ಲ. ಕಡೆಗೂ ಒಂದಷ್ಟು ನಾಯಕಿಯರ ಹುಡುಟ ನಡೆಸಿದ ಚಿತ್ರತಂಡ ಜಾಕ್ವೆಲಿನ್ಳನ್ನು ಆಯ್ಕೆ ಮಾಡಿಕೊಂಡಿದೆ.
ಒಂದು ರೇಂಜಿಗೆ ಜಾಕ್ವೆಲಿನ್ ಕನ್ನಡಕದ ಪೋಸಿನಲ್ಲಿ ಕನ್ನಡದ ಸಾನ್ವಿಯನ್ನು ಹೋಲುತ್ತಾಳೆ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿರೋ ಆಕೆಗೆ ಈ ಪಾತ್ರ ನಿರ್ವಹಿಸೋದು ಕಷ್ಟವಾಗಲಿಕ್ಕಿಲ್ಲ ಎಂಬುದು ಚಿತ್ರ ತಂಡದ ಭರವಸೆ, ಜಾಕ್ಚವೆಲಿನ್ ಫರ್ನಾಂಡಿಸ್ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಂತರ ಥರ ಥರದಲ್ಲಿ ಸುದ್ದಿಯಲ್ಲಿರುವಾಕೆ. ಆದರೆ ಅದು ನಟನೆಯ ಕಾರಣಕ್ಕಲ್ಲ. ಬದಲಾಗಿ ಸಲ್ಮಾನ್ ಖಾನ್ ಜೊತೆಗಿನ ಪ್ರೇಮ ವ್ಯವಹಾರದ ಕಾರಣಕ್ಕೆ!
ಕನ್ನಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ಮುಖ್ಯ ಆಕರ್ಷಣೆಯಾಗಿದ್ದದ್ದು ರಶ್ಮಿಕಾ ಮಂದಣ್ಣ ನಿರ್ವಹಿಸಿದ್ದ ಸಾನ್ವಿ ಪಾತ್ರ. ಇದರಲ್ಲಿನ ರಶ್ಮಿಕಾ ಲುಕ್ಕಿಗೆ ಹೈಕಳೆಲ್ಲ ಫಿದಾ ಆಗಿದ್ದರು. ಜಾಕ್ವೆಲಿನ್ ಕೂಡಾ ಬಾಲಿವುಡ್ಡಲ್ಲಿ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿದರೂ ಅಚ್ಚರಿಯೇನಿಲ್ಲ.
#
No Comment! Be the first one.