ಥರ ಥರದ ಕಿರಿಕ್ಕು ಮಾಡುತ್ತಲೇ ರೈಲ್ವೇ ಹಳಿ ಮೇಲೆ ಬಿದ್ದುಕೊಂಡು ಕಾಲೆತ್ತಿ ಪೋಸು ಕೊಟ್ಟರೂ ಸಂಯುಕ್ತಾ ಹೆಗ್ಡೆಯ ನಸೀಬು ಬದಲಾಗಲಿಲ್ಲ. ಕಾಲೇಜ್ ಕುಮಾರ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದಾಚೆಗೆ ಈಕೆಯನ್ನು ನಾಯಕಿಯನ್ನಾಗಿಸುವ ಸಾಹಸಕ್ಕೆ ಕನ್ನಡದಲ್ಲಿ ಯಾರೂ ಕೈ ಹಾಕಲಿಲ್ಲ. ಕನ್ನಡದಲ್ಲಿ ಹುಚ್ಚಾ ವೆಂಕಟನ ಖಾಸಾ ತಂಗಿಯೆಂದೇ ಬ್ರ್ಯಾಂಡ್ ಆಗಿರೋ ಈಕೆ ಕನ್ನಡದಲ್ಲಿ ನೆಲೆಗೊಳ್ಳೋದು ಕನಸಿನ ಮಾತೆಂಬ ವಾತಾವರಣವೇ ದಟ್ಟೈಸಿದೆ!
ಒಂದೆರಡು ಸಲ ಅರೆಬರೆ ಬಟ್ಟೆ ತೊಟ್ಟು ಅಸಹ್ಯದ ಪೋಸುಗಳಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಮಂಗಳಾರತಿ ಮಾಡಿಸಿಕೊಂಡಿದ್ದಳು. ಅದಾದ ನಂತರ ಕಣ್ಮರೆಯಾದಂತಿದ್ದ ಈಕೆಯೀಗ ತಮಿಳು ಚಿತ್ರರಂಗದಲ್ಲಿ ಪ್ರತ್ಯಕ್ಷಳಾಗಿದ್ದಾಳೆ!
ಈ ಚಿತ್ರ ಈವತ್ತಿನ ಮನುಷ್ಯ ಸಂಬಂಧಗಳ ಸುತ್ತಾ ಸಾಗುತ್ತದೆಯಂತೆ. ಸ್ವೇಚ್ಚೆಯಂತಾಗಿರೋ ಸಂಬಂಧಗಳು ಮತ್ತು ಡಾಗ್ ಬ್ರೀಡಿಂಗ್ ಬಗೆಗಿನ ಅಪರೂಪದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈ ಚಿತ್ರದಲ್ಲಿ ನಾಯಿ ಕೂಡಾ ಬಹು ಮುಖ್ಯವಾದ ಪಾತ್ರ ಹೊಂದಿದೆಯಂತೆ. ಸದ್ಯಕ್ಕೆ ಈ ಚಿತ್ರದ ನಾಯಕಿಯಾಗಿ ಸಂಯುಕ್ತಾ ಹೆಗ್ಡೆ ಆಯ್ಕೆಯಾಗಿದ್ದಾಳೆ. ಸೂಕ್ತವಾದ ಶ್ವಾನವೊಂದಕ್ಕಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ.
ಕನ್ನಡದ ಹುಡುಗಿಯೊಬ್ಬಳು ಬೇರೆ ಭಾಷೆಗಳಲ್ಲಿಯೂ ಸದ್ದು ಮಾಡಿದರೆ ಅದು ಸಂತೋಷದ ವಿಚಾರವೇ. ಆದರೆ ಸಂಯುಕ್ತಾ ವಿಚಾರದಲ್ಲಿ ಹಾಗೆ ಖುಷಿ ಪಡಲು ಕನ್ನಡಿಗರಿಗೆ ಧೈರ್ಯ ಸಾಲುತ್ತಿಲ್ಲ. ಯಾಕೆಂದರೆ ಈ ಮೂಲಕ ನಮ್ಮಲ್ಲಿನ ಬಾಂಬೊಂದು ಬಾರ್ಡರು ದಾಟಿ ಹೋಗಿದೆ. ಅದು ಯಾವ ಕ್ಷಣದಲ್ಲಿ, ಯಾವ ಸ್ವರೂಪದಲ್ಲಿ ಆಸ್ಫೋಟಗೊಂಡು ರಂಖಲು ಸೃಷ್ಟಿಸುತ್ತದೋ ಹೇಳಲು ಬರುವುದಿಲ್ಲ!
#