ಮಲೆಯಾಳಂ ಚಿತ್ರದ ಒಂದು ದೃಷ್ಯದಿಂದ ಏಕಾಏಕಿ ನ್ಯಾಷನಲ್ ಕ್ರಶ್ ಆದವಳು ಪ್ರಿಯಾ ವಾರಿಯರ್. ಇದೀಗ ಪ್ರಿಯಾ ಕರ್ನಾಟಕಕ್ಕೇ ಬಂದು ಇಲ್ಲಿನ ಪಡ್ಡೆಗಳಿಗೆ ನೇರವಾಗಿ ಕಣ್ಣು ಹೊಡೆಯಲು ರೆಡಿಯಾಗಿದ್ದಾಳೆ. ಇನ್ನೊಂದು ದಿನ ಕಳೆದರೆ ಅಂಥಾದ್ದೊಂದು ಮಹಾ ಭಾಗ್ಯದ ಸನ್ನಿವೇಶಕ್ಕೆ ಅದ್ದೂರಿ ಆರಂಭ ಸಿಗಲಿದೆ.
ಯಾಕೆಂದರೆ, ಮ,ಲೆಯಾಳಂ ಚಿತ್ರ ಒರು ಅಡಾರ್ ಲವ್ ಕನ್ನಡದಲ್ಲಿಯೂ ಕಿರಿಕ್ ಲವ್ ಸ್ಟೋರಿಯಾಗಿ ಬಿಡುಗಡೆಯಾಗಲಿದೆ. ಪ್ರೇಮಿಗಳ ದಿನದಂದೇ ಈ ಚಿತ್ರ ಬಿಡುಗಡೆಯಾಗುತ್ತಿರೋದರಿಂದಾಗಿ ಯುವ ಸಮುದಾಯ ಥ್ರಿಲ್ ಆಗಿ ಕಾಯಲಾರಂಭಿಸಿದೆ.
ಯಾವಾಗ ಪ್ರಿಯಾ ವಾರಿಯರ್ ಕಣ್ಣು ಹೊಡೆದ ದೃಷ್ಯ ದೇಶಾಧ್ಯಂತ ಸದ್ದು ಮಾಡಿತೋ ಆ ಕ್ಷಣದಿಂದಲೇ ಈಕೆಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಅವ್ಯಾಹತವಾಗಿ ನಡೆದಿತ್ತು. ಆದರೆ ಅದೇಕೋ ಕೈಗೂಡಿರಲಿಲ್ಲ. ಇದರಿಂದ ಬೇಸರಾಗಿದ್ದ ಕನ್ನಡದ ಪ್ರಿಯಾಭಿಮಾನಿಗಳಿಗೀಗ ಆಕೆಯ ಚಿತ್ರವನ್ನು ಕನ್ನಡದಲ್ಲಿಯೇ ನೋಡುವ ಸದಾವಕಾಶ ಕೂಡಿ ಬಂದಿದೆ.
#
No Comment! Be the first one.