ಸಿನಿಮಾವನ್ನೇ ಧೇನಿಸುವ ಅರ್ಜುನ್ ಇಂಥ ಇನ್ನೂ ನೂರು ಸಿನಿಮಾಗಳನ್ನು ನೀಡಬಲ್ಲ ತಾಕತ್ತಿರುವವರು. ನಿರ್ದೇಶನದ ವಿಚಾರಕ್ಕೆ ಬಂದರೆ ಅರ್ಜುನ್ ಪಕ್ಕಾ ಕಸುಬುದಾರ. ತಾನು ಕಂಡ ಕನಸು ಹೀಗೇ ತೆರೆಮೇಲೆ ಮೂಡಬೇಕು ಎಂದು ಶ್ರಮಿಸುವ ಹಠವಾದಿ. ಇಂಥ ಪಕ್ವ ನಿರ್ದೇಶಕರನ್ನು ಜನ ಕೈ ಹಿಡಿದು ಬೆನ್ನು ತಟ್ಟಿದಾಗ ಮಾತ್ರ ಅವರ ಕ್ರಿಯಾಶೀಲತೆ ಇಮ್ಮಡಿಯಾಗಲು ಸಾಧ್ಯ.
ಈಗೆಲ್ಲಾ ಸಿನಿಮಾಗಳು ಹೆಚ್ಚು ಥಿಯೇಟರಿನಲ್ಲಿ ಬಿಡುಗಡೆಗೊಳ್ಳುವುದರಿಂದ ಹೆಚ್ಚೆಂದರೆ ಎರಡು ವಾರಗಳಷ್ಟೇ ಚಿತ್ರಮಂದಿರಗಳಲ್ಲಿ ಉಳಿಯುತ್ತವೆ. ಆದರೆ ಯಾವ ಸಿನಿಮಾ ಬಿಡುಗಡೆಗೊಂಡ ಇಪ್ಪತ್ತೈದು ದಿನಗಳ ನಂತರವೂ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿರುತ್ತದೋ ಅಂಥಾ ಸಿನಿಮಾವನ್ನು ಸೂಪರ್ ಹಿಟ್ ಎಂದು ಪರಿಗಣಿಸಬೇಕು!
ಈ ನಿಟ್ಟಿನಲ್ಲಿ ನೋಡಿದರೆ ಈಗ ‘ಕಿಸ್ ಸಿನಿಮಾ ಬರೋಬ್ಬರಿ ೮೭ ಚಿತ್ರಮಂದಿರಗಳಲ್ಲಿ ೨೫ ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೇಳಿ ಕೇಳಿ ಇದು ಪಕ್ಕಾ ಯೂಥ್’ಫುಲ್ ಚಿತ್ರ. ‘ನೀನೇ ಮೊದಲು ನೀನೇ ಕೊನೆ ಮತ್ತು ‘ಶೀಲಾ ಸುಶೀಲ ಹಾಡುಗಳು ರಿಲೀಸಾದಾಗಲೇ ಯುವ ಪ್ರೇಕ್ಷಕರು ಈ ಸಿನಿಮಾವನ್ನು ನೋಡಲೇಬೇಕೆನ್ನುವ ಶಪಥ ಮಾಡಿದ್ದರು. ನಂತರ ಸಿನಿಮಾ ರಿಲೀಸಾದಮೇಲೆ ಫ್ಯಾಮಿಲಿ ಆಡಿಯನ್ಸ್ ಕೂಡಾ ಥಿಯೇಟರಿಗೆ ಧಾವಿಸಿದ್ದರು. ಇದೆಲ್ಲದರ ಪ್ರತಿಫಲವೆನ್ನುವಂತೆ ಕಿಸ್ ಈಗ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಒಂದು ಸಿನಿಮಾ ಗಳಿಸಿದ್ದರ ಹೊರತಾಗಿ ಕೊಟ್ಟಿದ್ದು ಏನು ಅನ್ನೋದೂ ಸಾಕಷ್ಟು ಮುಖ್ಯವಾಗುತ್ತದೆ. ಎ.ಪಿ. ಅರ್ಜುನ್ ನಿರ್ದೇಶಿಸಿ, ನಿರ್ಮಿಸಿದ್ದ ‘ಕಿಸ್ ಸಿನಿಮಾ ಮ್ಯೂಸಿಕ್ಕಲ್ಲಿ ಮ್ಯಾಜಿಕ್ ಮಾಡಿ, ಥಿಯೇಟರಿಗೆ ಕರೆಸಿಕೊಂಡು ಅಲ್ಲೂ ಭರಪೂರ ಸರ್ಪ್ರೈಸ್ ನೀಡುದ್ದು ಮಾತ್ರವಲ್ಲದೆ ವಿರಾಟ್ ಮತ್ತು ಶ್ರೀಲೀಲಾ ಎನ್ನುವ ಎರಡು ಮುದ್ದಾದ ನಕ್ಷತ್ರಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದೆ. ಶ್ರೀಲೀಲಾ ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗುವ ಎಲ್ಲ ಸೂಚನೆಯನ್ನೂ ನೀಡಿದ್ದಾಳೆ. ವಿರಾಟ್ ಕೂಡಾ ತನ್ನ ಸಿನಿಮಾ ಬದುಕಿನಲ್ಲಿ ಎಷ್ಟೇ ದೊಡ್ಡ ಎತ್ತರಕ್ಕೇರಿದರೂ ಅದಕ್ಕೆ ‘ಕಿಸ್ ಅಡಿಪಾಯದಂತಾಗುತ್ತದೆ.
ಅರ್ಜುನ್ ಮತ್ತವರ ತಂಡ ವರ್ಷಾನುಗಟ್ಟಲೆ ಕಷ್ಟಪಟ್ಟು, ಒಂದೊಂದು ಫ್ರೇಮುಗಳನ್ನೂ ಮುದ್ದು ಮಾಡುವಷ್ಟು ಚೆಂದಗೊಳಿಸಿ, ಎಲ್ಲರೂ ನೆಚ್ಚಿಕೊಳ್ಳುವ ಹಾಡುಗಳನ್ನು ರೂಪಿಸಿ, ಬಿಡುಗಡೆ ಮಾಡಿದ್ದಕ್ಕೂ ‘ಕಿಸ್ ಸಾರ್ಥಕ ಭಾವವನ್ನು ಮೂಡಿಸಿದೆ. ಆ ಮೂಲಕ ಅರ್ಜುನ್ ಅವರ ಗೆಲುವಿನ ಖಾತೆಗೆ ‘ಕಿಸ್ ಕೂಡಾ ಜಮೆಯಾಗಿದೆ. ಸಿನಿಮಾವನ್ನೇ ಧೇನಿಸುವ ಅರ್ಜುನ್ ಇಂಥ ಇನ್ನೂ ನೂರು ಸಿನಿಮಾಗಳನ್ನು ನೀಡಬಲ್ಲ ತಾಕತ್ತಿರುವವರು. ನಿರ್ದೇಶನದ ವಿಚಾರಕ್ಕೆ ಬಂದರೆ ಅರ್ಜುನ್ ಪಕ್ಕಾ ಕಸುಬುದಾರ. ತಾನು ಕಂಡ ಕನಸು ಹೀಗೇ ತೆರೆಮೇಲೆ ಮೂಡಬೇಕು ಎಂದು ಶ್ರಮಿಸುವ ಹಠವಾದಿ. ಇಂಥ ಪಕ್ವ ನಿರ್ದೇಶಕರನ್ನು ಜನ ಕೈ ಹಿಡಿದು ಬೆನ್ನು ತಟ್ಟಿದಾಗ ಮಾತ್ರ ಅವರ ಕ್ರಿಯಾಶೀಲತೆ ಇಮ್ಮಡಿಯಾಗಲು ಸಾಧ್ಯ. ‘ಕಿಸ್’ನಿಂದ ಅದು ಸಾಧ್ಯವಾಗಿದೆ. ನೂರು ದಿನದ ಗಡಿ ದಾಟುವ ವರೆಗೂ ಈ ಮುತ್ತಿನ ಮೆರವಣಿಗೆ ಹೀಗೇ ಸಾಗಲಿ…