ಈ ಹಿಂದೆ ವಿ. ರವಿಕುಮಾರ್ ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ಆರಂಭಿಸಿದ್ದ ‘ಕಿಸ್’ (ಕೀಪ್ ಇಟ್ ಸಿಂಪಲ್ ಸ್ವೀಟ್) ಸಿನಿಮಾವನ್ನು ನಿರ್ದೇಶಕ ಎಪಿ ಅರ್ಜುನ್ ತಮ್ಮದೇ ‘ಎ.ಪಿ ಅರ್ಜುನ್ ಫಿಲಂಸ್’ ಬ್ಯಾನರ್ಗೆ ಪಡೆದಿದ್ದಾರೆ.
ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಕಿಕ್ಕೇರಿಸುತ್ತಿದೆ. ಈ ಮೂಲಕ ಐರಾವತದ ನಂತರ ಎ.ಪಿ.ಅರ್ಜುನ್ ಮತ್ತೆ ಬಂದಿದ್ದಾರೆ. ಎ.ಪಿ. ಅರ್ಜುನ್ ಈ ವರೆಗೆ ನಿರ್ದೇಶಿಸಿರುವ ನಾಲ್ಕು ಸಿನಿಮಾಗಳಲ್ಲಿ ದರ್ಶನ್ ಅವರ ಐರಾವತ ಬಿಟ್ಟರೆ ಮಿಕ್ಕ ಅಂಬಾರಿ, ಅದ್ದೂರಿ ಮತ್ತು ರಾಟೆ ಸಿನಿಮಾಗಳಲ್ಲಿ ಹೊಸ ಹೀರೋಗಳಿದ್ದರು. ಈಗ ಅರ್ಜುನ್ ತಮ್ಮ ನಿರ್ದೇಶನದ ಐದನೇ ಚಿತ್ರ ಕಿಸ್ಗೂ ಹೊಸ ಹೀರೋನನ್ನೇ ಆಯ್ಕೆ ಮಾಡಿಕೊಂಡು ಹೊಸಾ ಬಗೆಯ ಕಥೆಯೊಂದರ ಮೂಲಕ ದೊಡ್ಡ ಗೆಲುವೊಂದರ ರೂವಾರಿಯಾಗೋ ಹುರುಪಿನಿಂದಲೇ ಈ ಚಿತ್ರವನ್ನು ರೂಪಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ, ಪುನೀತ್ ರಾಜ್ ಕುಮಾರ್ ಹಾಡಿರುವ ‘ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ’ ಹಾಡು ಎಲ್ಲೆಡೆ ಸಂಚಲನ ಸೃಷ್ಟಿಸಿದೆ.
ಈ ಚಿತ್ರಕ್ಕಾಗಿ ಅರ್ಜುನ್ ಪ್ರತಿಯೊಂದು ಪಾತ್ರಗಳಿಗೂ ಅಳೆದೂ ತೂಗಿಯೇ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿಯೂ ನಾಯಕ ನಟನನ್ನು ಆಯ್ಕೆ ಮಾಡಿದ್ದ ರೀತಿಯೇ ಅದಕ್ಕೆ ಸಾಕ್ಷಿ ಒದಗಿಸುವಂತಿದೆ. ತಮ್ಮ ಚಿತ್ರಕ್ಕೆ ಹೊಸ ಹುಡುಗರನ್ನು ಹುಡುಕುತ್ತಿರುವುದಾಗಿ ಅರ್ಜುನ್ ಅನೌನ್ಸ್ಮೆಂಟ್ ಕೊಟ್ಟಾಗ ಅವರ ಮೇಲ್ ಬಾಕ್ಸ್ಗೆ ಬಂದು ಬಿದ್ದಿದ್ದು ಬರೋಬ್ಬರಿ ನಾಲ್ಕು ಸಾವಿರದಷ್ಟು ಫೋಟೋಗಳು. ಅದರಲ್ಲಿ ನೂರಿಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡು ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ಎಂಟು ಜನ ಫೈನಲಿಸ್ಟ್ ಗಳಾಗಿದ್ದರು. ಆ ಅಂತಿಮ ಪಟ್ಟಿಯಲ್ಲಿ ಕಡೆಗೆ ಹೀರೋ ಆಗುವ ಅದೃಷ್ಟ ಒಲಿದಿದ್ದು ವಿರಾಟ್ ಎಂಬ ಯುವಕನಿಗೆ.
ವಿರಾಟ್ ಮೂಲತಃ ಮೈಸೂರು ಹುಡುಗ. ಜೊತೆ ಜೊತೆಯಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ಲೀಡ್ ರೋಲ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ವಿರಾಟ್ಗೆ ಇದು ಮೊದಲ ಅನುಭವ. ಸಿನಿಮಾಗೆ ಎಂಟ್ರಿ ಕೊಡುತ್ತಿರುವುದರ ಪೂರ್ವಭಾವಿಯಾಗಿ ಮೂರು ತಿಂಗಳಿನಿಂದ ಡ್ಯಾನ್ಸ್, ಫೈಟ್ ಮತ್ತು ಜಿಮ್ ಅನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದಾರೆ. ದುನಿಯಾ ವಿಜಿ, ಪ್ರೇಮ್, ಯಶ್ ಮುಂತಾದ ನಟರುಗಳನ್ನು ಕೋಚ್ ಆಗಿರುವ ಪಾನಿಪುರಿ ಕಿಟ್ಟಿ ಅವರೇ ವಿರಾಟ್ಗೂ ಜಿಮ್ ಗುರುಗಳಾಗಿದ್ದಾರೆ. ಈ ಚಿತ್ರದಲ್ಲಿ ವಿರಾಟ್ಗೆ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ.
ಕಿಸ್ ಸಿನಿಮಾಗೆ ‘ತುಂಟ ತುಟಿಗಳ ಆಟೋಗ್ರಾಫ್’ ಎನ್ನುವ ಅಡಿ ಬರಹ ಕೂಡಾ ಇದೆ. ‘ಕಿಸ್’ ಚಿತ್ರಕ್ಕೆ ನಾಯಕ ನಟ ಧೃವಾ ಸರ್ಜಾ ಹಿನ್ನೆಲೆ ಮಾತುಗಳನ್ನು ನೀಡಿದ್ದಾರೆ. “ಅದ್ದೂರಿ’ ಸಿನಿಮಾ ಶುರುವಾದಾಗ ನಾನು ಕೂಡಾ ಹೊಸಬನಾಗಿದ್ದೆ. ಹೊಸ ಕಲಾವಿದರನ್ನು ಪ್ರಧಾನವನ್ನಾಗಿಟ್ಟುಕೊಂಡು ಸಿನಿಮಾಗಳನ್ನು ರೂಪಿಸಿ ಗೆಲ್ಲುತ್ತಾ ಬಂದವರು ಎ.ಪಿ.ಅರ್ಜುನ್. ಈಗ ಕಿಸ್ ಮೂಲಕವೂ ಹೊಸ ನಾಯಕ-ನಾಯಕಿಯನ್ನು ಪರಿಚಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಶುಭವಾಗಲಿ” ಎಂದು ಧೃವ ಸರ್ಜಾ ಶುಭ ಕೋರಿದ್ದಾರೆ.
ಒಟ್ಟಾರೆಯಾಗಿ ಹತ್ತು ಹಲವು ಬಗೆಯಲ್ಲಿ ಕಿಸ್ ಚಿತ್ರದ ಖದರ್ ಏರಿಕೊಳ್ಳುತ್ತಿದೆ. ಅಂದಹಾಗೆ, ಕಿಸ್ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಕೆ. ರವಿವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕಿಸ್ನ ಕಿಕ್ ಏರಿಸಿದೆ. ಇಷ್ಟರಲ್ಲೇ ತೆರೆಮೇಲೆ ಬರುವ ಕಿಸ್ ಪ್ರೇಕ್ಷಕರಿಗೂ ಮಜಾ ನೀಡೋದು ಗ್ಯಾರೆಂಟಿ!
No Comment! Be the first one.