ನಿರ್ದೇಶಕ ಎ.ಪಿ. ಅರ್ಜುನ್ ಅದೇನು ಮೋಡಿ ವಿಧ್ಯೆ ಕಲಿತಿದ್ದಾರೋ ಗೊತ್ತಿಲ್ಲ. ಇವರು ನಿರ್ದೇಶಕನಾಗಿದ್ದೇ ಇಪ್ಪತ್ಮೂರನೇ ವಯಸ್ಸಿಗೆ. ಅದಕ್ಕೂ ಮುಂಚೆ ಒಂದಷ್ಟು ನಿರ್ದೇಶಕರೊಂದಿಗೆ ಕೆಲಸ ಕೂಡಾ ಮಾಡಿದ್ದರು ಅಂದರೆ, ಬಹುಶಃ ಉಂಡು, ಆಡಿ, ಹೊದ್ದು ಮಲಗೋ ವಯಸ್ಸಿಗೆಲ್ಲಾ ಸಿನಿಮಾದ ನಂಟಿಗೆ ಬಿದ್ದಿದ್ದರು ಅನಿಸುತ್ತದೆ. ಅದಕ್ಕೇ ಇರಬಹುದು ತಾವು ಯಾವುದೇ ಸಿನಿಮಾ ಮಾಡಿದರೂ ಜನ ಅದರ ಸುತ್ತಲೇ ಗಮನಹರಿಸಬೇಕು ಎನ್ನುವಷ್ಟರ ಮಟ್ಟಿಗೆ ಮೋಡಿ ಮಾಡಿರುತ್ತಾರೆ. ಅಂಬಾರಿ ಸಿನಿಮಾದಿಂದ ಶುರುವಾಗಿ ಅರ್ಜುನ್ ನಿರ್ದೇಶಿಸಿದ ಎಲ್ಲ ಚಿತ್ರಗಳೂ ಮ್ಯೂಸಿಕಲಿ ಹಿಟ್ ಅನ್ನಿಸಿಕೊಂಡಿದೆ. ಈಗಿನ ವಿಚಾರವನ್ನೇ ತೆಗೆದುಕೊಳ್ಳಿ ಯಾವುದೇ ಕಾಲೇಜು ಹುಡುಗ ಬಾಯಲ್ಲಿ, ಮೊಬೈಲ್ ರಿಂಗ್ ಟೋನ್‌ನಲ್ಲಿ, ಕನಸು, ಮನಸಲ್ಲೆಲ್ಲಾ ‘ಕಿಸ್’ ಹಾಡುಗಳೇ ಕುಣಿಯುತ್ತಿವೆ!


ಅದೂ ಒಂದಾದ ಮೇಲೊಂದರಂತೆ ನಶೆಯೇರಿಸುವ ಹಾಡುಗಳು ಬರುತ್ತಲೇ ಇವೆ. ಒಂದು ಹಾಡು ಕೇಳುಗರ ಎದೆಗೆ ಚುಚ್ಚಿಕೊಳ್ಳುತ್ತಿದ್ದಂತೇ, ಮತ್ತೊಂದು, ಮಗದೊಂದು ಅಂತಾ ಭಾವನೆಯ ಬಾಣಗಳನ್ನು ಬಿಡುತ್ತಲೇ ಇದ್ದಾರೆ. ಅದೂ ಒಂದಕ್ಕಿಂತಾ ಒಂದು ಭಿನ್ನ. ಈಗ ಲವ್ಲಿ ಸ್ಟಾರ್ ಪ್ರೇಮ್ ಐದನೇ ಹಾಡನ್ನು ರಿಲೀಸ್ ಮಾಡಿದ್ದಾರೆ. ಅದು, ನವೀನ್ ಸಜ್ಜು ಬ್ರಾಂಡಿನ ಎಣ್ಣೆ ಹಾಡು. “ಪ್ರೀತ್ಸಿದ್ ಹುಡುಗಿ ಬಿಟ್ಟೋಗ್ಬಿಟ್ರೆ ತಡ್ಕೋಬೇಕು ಮಗಾ. ಕ್ಯಾಕರಿಸಿ ಉಗಿದುಬಿಟ್ರೆ ಒರೆಸ್ಕೋಬೇಕು. ಫೀಲಿಂಗ್ ಜಾಸ್ತಿ ಆಗೋಗ್ಬಿಟ್ರೆ ಕುಡುಕ್ಕೋಬೇಕು…. ಅಂತಾ ಶುರುವಾಗಿ, ಹೃದಯ ಕೆರಕೊಂಡೋರು ಗೋಲ್ಡನ್ ಸ್ಟಾರು, ರೆಡ್ ರೋಸ್ ಹಿಡ್ಕಂಡೋರು ಕ್ರೇಜ಼ಿ ಸ್ಟಾರು, ಪ್ರೀತಿ ಬದನೇಕಾಯಿ ಅಂದೋರ್ ಸೂಪರ್ ಸ್ಟಾರು, ಸತ್ಯ ತಿಳ್ಕೊಂಡ್ ಸುಮ್ನಿದ್ದವರೇ ಸುಪರ್ ಸ್ಟಾರು” ಅನ್ನೋ ಹಾಡನ್ನು ಸ್ವತಃ ನಿರ್ದೇಶಕ ಎ.ಪಿ. ಅರ್ಜುನ್ ಬರೆದಿದ್ದು. ನವೀನ್ ಸಜ್ಜು ಮಜ್‌ಮಜವಾಗಿ ಹಾಡಿದ್ದಾರೆ.

ಈಗಾಗಲೇ ಸಜ್ಜು ಹಾಡಿರೋ ಬಹುತೇಕ ಎಣ್ಣೆ ಹಾಡುಗಳೆಲ್ಲಾ ಸೂಪರ್ ಹಿಟ್ ಆಗಿವೆ. ಈ ಹಾಡನ್ನು ನೋಡಿದರೆ ಆ ಗೆದ್ದ ಹಾಡುಗಳ ತಲೆಮೇಲೆ ಕೂರುವಂತಿದೆ. ಒಟ್ಟಾರೆ ವಿ. ಹರಿಕೃಷ್ಣ ಸಂಗೀತದ ಕಿಸ್ ಚಿತ್ರದ ಐದೂ ಹಾಡುಗಳೂ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿರುವುದರಿಂದ ಪ್ರೇಕ್ಷಕರು ಇದೇ ತಿಂಗಳ ೨೭ಕ್ಕೆ ತೆರೆಗೆ ಬರಲಿರುವ ‘ಕಿಸ್’ಗಾಗಿ ಕಾತರಿಸುವಂತಾಗಿದೆ!

 

CG ARUN

“ನಾನು ಕೈಗೆ ಹಾಕಿರುವುದು ಬಳೆ ಅಲ್ಲ ಅಂದರು ಸುದೀಪ್!

Previous article

ಎಲ್ಲಿದ್ದೆ ಇಲ್ಲೀತನಕ ಟ್ರೇಲರ್ ರಿಲೀಸ್ ಮಾಡಿದ ಒಡೆಯ!

Next article

You may also like

Comments

Leave a reply

Your email address will not be published. Required fields are marked *