ಇದುವರೆಗೂ ನೀವು ಹೊಸಬರಿಗಾಗಿ ಸಿನಿಮಾ ಮಾಡಿ ಸ್ಟಾರ್ ಮೇಕರ್ ಅನ್ನಿಸಿಕೊಂಡಿದ್ದೀರ. ಸೂಪರ್ ಸ್ಟಾರ್’ಗೂ ಸಿನಿಮಾ ಮಾಡಿದ್ದೀರ. ಈ ಬಾರಿ ಮತ್ತೆ ಹೊಸಬರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಖಂಡಿತ ನೀವು ಕೇಳಿದ ಕ್ವಶ್ಚನ್ ಕೇಳಿಯೇ ತುಂಬಾ ಖುಷಿ ಆಯ್ತು. ಸ್ಟಾರ್ ಮೇಕರ್ ಅಂತೇನಿಲ್ಲ. ಹೊಸಬರಿಗಾಗಿ ಸಿನಿಮಾ ಮಾಡುವಾಗ ಅಂದರೆ, ಲೂಸ್ ಮಾದ ಅವರಿಗಾಗಿ ಅಂಬಾರಿ ಸಿನಿಮಾ ಮಾಡಿದಾಗ ಯೋಗಿ ಹೊಸಬ, ಧ್ರುವ ಸಿನಿಮಾ ಮಾಡ್ದಾಗ ಧ್ರುವ ಹೊಸಬ. ಅದಾದಮೇಲೆ ದರ್ಶನ್ ಸರ್’ಗೆ ಅಂತ ಐರಾವತ ಸಿನಿಮಾ ಮಾಡ್ದೆ. ರಾಟೆ ಡೈರೆಕ್ಟ್ ಮಾಡಿದೆ, ಸದ್ಯ ಕಿಸ್ ಅಂತ ಸಿನಿಮಾ ಮಾಡ್ತಿದ್ದೀನಿ. ಯಾಕೆ ಹೊಸಬರಿಗೋ ಅಥವಾ ಸ್ಟಾರ್ಗೋ ಸಿನಿಮಾ ಮಾಡ್ಬೇಕು ಅಂತ ಯೋಚನೆ ಬರುತ್ತದೆ. ಆಗ ಕಥೆ ಮಾಡಬೇಕು ಅಂತ ಕೂತಾಗ ನಮಗೆ ಒನ್ ಲೈನ್ ಸ್ಟ್ರೈಕ್ ಆಗತ್ತೆ. ಇದನ್ನ ಮಾಡಿದರೆ ಸಕ್ಸಸ್ ಕಾಣಬಹುದು ಅಂತ. ಅದರಲ್ಲೂ ನಾನು ಲವ್ ಸ್ಟೋರಿ ಅಂತ ಬರೆದಾಗ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ರೀಸನ್ ಏನಪ್ಪ ಅಂದ್ರೆ ಹೊಸಬರಲ್ಲಿ ಕ್ಯೂಟ್’ನೆಸ್ ಇರುತ್ತೆ. ಜತೆಗೆ ಸಿನಿಮಾ ಪೂರ್ತಿ ಅವರು ಹೇಗೆ ಪರ್ಫಾರ್ಮ್ ಮಾಡ್ತಾರೆ ಅನ್ನೋದು ಯಾರಿಗೂ ಗೊತ್ತಿರುವುದಿಲ್ಲ. ಯಾವುದೇ ಸಿನಿಮಾ ಮಾಡದವರು ಮಾಡ್ದಾಗ ಅವರ ನಗು, ಅವರು ಹೇಳೋ ಯಾವುದೋ ಒಂದು ಡೈಲಾಗು, ಅವರ ನೋಟ ಪ್ರೇಕ್ಷಕರಿಗೆ ಇಷ್ಟ ಆಗಬಹುದು. ನೋಡುವಂತವರಿಗೆ ಅವರು ಯಾವ ರೀತಿ ಹೇಳ್ತಾರೆ. ಹೇಗೆ ನಟಿಸುತ್ತಾರೆ ಅನ್ನೋದೆ ಗೊತ್ತಿರೋದಿಲ್ಲ. ಅಂಥಾ ಸಂದರ್ಭದಲ್ಲಿ ಹೊಸ ಹುಡುಗ ಹುಡುಗಿ ಅಂದಾಗ ಜಾಸ್ತಿನೇ ಕನೆಕ್ಟ್ ಆಗ್ತಾರೆ. ಅವರಿಗೆ ಯಾವುದೇ ರೀತಿ ನಿರೀಕ್ಷೆಗಳಿರಲ್ಲ. ಫ್ಯಾನ್ಸ್ ಫಾಲೋಯಿಂಗ್’ಗಳಿರೋದಿಲ್ಲ. ಆದರೆ ಒಳ್ಳೆ ಸಿನಿಮಾ ಆದಾಗ ಎಲ್ಲರೂ ಅಪ್ರಿಸಿಯೇಷನ್ ಮಾಡುತ್ತಾರೆ. ನನ್ನ ಲವ್ ಸ್ಟೋರಿಗಳಿಗೆ ಹೊಸಬರು ಕಂಫರ್ಟಬಲ್ ಅನ್ನಿಸುತ್ತೆ. ಯಾಕಂದ್ರೆ ಡೇಟ್ ಸಮಸ್ಯೆಗಳಿರೋರಲ್ಲ. ಏನೂ ಪ್ರಾಬ್ಲಂ ಇರೋಲ್ಲ. ನಾವು ಅವರತ್ರ ನಮಗೆ ಬೇಕಾದ ಹಾಗೆ ಆಕ್ಟ್ ಮಾಡಿಸಿಕೊಳ್ಳಬಹುದು. ಮೇಲಾಗಿ ಆ ಕಥೆ ಕೇಳುತ್ತೆ ಹೊಸಬರು ಬೇಕಾ ಇಲ್ಲ ಸ್ಟಾರ್ ಬೇಕಾ ಅಂತ. ಸ್ಟಾರ್ ಬೇಕು ಅಂತೇಳುವ ಸಿನಿಮಾವನ್ನು ಹೊಸಬರ ಜತೆ, ಹೊಸಬರು ಬೇಕೆನ್ನುವ ಸಿನಿಮಾಗಳನ್ನು ಸ್ಟಾರ್ ಜತೆ ಮಾಡೋಕೂ ಸಾಧ್ಯವಿಲ್ಲ.
ವಿರಾಟ್ ಮತ್ತು ಶ್ರೀ ಲೀಲಾ – ಈ ಇಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣಳು ಏನು?
೨. ವಿರಾಟ್’ನ ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲನೇ ಕಾರಣ ನಮ್ಮ ಅಮ್ಮ. ನಮ್ಮ ಅಮ್ಮಾನೇ ಹೇಳಿದ್ದು. ಅವನು ೪೦- ೫೦ ಸಾರಿ ಮನೆಗೆ ಬಂದಿದ್ದನಂತೆ. ಅವನನ್ನು ನೋಡಿ ನಮ್ಮ ಅಮ್ಮ ನನಗೆ ಒಬ್ಬ ಹುಡುಗ ಇದ್ದಾನೆ. ಕಣ್ಣು, ಮೂಗು ಎಲ್ಲ ಚೆನ್ನಾಗಿದೆ. ಅವನು ನಿನ್ನ ಜತೆ ಸಿನಿಮಾ ಮಾಡ್ಬೇಕಂತೆ. ಅಂತ ಹೇಳಿದ್ರು. ಆಗ ನಾನು ಆಡಿಷನ್ ಶುರುವಾಗತ್ತೆ. ಆಡಿಷನ್’ಗೆ ಬರೋದಕ್ಕೆ ಹೇಳು. ಅಲ್ಲಿ ನೋಡೋಣ ಅಂತ ಹೇಳಿದ್ದೆ. ೨೦೦/೩೦೦ ಜನ ಬಂದಿದ್ರು. ಅದರಲ್ಲಿ ಟಾಪ್ ೨೦ ಸೆಲೆಕ್ಟ್ ಆದ್ರು. ಅದರಲ್ಲಿ ೫ ಜನ ಫೈನಲ್ ಆದ್ರು. ಅದರಲ್ಲಿ ಅವನೂ ಇದ್ದ. ನಮ್ಮ ಅಮ್ಮ ಹೇಳಿದ್ರು ಅನ್ನೋ ಜತೆಗೆ ಅವನಿಗೆ ಡ್ಯಾನ್ಸ್, ಪರ್ಫಾಮೆನ್ಸ್’ನಲ್ಲಿ ಒಂದು ಎನರ್ಜಿ ಇತ್ತು. ಮತ್ತೆ ಎಲಿಜಬಿಲಿಟಿ ಇತ್ತು. ಅದನ್ನೂ ಮೀರಿ ಅವನು ಹೀರೋ ಆಗಿದ್ದಾನೆ ಅಂದರೆ ಎಲ್ಲ ಕ್ರೆಡಿಟ್ಟು ನಮ್ಮಮ್ಮನಿಗೆ ಹೋಗ್ಬೇಕು.
ಇದು ಹೀರೋ ಕಥೆ.
ಇನ್ನು ಹಿರೋಯಿನ್ ಸೆಲೆಕ್ಷನ್ ಗಾಗಿ ಬಾಂಬೆಗೆ ಹೋಗಿದ್ವಿ. ಒಂದಿಬ್ಬರು ಸೆಲೆಕ್ಟ್ ಆಗಿದ್ದರು. ಆದರೆ ಅವರು ಡೈಲಾಗ್ ಹೇಳ್ದಾಗ ಎಕ್ಸ್’ಪ್ರೆಷನ್ ಗೊತ್ತಾಗುತ್ತಿರಲಿಲ್ಲ. ನನ್ನ ಸಿನಿಮಾಗಳಲ್ಲಿ ಸ್ಟ್ರಕ್ಚರ್ ಡೈಲಾಗ್ ಜಾಸ್ತಿಯಾಗಿರುತ್ತೆ. ಅದನ್ನು ಫ್ಲೂಯೆಂಟ್ ಆಗಿ ವಿತ್ ಎಕ್ಸ್ಪ್ರೆಷನ್ ಹೇಳಬೇಕಿರುತ್ತೆ. ಬೇರೆ ಭಾಷೆಯವರಿಗೆ ಅದು ಕಷ್ಟ ಆಗತ್ತೆ ಅಂತ ನಾವು ಹುಡುಕುತ್ತಿದ್ದೆವು. ಯಾರಿದ್ದಾರೆ ಅಂತ… ಎಲ್ಲ ಆಗಿ ನಾವು ಶೂಟಿಂಗ್ ಹೋಗ್ಬೇಕು. ಆ ಟೈಮ್ ನಲ್ಲಿ ಕೆಜಿಎಫ್ ಕ್ಯಾಮೆರಾ ಮೆನ್ ಭುವನ್ ಮಾಡಿದ್ದ ಫೋಟೋ ಶೂಟ್’ನಲ್ಲಿ ಅವರ ಫೋಟೋ ನೋಡ್ದೆ. ಚೆನ್ನಾಗಿದೆ ಹುಡುಗಿ ಅಂತೇಳಿ. ಭುವನ್’ಗೆ ಹೇಳಿ ಶ್ರೀಲೀಲಾ ಸೆಲೆಕ್ಟ್ ಮಾಡಿದ್ವಿ.
ಈ ಸಿನಿಮಾದಲ್ಲಿನ ವಿಶೇಷತೆಗಳೇನು? ಈ ಚಿತ್ರವನ್ನು ಜನ ಯಾಕೆ ನೋಡಲೇಬೇಕು ಅನ್ನೋದು ನಿಮ್ಮ ಅನಿಸಿಕೆ?
ಖಂಡಿತ ನಿರ್ದೇಶಕನಾಗಿ ಕಿಸ್ ಆತ್ಮತೃಪ್ತಿಯನ್ನು ಕೊಟ್ಟ ಸಿನಿಮಾ. ನನಗೆ ಹೆಂಗೆ ಬೇಕೋ ಆ ರೀತಿ ಮಾಡಿರುವ ಸಿನಿಮಾ. ಹತ್ತಿರತ್ತಿರ ೧೦೨ ದಿನ ಶೂಟ್ ಮಾಡಿದ್ದೀವಿ. ಮತ್ತು ತುಂಬಾ ಬಜೆಟ್ ಆಗಿದೆ. ಎಲ್ಲ ಮೀರಿ ತುಂಬಾ ಶ್ರಮ ಹಾಕಿದಕ್ಕೆ ಮನಸ್ಸಿಗೆ ನೆಮ್ಮದಿ ಇದೆ. ಯಾವುದನ್ನು ಹೇಗೆ ಬೇಕೋ ಹಾಗೇ ಇಷ್ಟ ಪಟ್ಟ ಜಾಗಗಳಲ್ಲಿ ಶೂಟ್ ಮಾಡಿದ್ದೀನಿ ಅಂತ. ನಿರ್ದೇಶಕನಾಗಿ ಈ ಸಿನಿಮಾಗೆ ಏನು ನ್ಯಾಯ ಒದಗಿಸಬೇಕೋ ಎಲ್ಲ ಮಾಡಿದ್ದೀನಿ. ಬಟ್ ನಿರ್ಮಾಪಕನಾಗಿ ಬಂದಾಗ ಹೊಸ ಹುಡುಗ ಹುಡುಗಿಗೆ ೭/೮ ಕೋಟಿ ಬಜೆಟ್ ಹೇಗೆ ಹಾಕಿದ್ರಿ ಅಂತ ಕೇಳಬಹುದು. ಹೊಸ ಹುಡುಗ ಹುಡುಗಿ ಅನ್ನೋದಕ್ಕಿಂತ ಹೆಚ್ಚಾಗಿ ಕಥೆ ಏನು ಕೇಳುತ್ತೋ ಅದನ್ನು ನಿರ್ಮಾಪಕನಾಗಿ ಕೊಟ್ಟಿದ್ದೇನೆ. ಮತ್ತೊಂದು ನಿರ್ಮಾಪಕನಾಗಿ ನಿಜವಾಗಲೂ ಖುಷಿ ಇದೆ. ನಾನು ನಿರ್ದೇಶಕನಾಗಿ ಬೇರೆ ನಿರ್ಮಾಪಕರ ಬಳಿ ಏನೇನ್ ಕೇಳಿ ಪಡೆದುಕೊಳ್ಳುತ್ತಿದ್ದೆನೋ ಅದಕ್ಕಿಂತಾ ಹೆಚ್ಚಾಗಿ ಯಾವ ಫ್ರೇಮ್ ನಲ್ಲೂ ಕಾಂಪ್ರಮೈಸ್ ಆಗದೇ ಮಾಡಿರೋ ಸಿನಿಮಾ ಇದು. ಅದಕ್ಕೇ ಕಿಸ್ ನನಗೆ ನಿರ್ದೇಶಕನಾಗಿ ಹೆಚ್ಚು ಖುಷಿ ಕೊಡೋದು…
No Comment! Be the first one.