ಇದೊಂದು ಫುಲ್ ಎಂಟರ್ ಟೈನ್ ಸಿನಿಮಾ. ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ. ಎಮೋಷನ್ ಬಂದಾಗ ಎಮೋಷನ್ ಕೂಡ ತುಂಬ ಇದೆ. ಒಂದು ಕಾಲೇಜು ಲವ್ ಸ್ಟೋರಿ. ನೀವೇನಾದ್ರೂ ಕಾಲೇಜ್ ನಲ್ಲಿ ಇದ್ರೆ ನಿಮಗೂ ಕನೆಕ್ಟ್ ಆಗುತ್ತೆ. ಮದುವೆ ಆಗಿದ್ರೆ ನಿಮ್ಮ ಕಾಲೇಜ್ ಟೈಮ್ ನೆನೆಸಿಕೊಳ್ತೀರಾ… ಯಾವುದೇ ಟೆನ್ಶನ್ ನಲ್ಲಿದ್ದು ಸಿನಿಮಾಕ್ಕೆ ಬಂದ್ರೆ ತುಂಬಾ ಎಂಜಾಯ್ ಮಾಡ್ತೀರಾ.. ನಿಮ್ಮ ಆಶೀರ್ವಾದ ನಮಗೆ ಬೇಕು. ಯಾರೂ ಮಿಸ್ ಮಾಡ್ದೆ ನಮ್ ಕಿಸ್ ಸಿನಿಮಾಗೆ ಕಿಸ್ ಕೊಡಿ
1. ಕನಸಲ್ಲಿ ಡ್ರೀಮ್ ಬಾಯ್ ಬಂದಿದ್ದಾನಾ?
ಖಂಡಿತವಾಗಲೂ ಬರ್ತಾನೆ. ಆದರೆ ಸಿನಿಮಾದಲ್ಲಿ ತೋರಿಸ್ತಾರಲ್ಲ, ಹಾಗೆ ಬರೀ ಶ್ಯಾಡೋ ಮಾತ್ರ ಬರೋದು. ಸರಿಯಾಗಿ ಫೋಕಸ್ ಆಗ್ತಿಲ್ಲ. ಆಗೋಕು ಟೈಮ್ ಇದೆ. ನಿದ್ದೆಯಿಂದ ಎದ್ದಮೇಲೂ ರೀ ಕಾಲ್ ಮಾಡ್ಕೊಳ್ಳೋದಕ್ಕೆ ಟ್ರೈ ಮಾಡಿದ್ದೀನಿ. ಆದರೆ ನೆನಪಾಗ್ತಿಲ್ಲ.
2. ಬಾಯ್ ಫ್ರೆಂಡ್ ಕ್ವಾಲಿಟೀಸ್
ಫಸ್ಟ್ ವೆರಿ ಇಂಪಾರ್ಟೆಂಟ್ ತುಂಬಾ ಚೆನ್ನಾಗಿ ನೋಡ್ಕೋಬೇಕು. ನಾನ್ ಹೇಳಿದ ಮಾತನ್ನು ಕೇಳಬೇಕು. ಅಕಸ್ಮಾತ್ ಏನಾದ್ರು ಜಗಳ ಆದ್ರೂ ಅವರೇ ಬಂದು ಸಾರಿ ಹೇಳಬೇಕು. ನಾನು ಮಾಡಿದ ಅಡುಗೆ ಓಕೆ ಓಕೆ ಆಗಿದ್ರೂ ಸೂಪರ್ ಅನ್ಬೇಕು. ನನಗೆ ಚಾಕ್ ಲೇಟ್ ಅಂದ್ರೆ ತುಂಬಾ ಇಷ್ಟ. ನನಗೆ ಯಾವಾಗಲೂ ಚಾಕೋಲೇಟ್ ತಂದುಕೊಡಬೇಕು. ಗಿಫ್ಟ್ ಎಲ್ಲ ಏನೂ ಬೇಡ. ನನಗೆ ಕೋಪ ಬಂದಾಗ ಒಂದು ಚಾಕೋಲೇಟ್ ಕೊಟ್ರೆ ಐಸ್ ಕ್ರೀಮ್ ಥರ ಕರಗಿಬಿಡ್ತೀನಿ. ನಾನ್ ಫೋನ್ ಕಟ್ ಮಾಡೋಕ್ ಮುಂಚೆ ಕಟ್ ಮಾಡ್ಬಾರ್ದು. ನಾನು ಕಾರ್ ಹತ್ತೋವಾಗ ಕಾರ್ ಡೋರ್ ತೆಗೆಯಬೇಕು. ನನಗೆ ಸಿನಿಮಾ ನೋಡ್ಬೇಕು ಅನ್ಬಿಸ್ದಾಗ ಸಿನಿಮಾಗೆ ಕರೆದುಕೊಂಡು ಹೋಗಬೇಕು.
3. ಕಿಸ್ ಮೊದಲ ಹಾಡು ಹಿಟ್ ಬಗ್ಗೆ
ತುಂಬಾ ಖುಷಿ ಆಗುತ್ತೆ. ನನ್ನ ಮೊದಲನೇ ಹಾಡು ನೀನೇ ಮೊದಲು ನೀನೇ ಕೊನೆ. ಶ್ರೇಯಾ ಘೋಷಾಲ್ ಹಾಡಿದ್ದಾರೆ. ೯ ಮಿಲಿಯನ್ ಹಿಟ್ಸ್ ಕ್ರಾಸ್ ಆಗುತ್ತಿದೆ. ಜನ ತುಂಬಾ ಚೆನ್ನಾಗಿ ಅಕ್ಸೆಪ್ಟ್ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಹಿಟ್ ಮಾಡಿದ್ದಾರೆ. ತುಂಬಾ ಖುಷಿಯಾಗುತ್ತೆ. ಟಿಕ್ ಟಾಕ್ ನಲ್ಲಿ ನನ್ನ ಸಾಂಗ್ ಅಂತ ನೋಡ್ದಾಗ ತುಂಬ ಹೆಮ್ಮೆ ಆಗುತ್ತೆ. ಇನ್ನೂ ಮೂರು ಹಾಡು ಬಿಡುಗಡೆಯಾಗಬೇಕು. ಅಷ್ಟೇ ಮಟ್ಟಕ್ಕೆ ಹಾಡು ಹಿಟ್ ಮಾಡ್ತಾರೆ ಅಂತ ಅಂದ್ಕೊಂಡಿದ್ದೀನಿ.
4. ಕಿಸ್ ವಿಶೇಷತೆ
ಮೊಟ್ಟ ಮೊದಲನೆಯದಾಗಿ ಎ.ಪಿ. ಅರ್ಜುನ್ ಡೈರೆಕ್ಷನ್. ಅವರೇ ಡೈಲಾಗ್ಸ್ ಬರೆದಿದ್ದಾರೆ. ಎಲ್ಲ ಡೈಲಾಗುಗಳು ಪಂಚಿಂಗ್ ಆಗಿದೆ. ಈ ತರ ಲವ್ ಸ್ಟೋರಿ ಬರೋಕೆ ತುಂಬ ಟೈಮ್ ಆಗಿದೆ. ಪ್ರತಿ ಸೀನು ಮಜವಾಗಿದೆ. ಚಿಕ್ಕಣ್ಣ ಅವರ ಕಾಮಿಡಿ, ಸಾಧು ಕೋಕಿಲಾ ಕಾಮಿಡಿ, ದತ್ತಣ್ಣ ಅವರ ಎಮೋಷನಲ್ ಸೀನ್ಸ್ ಚೆನ್ನಾಗಿದೆ. ಯಾವ ಆ?ಯಂಗಲ್ ನಲ್ಲೂ ಇದು ಡೆಬ್ಯೂ ಸಿನಿಮಾ ಅಂತ ಅನ್ನಿಸೋಲ್ಲ. ಬಜೆಟ್ ಆಗಿರಬಹುದು, ಸಾಂಗ್ ಶೂಟ್ ಮಾಡಿರೋ ಪ್ಲೇಸ್ ಆಗಿರಬಹುದು ಯಾವುದರಲ್ಲೂ ರಾಜಿ ಆಗಿಲ್ಲ.
5. ಕಿಸ್ ಅಂದ್ರೆ
ನನ್ನ ಪ್ರಕಾರ ಕಿಸ್ ಅಂದ್ರೆ ಎರಡು ಇಂಡಿವಿಷಲ್ ನಡುವೆ ನಡೆಯುವ ಲವ್ ಆಗಿರಬಹುದು, ರಿಲೇಷನ್ ಶಿಪ್ ಎನಿಥಿಂಗ್. ಬರೀ ಹುಡುಗ ಹುಡುಗಿ ನಡುವೆ ಮಾತ್ರ ಅಲ್ದೇ ಅಪ್ಪ ಮಗಳು, ಅಮ್ಮ ಮಗಳು, ಅಮ್ಮ ಮಗನಿಗೆ ಅಶುರೆನ್ಸ್ ಕೊಟ್ಟ ಹಾಗೆ. ಸೀಲ್ ಕೊಟ್ಟ ಹಾಗೆ. ಕಿಸ್ ಅಂದ್ರೆ ಯಾರಿಗೆಂದರೆ ಅವರಿಗೆ ಕೊಡೋದಲ್ಲ. ಒಬ್ಬರು ಸ್ಪೆಷಲ್ ಪರ್ಸನ್ನಿಗೆ ಕೋಡೋ ಎ ಫ್ರೆಶ್ ಗಿಫ್ಟ್.
6. ಸಿನಿಮಾ ಬಗ್ಗೆ
ಇದೊಂದು ಫುಲ್ ಎಂಟರ್ ಟೈನ್ ಸಿನಿಮಾ. ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ. ಎಮೋಷನ್ ಬಂದಾಗ ಎಮೋಷನ್ ಕೂಡ ತುಂಬ ಇದೆ. ಒಂದು ಕಾಲೇಜು ಲವ್ ಸ್ಟೋರಿ. ನೀವೇನಾದ್ರೂ ಕಾಲೇಜ್ ನಲ್ಲಿ ಇದ್ರೆ ನಿಮಗೂ ಕನೆಕ್ಟ್ ಆಗುತ್ತೆ. ಮದುವೆ ಆಗಿದ್ರೆ ನಿಮ್ಮ ಕಾಲೇಜ್ ಟೈಮ್ ನೆನೆಸಿಕೊಳ್ತೀರಾ… ಯಾವುದೇ ಟೆನ್ಶನ್ ನಲ್ಲಿದ್ದು ಸಿನಿಮಾಕ್ಕೆ ಬಂದ್ರೆ ತುಂಬಾ ಎಂಜಾಯ್ ಮಾಡ್ತೀರಾ..ನಾವೆಲ್ಲ ಸೇರಿ ಮಾಡಿರೋ ಮುದ್ದಾದ ಸಿನಿಮಾವನ್ನು ಹರಸಿ ಹಾರೈಸಿ. ನಿಮ್ಮ ಆಶೀರ್ವಾದ ನಮಗೆ ಬೇಕು. ಯಾರೂ ಮಿಸ್ ಮಾಡ್ದೆ ನಮ್ ಕಿಸ್ ಸಿನಿಮಾಗೆ ಕಿಸ್ ಕೊಡಿ
CG ARUN

ಅಭಿಮಾನವನ್ನು ಅರ್ಥಪೂರ್ಣಗೊಳಿಸಿದ ಡಿ ಕಂಪನಿ

Previous article

ನ್ಯೂರಾನ್ ಬಗ್ಗೆ ಏನಂದರು ದರ್ಶನ್?

Next article

You may also like

Comments

Leave a reply

Your email address will not be published. Required fields are marked *