ಶೀಲಾ ಸುಶೀಲ ಹಾಡಿನಿಂದಲೇ ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಖದರ್ ಮಿರುಗುತ್ತಿದೆ. ಇದೊಂದು ಹಾಡು ವೈರಲ್ ಆದ ರೀತಿ, ಅದಕ್ಕೆ ಸಿಕ್ಕ ಪ್ರಶಂಸೆ ಮತ್ತು ಈ ಮೂಲಕವೇ ಈ ನಸಿನಿಮಾ ಬಗ್ಗೆ ಹುಟ್ಟುಕೊಂಡಿರೋ ಕಾತರ ಬೆರಗಾಗುವಂಥಾದ್ದು. ಇದೇ ಹೊತ್ತಲ್ಲಿ ಕಿಸ್ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿಕೊಂಡು ಪೋಸ್ಟ್ ಪ್ರ್ರೊಡಕ್ಷನ್ ಹಂತದಲ್ಲಿದೆ. ಇದೀಗ ಕಿಸ್ ಚಿತ್ರದ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಅರ್ಜುನ್ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ. ರವಿಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಕಿಸ್. ಇದರ ನಾಯಕ ನಾಯಕಿಯರಿಬ್ಬರೂ ಹೊಸಬರೇ. ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಕಾಸು ಹೂಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ ರವಿಕುಮಾರ್ ಮಾತ್ರ ತುಂಬು ಭರವಸೆಯಿಂದ ಎಂಥವರೂ ಬೆರಗಾಗುವಂಥಾ ದೊಡ್ಡ ಬಜೆಟ್ಟಿನಲ್ಲಿ ಅದ್ದೂರಿಯಾಗೇ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಅವರ ಈ ಔದಾರ್ಯದಿಂದಲೇ ಕಿಸ್ ಈ ಪಾಟಿ ಖದರ್ನಿಂದ ಅಖಾಡಕ್ಕಿಳಿಯಲು ಅಣಿಯಾಗಿದೆ ಎಂಬುದು ಎ.ಪಿ ಅರ್ಜುನ್ ಅಭಿಪ್ರಾಯ. ಇದರೊಂದಿಗೇ ಕಿಸ್ ಬಗ್ಗೆ ಒಂದಷ್ಟು ವಿಚಾರಗಳನ್ನವರು ಹಂಚಿಕೊಂಡಿದ್ದಾರೆ.
ಕಿಸ್ ಅಂದರೆ ಎಂಥವರಿಗೂ ಪರಿಚಿತ ವಿಚಾರ. ಈ ಪದ ಕ್ಯಾಚಿ ಆಗಿರೋದರಿಂದ, ಬೇಗನೆ ಎಲ್ಲರಿಗೂ ಕನೆಕ್ಟ್ ಆಗೋದರಿಂದ ಈ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಹಾಗಂತ ಕಥೆಗೂ ಕಿಸ್ಸಿಗೂ ಕನೆಕ್ಷನ್ ಇಲ್ಲ ಅಂದುಕೊಳ್ಳುವಂತಿಲ್ಲ. ಈ ಇಡೀ ಕಥೆಯ ಆತ್ಮವೇ ಕಿಸ್. ಯುವ ಹುಮ್ಮಸ್ಸಿನ ಕಥೆ ಹೊಂದಿದೆಯಾದರೂ ನವ ಯುವಕರಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು. ಒಟ್ಟಾರೆ ಚಿತ್ರದಲ್ಲಿ ಯಾವ ಥರದ ವಲ್ಗಾರಿಟಿಯ ಸುಳಿವೂ ಇಲ್ಲ ಎಂಬುದು ಅರ್ಜುನ್ ಭರವಸೆ.
#