ಕಿಸ್: ಎರಡನೇ ಹಾಡಿನದ್ದು ರೊಮ್ಯಾಂಟಿಕ್ ಮೂಡು!

 

 

ರಾಷ್ಟ್ರಕೂಟ ಫಿಲಂಸ್ ಬ್ಯಾನರಿನಡಿ ನಿರ್ಮಾಣಗೊಂಡಿರೋ ಚಿತ್ರ ಕಿಸ್. ಹೊಸಬರೇ ನಾಯಕ ನಾಯಕಿಯರಾಗಿರೋ ಈ ಸಿನಿಮಾ ಶೀಲ ಸುಶೀಲ ಎಂಬ ಹಾಟಿನ ಮೂಲಕವೇ ಹರಡಿರೋ ಕ್ರೇಜ್ ಸಣ್ಣದೇನಲ್ಲ. ಹೀಗಿರುವಾಗಲೇ ನಿರ್ದೇಶಕ ಎ ಪಿ ಅರ್ಜುನ್ ಮತ್ತೊಂದು ಮಧುರವಾದ ಹಾಡನ್ನು ಬಿಡುಗಡೆಗೊಳಿಸಿದ್ದಾರೆ!

ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಎರಡನೇ ಹಾಡನ್ನು ಅನಾವರಣಗೊಳಿಸಿದ್ದಾರೆ. ಶ್ರೇಯಾ ಘೋಶಾಲ್ ಹಾಡಿರೋ ನೀನೇ ಮೊದಲು ನೀನೇ ಕೊನೆ ಅಂತ ಆರತಂಭವಾಗೋ ಈ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಜನಪ್ರಿಯಗೊಳ್ಳುತ್ತಿದೆ. ವಿಶೇಷವೆಂದರೆ ಸದಾ ಹೊಸಬರಿಗೇ ಅವಕಾಶ ಕೊಡುತ್ತಾ ಬಂದಿರೋ ಅರ್ಜುನ್ ಈ ಹಾಡಿನ ಮೂಲಕ ಯುವ ಸಂಗೀತ ನಿರ್ದೇಶಕನೊಬ್ಬನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

 

ಆತ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣರ ಪುತ್ರ ಆದಿತ್ಯ. ಇನ್ನೂ ಹದಿನೆಂಟರ ಹರೆಯದ ಆದಿತ್ಯ ಈ ಹಾಡಿನ ಮೂಲಕ ತಂದೆಯ ಹಾದಿಯಲ್ಲಿಯೇ ಸಾಗೋ ಸೂಚನೆ ನೀಡಿದ್ದಾನೆ. ಇನ್ನುಳಿದಂತೆ ಈ ಹಾಡಿಗೆ ಎ ಪಿ ಅರ್ಜುನ್ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇದರಲ್ಲಿ ವಿರಾಟ್ ಮತ್ತು ಶ್ರೀಲೀಲಾ ಪಕ್ಕಾ ರೊಮ್ಯಾಂಟಿಕ್ ಮೂಡಿನಲ್ಲಿ ಮುದ್ದಾಗಿ ನಟಿಸಿದ್ದಾರೆ. ಸುಂದರ ಲೊಕೇಷನ್ನುಗಳೂ ಕೂಡಾ ಸೆಳೆಯುವಂತಿವೆ.

  #


Posted

in

by

Tags:

Comments

Leave a Reply