ಈಗ ಎಲ್ಲೆಲ್ಲೂ ಕಿಸ್ ಸಿನಿಮಾದ ಶೀಲ ಸುಶೀಲ ಸಾಂಗಿನದ್ದೇ ಅಬ್ಬರ. ನಿರ್ದೇಶಕ ಎ ಪಿ ಅರ್ಜುನ್ ಯುವ ಬಳಗವನ್ನೆಲ್ಲ ವರ್ಷಾರಂಭದಲ್ಲಿಯೇ ಹುಚ್ಚೆದ್ದು ಕುಣಿಯುಂತೆ ಮಾಡಿಬಿಟ್ಟಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಚನದಲ್ಲಿ ವಿ.ರವಿಕುಮಾರ್ ನಿರ್ಮಾಣ ಮಾಡಿರುವ ಈ ಕಿಸ್ ಚಿತ್ರ ಈ ಹಾಡು ಯೂಟ್ಯೂಬಲ್ಲಿ ಮಾಡಿರೋ ದಾಖಲೆ, ಅದಕ್ಕೆ ಪ್ರೇಕ್ಷಕರ ಕಡೆಯಿಂದ ಕೇಳಿ ಬರುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆಗಳೆಲ್ಲ ಕನ್ನಡ ಚಿತ್ರರಂಣಗದ ಪಾಲಿಗೆ ಹೊಸಾ ವರ್ಷಾರಂಭವನ್ನು ರೋಮಾಂಚಕವಾಗಿಸಿದೆ!
ಶೀಲ ಸುಶೀಲ ಡೋಂಟುವರಿ ಎಂಬ ಈ ಹಾಡನ್ನು ಯುವ ಸಮುದಾಯ ಆನಂದಿಸುತ್ತಿದೆ. ಅದರ ವೇಗ ಎಂಥಾದ್ದೆಂಬುದಕ್ಕೆ ಯೂಟ್ಯೂಬ್ನಲ್ಲಿ ಸಿಕ್ಕಿರೋ ವೀಕ್ಷಣೆಯೇ ಸಾಕ್ಷಿ. ಈ ಹಾಡು ಬಿಡುಗಡೆಯಾಗಿ ಒಂದು ದಿನವಾಗೋದರೊಳಗೆ ಬರೋಬ್ಬರಿ ಮೂರು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಆ ಸಂಖ್ಯೆ ಬೆಳೆಯುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ಈ ಅದ್ಭುತವಾದ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್ ಅವರೇ ಬರೆದಿದ್ದಾರೆ. ಇದಕ್ಕೆ ಕಿಕ್ಕೇರಿಸುವಂಥಾ ಸಂಗೀತ ನೀಡಿರುವವರು ವಿ ಹರಿಕೃಷ್ಣ. ಈ ಮೂಲಕವೇ ಅವರೂ ಕೂಡಾ ಫಾರ್ಮ್ಗೆ ಮರಳಿರೋ ಸೂಚನೆ ದಟ್ಟವಾಗಿಯೇ ಸಿಗುತ್ತಿದೆ.
ಈಗ ಬಿಡುಗಡೆಯಾಗಿರೋದು ವೀಡಿಯೋ ಸಾಂಗ್. ಇದರ ದೃಷ್ಯ ಶ್ರೀಮಂತಿಕೆ ನಿಜಕ್ಕೂ ಬೆರಗಾಗಿಸುವಂತಿದೆ. ಹಾಡೆಂದರೆ ವಿದೇಶಗಳಲ್ಲಿ ಚಿತ್ರೀಕರಣ ಮಾಡಿದರೇನೇ ರಿಚ್ ಆಗಿ ಮೂಡಿ ಬರುತ್ತದೆ ಅಂತೊಂದು ನಂಬಿಕೆಯಿದೆ. ಆದರೆ ನಮ್ಮಲ್ಲಿನ ಮೋಹಕವಾದ ಲೊಕೇಷನ್ನುಗಳಲ್ಲಿಯೇ ಚಿತ್ರೀಕರಣಗೊಂಡಿರೋ ಈ ಹಾಡು ಯಾವುದಕ್ಕೂ ಕಮ್ಮಿಯೇನಿಲ್ಲ. ಅತೀ ಎತ್ತರದ ಹೆಲಿಪ್ಯಾಡ್ ಸೇರಿದಂತೆ ಸುಂದರ ಪ್ರದೇಶಗಳಲ್ಲಿ ಸುಶೀಲ ಹಾಡನ್ನು ಮಾಡಕವಾಗಿ, ಮೈ ನವಿರೇಳುವಂತೆ ರೂಪಿಸಲಾಗಿದೆ.
ಸಿನಿಮಾ ಅಂದ ಮೇಲೆ ಹೀರೋ ಇಂಟ್ರಾಡಕ್ಷನ್ ಹಾಡು ಅಬ್ಬರದಿಂದ ಮೂಡಿ ಬರೋದು ಕಾಮನ್. ಆದರೆ ಶೀಲ ಸುಶೀಲ ಹಾಡಿನಲ್ಲಿ ನಾಯಕಿಯನ್ನು ಡಿಫರೆಂಟಾಗಿಯೇ ಪರಿಚಯಿಸಲಾಗಿದೆ. ರ್ಯಾಪರ್ ಚಂದನ್ ಶೆಟ್ಟಿ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇದು ಚಂದನ್ ಪಾಲಿಗೂ ಹೊಸಾ ಹಾದಿ ತೆರೆಯೋದರಲ್ಲಿಯೂ ಸಂದೇಹವೇನಿಲ್ಲ. ಈ ಸಾಂಗ್ ಸೇರಿದಂತೆ ಇಡೀ ಚಿತ್ರವನ್ನು ಅದ್ದೂರಿಯಾಗಿ ರೂಪಿಸಿದ್ದರ ಹಿಂದೆ ರಾಷ್ಟ್ರಕೂಟ ಪಿಕ್ಚರ್ಸ್ನ ವಿ. ರವಿಕುಮಾರ್ ಅವರ ಶ್ರಮ ಮತ್ತು ಸಾಹಸಗಳಿವೆ. ಅದಕ್ಕೆ ನಿರ್ದೇಶಕ ಎ ಪಿ ಅರ್ಜುನ್ ಸಾಥ್ ನೀಡಿದ್ದಾರೆ. ಈ ಹಾಡಿನ ಮೂಲಕವೇ ಕಿಸ್ ಚಿತ್ರ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ. ಇದು ಮೊದಲ ಹಾಡು. ಇನ್ನು ವಾರಕ್ಕೊಂಸದೊಂದು ಹಾಡುಗಳನ್ನು ಬಿಡುಗಡೆ ಮಾಡೋ ಪ್ಲ್ಯಾನು ಚಿತ್ರತಂಡದ್ದು.
#
No Comment! Be the first one.