ಬಾಲಿವುಡ್ ತಾರೆಯರಾದ ಕಿಯಾರ ಅದ್ವಾನಿ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಶೇರ್ ಷಾ ಚಿತ್ರದ ಮೊದಲನೇ ಹಂತದ ಶೂಟಿಂಗ್ ಮುಗಿಸಿ ರಿಲೀಫ್ ಆಗಿದ್ದಾರೆ. ಈ ಮಧ್ಯೆ ಸಿದ್ಧಾರ್ಥ ಮಲ್ಹೋತ್ರ ಮತ್ತು ಕಿಯಾರ ಅದ್ವಾನಿ ಡೇಟ್ ಮಾಡುತ್ತಿದ್ದಾರೆಂಬ ರೂಮರ್ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಸದ್ಯ ತೆಲುಗು ಬ್ಲಾಕ್ ಬಸ್ಟರ್ ಅರ್ಜುನ್ ರೆಡ್ಡಿ ರಿಮೇಕ್ ಸಿನಿಮಾ ಕಬೀರ್ ಸಿಂಗ್ ನ ಪ್ರೊಮೋಷನ್ ಕೆಲಸಗಳಲ್ಲಿ ಬ್ಯುಸಿ ಇರುವ ಕಿಯಾರ ಸಂದರ್ಶನವೊಂದರಲ್ಲಿ ರೂಮರ್ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಎಲ್ಲ ಕಟ್ಟುಕತೆಗಳನ್ನು ಅಲ್ಲಗಳೆದಿರುವ ಕಿಯಾರ, “ಈ ಹಿಂದೆ ವರದಿಯಾಗುತ್ತಿದ್ದ ಇಂತಹ ವಿಚಾರಗಳಿಗೆ ತೀರ ಅಪ್ ಸೆಟ್ ಆಗುತ್ತಿದ್ದದ್ದು ನಿಜ. ಆದರೆ ಇವೆಲ್ಲವೂ ಸಿನಿಮಾ ರಂಗದಲ್ಲಿ ಪಾರ್ಟ್ ಆಫ್ ಪಾರ್ಸೆಲ್ ಎಂಬುದು ತಿಳಿಯಿತೋ ಆ ನಂತರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನಕ್ಕು ಸುಮ್ಮನಾಗುತ್ತೇನೆ ಅಷ್ಟೇ” ಎಂದು ಉತ್ತರಿಸಿದ್ದಾರೆ. ಅಲ್ಲದೇ ಕಿಯಾರ ತನ್ನ ಬಾಲ್ಯಾವಸ್ಥೆಯ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದು, “10ನೇ ತರಗತಿಯಲ್ಲಿ ಆಕೆಗೆ ಫಸ್ಟ್ ಲವ್ ಆಗಿತ್ತಂತೆ. ತನ್ನ ತಂದೆ ತಾಯಿಗೆ ವಿಷಯ ತಿಳಿದು ಚೆನ್ನಾಗಿ ಬೈದು ಓದುವ ಕಡೆ ಗಮನ ಹರಿಸೆಂದು ಹೇಳಿದ ಮೇಲೆ ಬ್ರೇಕ್ ಮಾಡಿಕೊಂಡಿದ್ದೆ” ಎಂದು ಹೇಳಿದ್ದಾರೆ.

CG ARUN

ತಂಗಿ ಸೆಂಟಿಮೆಂಟ್ ಚಿತ್ರದಲ್ಲಿ ಸಿವ ಕಾರ್ತಿಕೇಯನ್!

Previous article

ಕೋಟಿಗೆಲ್ಲೋ ಆಟಕ್ಕೆ ಮುಹೂರ್ತ!

Next article

You may also like

Comments

Leave a reply

Your email address will not be published. Required fields are marked *