ಎಮ್.ಎಸ್.ಧೋನಿ ಸಿನಿಮಾದಲ್ಲಿ ಸಾಕ್ಷಿ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇದೀಗ ಸಖತ್ ಟ್ರೆಂಡ್ನಲ್ಲಿದ್ದಾರೆ. ನಿನ್ನೆಯಷ್ಟೆ ಕಿಯಾರಾ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದರು. 26 ವರ್ಷದ ಬೆಡಗಿ ಕಿಯಾರಾ ತನಗಾಗಿದ್ದ ಸ್ಟ್ರೆಸ್ಸನ್ನು ಹೊರಹಾಕಲು ಕನ್ನಡಿ ಮುಂದೆ ನಿಂತು ರ್ಯಾಪ್ ಸಾಂಗ್ ಹಾಡುತ್ತಾ ತನ್ನ ಉದ್ದ ಕೂದಲನ್ನ ಕಟ್ ಮಾಡಿಕೊಂಡಿದ್ದಾರೆ.
https://www.instagram.com/p/Bw3larIDAeR/?utm_source=ig_web_copy_link
ಹೇರ್ ಕೇರ್ ಮಾಡಲು ನಾವು ನೆಗ್ಲೆಕ್ಟ್ ಮಾಡ್ತೀವಿ. ಅದಕ್ಕೆ, ಇದೊಂದೆ ಸಲ್ಯೂಷನ್.. ಅಂತ ಬರೆದುಕೊಂಡಿದ್ದಾರೆ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ವಿಡಿಯೋ ನೋಡಿದ ಕಿಯಾರಾ ಅಭಿಮಾನಿಗಳು, ಕಿಯಾರಾಸ್ ನ್ಯೂ ಲುಕ್.. ಶಾರ್ಟ್ ಹೇರ್ ನಿಮಗೆ ಸೂಟ್ ಆಗುತ್ತೆ. ನೀವು ಸುಂದರವಾಗಿ ಕಾಣ್ತಿದ್ದೀರಿ ಎಂದಿದ್ದಾರೆ. ಇನ್ನು ಕೆಲವರು ನೀವು ನಿಜವಾಗ್ಲೂ ನಿಮ್ಮ ಹೇರ್ ಕಟ್ ಮಾಡ್ಕೊಂಡ್ರಾ ಅಂತ ಪ್ರಶ್ನಿಸಿದ್ದಾರೆ. ಈ ವಿಡಿಯೋ ಶೇರ್ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ಟ್ರೆಂಡಿಂಗ್ನಲ್ಲಿದೆ.