ಕೊಡೋಣ ತಂಡ ಎಷ್ಟು ಸೂಕ್ಷ್ಮವಾಗಿ ಚಿಂತಿಸಿ, ಎಲ್ಲರ ಸಂಕಟಕ್ಕೆ ಮಿಡಿಯುತ್ತಿದೆ ಗೊತ್ತಾ? ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡುಗಳನ್ನು ಸಹಾ ಅಗತ್ಯವಿರುವವರಿಗೆ ವಿತರಿಸಿದ್ದಾರೆ. ಈ ಸಮಯದಲ್ಲಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಿಗದೇ ಪರದಾಟವಾಗುತ್ತಿದೆಯಲ್ಲಾ? ಅದಕ್ಕಾಗಿ ರಕ್ತದಾನ ಮಾಡಿದ್ದಾರೆ.

ಸಿನಿಮಾರಂಗಕ್ಕೆ ಸಂಬಂಧಪಟ್ಟ ಹಲವರು ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಜನ ಕಷ್ಟಕ್ಕೆ ಸಿಲುಕಿದ್ದಾರೆ, ಅವರಿಗೆ ಸಹಾಯ ಮಾಡಬೇಕು ಅಂತಾ ಎಲ್ಲರೂ ತೀರ್ಮಾನಿಸುವ ಹೊತ್ತಿಗೇ ಇಲ್ಲೊಂದು ಟೀಮು ಕೆಲಸ ಶುರುವಿಟ್ಟುಕೊಂಡಿತ್ತು.

ಮನರಂಜನಾ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಲೇ, ಇವೆಂಟುಗಳನ್ನು ಆಯೋಜಿಸುವ, ಎಲ್ಲಕ್ಕಿಂತಾ ಮುಖ್ಯವಾಗಿ ಇಡೀ ಚಿತ್ರರಂಗಕ್ಕೆ ಆತ್ಮೀಯರಾಗಿರುವ ವರುಣ್, ಪತ್ರಕರ್ತ, ನಿರೂಪಕ, ನಟ, ಬಿಗ್ ಬಾಸ್ ಸ್ಪರ್ಧಿ- ಹೀಗೆ ಸಾಕಷ್ಟು ಬಗೆಯಲ್ಲಿ ಹೆಸರುವಾಸಿಯಾಗಿರುವ ಕಿರಿಕ್ ಕೀರ್ತಿ, ಟೀವಿ ಮೀಡಿಯಾದಲ್ಲಿ ಹೆಸರು ಮಾಡಿರುವ ಸೋಮಣ್ಣ ಮಾಚಿಮಾಡ, ಕಲಾವಿದ ಕಿರಣ್ ರಾಜ್, ಸಿನಿಮಾ ನಿರ್ದೇಶಕ ಸಹನಾ ಮೂರ್ತಿ, ಸಂಕಲನಕಾರ ಕೃಷ್ಣ, ಛಾಯಾಗ್ರಾಹಕ ಸಿದ್ದು, ಭರತ್ ಮತ್ತು ಪ್ರದೀಪ್ – ಇಷ್ಟೂ ಜನ ಸೇರಿ ಲಾಕ್ ಡೌನ್ ಏರ್ಪಟ್ಟ ದಿನದಿಂದಲೇ ನೊಂದವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈ ಕಾರ್ಯಕ್ಕೆ ತಂಡ ಇಟ್ಟ ಹೆಸರು ಕೊಡೋಣ!

ಕೊಡೋಣ ಟೀಮು ಈಗಾಗಲೇ ಸರಿಸುಮಾರು ಮೂರುಸಾವಿರದಷ್ಟು ಪಡಿತರ ಕಿಟ್, ಹದಿನೈದು ಸಾವಿರಕ್ಕೂ ಹೆಚ್ಚು ಫುಡ್ ಪ್ಯಾಕೆಟ್ಟುಗಳನ್ನು ಹಂಚಿಕೆ ಮಾಡಿದೆ. ಒಂದು ಕೈಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಅನ್ನೋ ಮನಸ್ಥಿತಿ ಹೊಂದಿರುವ ‘ಕೊಡೋಣ’ ತಂಡ ಯಾವ ಪ್ರಚಾರವನ್ನೂ ಬಯಸಿಲ್ಲ. ತಮ್ಮ ಪಾಡಿಗೆ ತಾವು ಕೊಡುವ ಕೆಲಸದಲ್ಲಿ ನಿರತವಾಗಿದೆ. ಊಟ, ರೇಷನ್ನು ಸಾಕಷ್ಟು ಜನ ನೀಡುತ್ತಿದ್ದಾರೆ. ಕೊಡೋಣ ತಂಡ ಎಷ್ಟು ಸೂಕ್ಷ್ಮವಾಗಿ ಚಿಂತಿಸಿ, ಎಲ್ಲರ ಸಂಕಟಕ್ಕೆ ಮಿಡಿಯುತ್ತಿದೆ ಗೊತ್ತಾ? ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡುಗಳನ್ನು ಸಹಾ ಅಗತ್ಯವಿರುವವರಿಗೆ ವಿತರಿಸಿದ್ದಾರೆ. ಈ ಸಮಯದಲ್ಲಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಿಗದೇ ಪರದಾಟವಾಗುತ್ತಿದೆಯಲ್ಲಾ? ಅದಕ್ಕಾಗಿ ರಕ್ತದಾನ ಮಾಡಿದ್ದಾರೆ. ವಿಜಯನಗರ, ನಾಗರಬಾವಿ, ಕಾಮಾಕ್ಷಿ ಪಾಳ್ಯ ಸೇರಿದಂತೆ ಅಕ್ಕಪಕ್ಕದ ಏರಿಯಾಗಳಲ್ಲಿ ಈ ತಂಡ ಮಾಡಿರುವ ಸೇವೆ ಅಷ್ಟಿಷ್ಟಲ್ಲ. ಇವರ ಪ್ರಾಮಾಣಿಕತೆ, ಸಮಾಜದ ಮೇಲಿನ ಕಾಳಜಿಯನ್ನು ಕಂಡ ಎಷ್ಟೋ ಜನ ಸಹಾಯಾರ್ಥವಾಗಿ ಹಣವನ್ನೂ ನೀಡಿದ್ದಾರೆ. ಬಂದದ್ದನ್ನೆಲ್ಲಾ ಕಂಗಾಲಾದವರ ಕೈ ಹಿಡಿಯಲು ವಿನಿಯೋಗಿಸುತ್ತಿರುವ ’ಕೊಡೋಣ’ ತಂಡದ ಕೆಲಸವನ್ನು ಮೆಚ್ಚಲೇಬೇಕು. More Details : 8971595639

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗಮನ ಸೆಳೆಯುತ್ತಿದೆ ತೂಗುದೀಪ ದರ್ಶನ ಪುಸ್ತಕದ ಕಲರ್ ಫುಲ್ ಕ್ಯಾರಿಕೇಚರ್ಸ್!

Previous article

ಅಣ್ಣಾವ್ರ ಅಭಿಮಾನಿಯ ಆಪ್ತ ಬರಹ…

Next article

You may also like

Comments

Leave a reply

Your email address will not be published. Required fields are marked *