ಕನ್ನಡದ ಪ್ರಹಸನದ ಪಿತಾಮಹ ಎಂದೇ ಬಿರುದಾಂಕಿತರಾದ ಟಿ.ಪಿ. ಕೈಲಾಸಂ ಸಮಾಜದ ದೋಷಗಳನ್ನು ಕುಚೋದ್ಯದ ರೀತಿಯಲ್ಲಿ ರಂಗರೂಪಕ್ಕೆ ತಂದವರು. ಅವರ ಸಾಕಷ್ಟು ನಾಟಕಗಳು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಅದರಲ್ಲೂ ಟಿ.ಪಿ. ಕೈಲಾಸಂ ರಚನೆಯ ನಾನು ಕೋಳಿಕೇ ರಂಗ ಎನ್ನುವ ಹಾಡು ಸಾಕಷ್ಟು ಮಂದಿಯ ಬಾಯಿಯಲ್ಲಿ ಇಂದಿಗೂ ಗುನುಗುವಂತೆ ಮಾಡುತ್ತದೆ. ಈಗ ಅದೇ ಹಾಡಿನ ಸಾಲನ್ನಿಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವೊಂದು ಸೆಟ್ಟೇರಲಿದೆ.
ಯೆಸ್.. ನಾ ಕೋಳಿಕ್ಕೇ ರಂಗ ಎಂಬ ಟೈಟಲಿಟ್ಟಿಕೊಂಡು ಈ ಚಿತ್ರವು ತಯಾರಾಗಲಿದ್ದು, ರಂಗನಾಗಿ ಮಾಸ್ಟರ್ ಆನಂದ್ ಮಿಂಚುವುದು ಕನ್ ಫರ್ಮ್ ಆಗಿದೆ. ಮಾಸ್ಟರ್ ಆನಂದ್ ಗೆ ನಾಯಕಿಯಾಗಿ ರಾಜೇಶ್ವರಿ ಜತೆಯಾಗಲಿದ್ದು, ಉಳಿದಂತೆ ಭವ್ಯಾ, ಹೊನ್ನವಳ್ಳಿ ಕೃಷ್ಣ, ಶಕೀಲಾ, ಬೀರಾದರ್, ಗುರುರಾಜ್ ಹೊಸಕೋಟೆ, ರಾಕ್ಲೈನ್ ಸುಧಾಕರ್, ಗಡ್ಡಪ್ಪ ಸೇರಿದಂತೆ ತಾರಾ ದಂಡೇ ಇದೆ. ಈ ಚಿತ್ರವನ್ನು ಗೊರವಾಲೆ ಮಹೇಶ್ ನಿರ್ದೇಶನ ಮಾಡುತ್ತಿದ್ದು, ಎಸ್.ಟಿ. ಸೋಮಶೇಖರ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು ನಮ್ ಋಷಿ, ಹನಸೋಗೆ ಸೋಮಶೇಖರ್ ಗೀತಸಾಹಿತ್ಯ, ರಾಜು ಎಮ್ಮಿಗಾನೂರು ಸಂಗೀತ ಚಿತ್ರಕ್ಕಿದೆ.