ನಟಿ ರಾಧಿಕಾ ಪಾಲಿಗೀಗ ಎರಡನೇ ಸುತ್ತಿನ ಪರ್ವಕಾಲವೊಂದು ಆರಂಭವಾದಂತಿದೆ. ಮದುವೆ, ಮಗು ಮತ್ತು ಒಂದಷ್ಟು ವಿವಾದಗಳ ನಡುವೆ ಚಿತ್ರರಂಗದಿಂದ ದೂರವೇ ಉಳಿದಿದ್ದವರು ರಾಧಿಕಾ. ಅವರೀಗ ಸಾಲು ಸಾಲು ಚಿತ್ರಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಮುಂದಾಗಿದ್ದಾರೆ. ಅವರೀಗ ಅರ್ಜುನ್ ಸರ್ಜಾಗೂ ಜೋಡಿಯಾಗಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದ ನಿಮಿತ್ತವಾಗಿಯೇ ಅರ್ಜುನ್ ಸರ್ಜಾ ಮತ್ತು ರಾಧಿಕಾರ ಮದುವೆ ಚಿತ್ರೀಕರಣವೂ ನಡೆದಿದೆಯಂತೆ. ಅಂದಹಾದೆ ರಾಧಿಕಾ ಮತ್ತು ಸರ್ಜಾ ಮದುವೆಯಾದದ್ದು ಕಾಂಟ್ರ್ಯಾಕ್ಟ್ ಅನ್ನೋ ಸಿನಿಮಾಗಾಗಿ!
ಸಮೀರ್ ನಿರ್ದೇಶನದ ಈ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಇದೀಗ ಬಾಕಿ ಉಳಿದಿರೋ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದರ ಭಾಗವಾಗಿ ಈ ಮದುವೆ ಸೀನನ್ನು ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆಯಂತೆ.
ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಬ್ಯುಸಿನೆಸ್ಮ್ಯಾನ್ ಆಗಿ ನಟಿಸಿದ್ದಾರೆ. ರಾಧಿಕಾ ಸಾಫ್ಟ್ ವೇರ್ ಹುಡುಗಿಯಾಗಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರಂತೆ. ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಈಗಾಗಲೇ ರಾಧಿಕಾ ಭೈರಾದೇವಿ, ಧಮಯಂತಿ ಮತ್ತು ರಾಜೇಂದ್ರ ಪೊನ್ನಪ್ಪ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳ ಬೆನ್ನಿಗೇ ಕಾಂಟ್ರ್ಯಾಕ್ಟ್ ಕೂಡಾ ರೆಡಿಯಾಗುತ್ತಿದೆ.
No Comment! Be the first one.