ಬರ್ತಡೇ ಬಗ್ಗೆ ಕಿಚ್ಚನ ಕಂಡೀಷನ್!

ಸೆಪ್ಟೆಂಬರ್ ಎರಡನೇ ತಾರೀಕು ಕಿಚ್ಚಾ ಸುದೀಪ್ ಅವರ ಹುಟ್ಟುಹಬ್ಬವಿದೆ. ಈ ಹಿಂದೆ ಎರಡು ವರ್ಷಗಳ ಕಾಲ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿದ್ದ ಸುದೀಪ್ ಈ ಬಾರಿ ಆ ನೆಪದಲ್ಲಿಯೇ ಅಭಿಮಾನಿಗಳೆಲ್ಲರ ಕೈಗೆ ಸಿಗಲು ತೀರ್ಮಾನಿಸಿದ್ದಾರೆ. ಸುದೀಪ್ ಸುದೀರ್ಘ ಸಮಯದ ನಂತರ ಇಂಥಾದ್ದೊಂದು ತೀರ್ಮಾನ ಕೈಗೊಂಡಿರೋದರಿಂದ ಅಭಿಮಾನಿಗಳೆಲ್ಲ ಸಂತಸಗೊಂಡಿದ್ದಾರೆ.

ನಟನೆ ಮತ್ತು ಅದರ ಆಸುಪಾಸಿನ ಕೆಲಸ ಕಾರ್ಯಗಳಲ್ಲಿ ಸದ್ಯ ಕಳೆದು ಹೋಗಿರುವ ಸುದೀಪ್ ಅವರಿಗೆ ಆರಂಭದಿಂದಲೂ ಹುಟ್ಟುಹಬ್ಬದ ಆಚರಣೆಯೆಂದರೆ ಅಲರ್ಜಿ. ಆದರೆ ಅಭಿಮಾನಿಗಳ ಆಸೆಯಂತೆ ಅದನ್ನು ಮಾಡಿಕೊಂಡು ಬಂದಿದ್ದ ಕಿಚ್ಚ ಈಗ್ಗೆ ಎರಡು ವರ್ಷಗಳ ಹಿಂದೆ ಈ ಬಗ್ಗೆ ಖಡಕ್ ಆದೊಂದು ನಿರ್ಧಾರವನ್ನು ಪ್ರಕಟಿಸಿದ್ದರು.

ಪ್ರತೀ ಸಲ ಅಭಿಮಾನಿಗಳೆಲ್ಲ ಅವರ ಮುಂದೆ ಹೂ ಹಣ್ಣು ಕೇಕುಗಳ ಸಾಗರವನ್ನೇ ಸೃಷ್ಟಿ ಮಾಡುತ್ತಿದ್ದರಲ್ಲಾ? ಅಲ್ಲಿ ಲಾಟುಗಟ್ಟಲೆ ಹೂವು ಹಣ್ಣ ಕೇಕು ವ್ಯರ್ಥವಾಗುತ್ತಿತ್ತು. ಒಂದು ಹುಟ್ಟು ಹಬ್ಬದ ನೆಪದಲ್ಲಿ ಇಷ್ಟೆಲ್ಲ ಖರ್ಚು ಮಾಡೋ ಬದಲು ಇದರ ಕಾಸಲ್ಲಿ ಅನಾಥಾಶ್ರಮ ವೃದ್ದಾಶ್ರಮಗಳಿಗೆ ನೆರವು ನೀಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದ ಸುದೀಪ್ ಹುಟ್ಟು ಹಬ್ಬದ ಆಚರಣೆಯನ್ನು ನಿಲ್ಲಿಸಿದ್ದರು.

ಆದರೆ ಈ ಬಾರಿ ಅವರು ಅಭಿಮಾನಿಗಳ ಜೊತೆಯಲ್ಲಿಯೇ ಬರ್ತಡೇ ಆಚರಿಸಿಕೊಳ್ಳಲು ಮನಸು ಮಾಡಿದ್ದಾರೆ. ಆದರೆ ಈ ಆಚರಣೆಗೆ ಬರುವಾಗ ಯಾರೂ ಹೂವು, ಹಣ್ಣು, ಕೇಕು ಹಾರ ಮುಂತಾದವಗಳನ್ನು ತರಬಾರದೆಂಬ ಷರತ್ತನ್ನೂ ಸುದೀಪ್ ಹಾಕಿದ್ದಾರೆ.

#


Posted

in

by

Tags:

Comments

Leave a Reply