ಕಿಚ್ಚ ಸುದೀಪ್ ಮತ್ತು ಆರ್ಮುಗಂ ರವಿಶಂಕರ್ ಮಸ್ತ್ ಮಜಾ ಕೊಡುವ ಪೇರ್ ಎಂದು ಕೆಂಪೇಗೌಡ ಚಿತ್ರದಿಂದಲೇ ಸಾಬೀತಾಗಿದೆ. ಅದಾದ ಮೇಲೆ ಮಾಣಿಕ್ಯ, ಕೋಟಿಗೊಬ್ಬ 2, ಚಿತ್ರಗಳಲ್ಲಿ ವಿಭಿನ್ನವಾಗಿಯೇ ಈ ಜೋಡಿ ಕಮಾಲು ಮಾಡಿತ್ತು. ಕೋಟಿಗೊಬ್ಬ 2 ಚಿತ್ರದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಪಾರ್ಟ್ ಮೂರಕ್ಕಾದರೂ ಬಂದು ಸೇಡು ತೀರಿಸ್ಕೋತೀನಿ ಅಂದಿದ್ದ ರವಿಶಂಕರ್ ಕೆಂಪೇಗೌಡ 3 ಶುರುವಾಗಿ ಬಹಳ ದಿನಗಳಾದರೂ ಸಹ ಪತ್ತೆಯೇ ಇರಲಿಲ್ಲ. ಆದರೆ ಸುದೀಪ್ ಮತ್ತು ಆರ್ಮುಗಂ ರವಿಶಂಕರ್ ಒಂದೇ ಸೆಟ್ಟಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಗೊಂದಲಗಳನ್ನುಂಟು ಮಾಡಿದ್ದಾರೆ.
ಹೌದು.. ಹೈದರಾಬಾದ್ ನಲ್ಲಿ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ಅದ್ದೂರಿ ಸೆಟ್ಟಿಗೆ ರವಿಶಂಕರ್ ಬಂದು ಸುದೀಪ್ ರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಸುದೀಪ್ ಜತೆಗಿದ್ದ ರವಿಶಂಕರ್ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸೆಟ್ಟಿಗೆ ಶೂಟಿಂಗ್ ಸಲುವಾಗಿ ಬಂದರೋ ಇಲ್ಲ ಕಿಚ್ಚನ ಜತೆ ಕುಶಲೋಪರಿಗಾಗಿ ಬಂದರೋ ಎನ್ನುವುದು ಮಾತ್ರ ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ. ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, ಸೂರಪ್ಪ ಬಾಬು ಬಂಡವಾಳ ಹೂಡಿದ್ಧಾರೆ.
Comments