ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ ೩ ಚಿತ್ರತಂಡ ಬೆರಗಾಗುವಂಥಾ ಗಿಫ್ಟನ್ನೇ ನೀಡಿದೆ. ಕಿಚ್ಚನ ಹುಟ್ಟುಹಬ್ಬದ ಸಂಭ್ರಮವನ್ನು ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕವೇ ಆಚರಿಸಿದೆ. ಮಧ್ಯರಾತ್ರಿ ಹೊತ್ತಿಗೆ ಬಿಡುಗಡೆಯಾಗಿರೋ ಈ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ನಂಬರ್ ಒನ್ ಆಗಿ ದಾಖಲಾಗುವ ಮೂಲಕ ನೆನ್ನೆಯ ಸಂಭ್ರರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ ೩ ಚಿತ್ರದ ಟೀಸರ್ ಕಿಚ್ಚನ ಬರ್ತಡೆಯಂದೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಈ ಹಿಂದೆಯೇ ಹಬ್ಬಿತ್ತು. ಈ ವಿಶೇಷ ಸಂದರ್ಭದಲ್ಲಿ ಹೊರ ಬರಲಿರುವ ಟೀಸರ್ ವಿಶಿಷ್ಟವಾಗಿಯೇ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳಲ್ಲಿತ್ತು. ಸುದೀಪ್ ಅವರನ್ನು ಬೇರೆಯದ್ದೇ ಗೆಟಪ್ಪಿನಲ್ಲಿ ಅನಾವರಣಗೊಳಿಸಿರೋ ಈ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ನಿಜವಾಗಿಸಿದೆ.
ಒಂದೇ ಮಾತಿನಲ್ಲಿ ಹೇಳೋದಾದರೆ ಈ ಟೀಸರ್ ಜಬರ್ಜಸ್ತಾಗಿದೆ. ಕೋಟಿಗೊಬ್ಬ ೩ ಕಿಚ್ಚನನ್ನು ಹೊಸಾ ಗೆಟಪ್ಪಿನಲ್ಲಿ ಅಭಿಮಾನಿಗಳ ಮುಂದೆ ನಿಲ್ಲಿಸೋದೂ ಪಕ್ಕಾ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಅಂತಾರಾಷ್ಟ್ರೀಯ ಚಾಣಾಕ್ಷ ಕಳ್ಳನ ಪಾತ್ರ ನಿರ್ವಹಿಸಿರುವ ಸುಳಿವೂ ಸಿಕ್ಕಿದೆ. ಟೀಸರ್ನ ಖದರ್ ನೋಡಿದ ನಂತರ ಈ ಚಿತ್ರದೆಡೆಗಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿರೋದಂತೂ ಸತ್ಯ.
ಶಿವಕಾರ್ತಿಕ್ ನಿರ್ದೇಶನದ ಈ ಚಿತ್ರ ಈಗಾಗಲೇ ಸರ್ಬಿಯಾದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿದೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಈ ಚಿತ್ರದಲ್ಲಿ ಇಂಟರ್ಪೋಲ್ ಅಧಿಕಾರಿಯಾಗಿ ನಟಿಸಿದ್ದರೆ, ರವಿಶಂಕರ್, ನವಾಬ್ ಶಾ, ರಂಗಾಯಣ ರಘು ಮುಂತಾದವರ ತಾರಾಗಣವೂ ಇದೆ.
ಕಿಚ್ಚನ ಬರ್ತಡೆಗೆ ಗಿಫ್ಟಾಗಿ ಬಿಡುಗಡೆಯಾಗಿರೋ ಈ ಟೀಸರ್ ಅಚ್ಚರಿದಾಯಕವಾಗಿ ಎಲ್ಲೆಡೆ ಹರಿದಾಡಿದೆ. ಯೂಟ್ಯೂಬಿನಲ್ಲಿ ಟ್ರೆಂಡಿಂಗ್ನಲ್ಲಿದೆ. ಸುದೀಪ್ ಅಭಿಮಾನಿಗಳಂತೂ ಇದರಿಂದ ಖುಷಿಗೊಂಡಿದ್ದಾರೆ.
#
No Comment! Be the first one.