ಬಾಲಿವುಡ್​ ನಟಿ ಕೊಯ್ನಾ ಮಿತ್ರಾ ಅವರಿಗೆ ಚೆಕ್ ಬೌನ್ಸ್ ಕಂಟಕ ಎದುರಾಗಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್​ ಕೋರ್ಟ್​​ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ವರದಿಗಳ ಪ್ರಕಾರ ಸಂತ್ರಸ್ತೆಗೆ 4.64 ಲಕ್ಷ ರೂ. ನೀಡುವಂತೆ ಆದೇಶಿಸಿದೆ.

ಮಾಡೆಲ್​ ಪೂನಮ್​ ಸೇಥಿ ಅವರ ಬಳಿ ಕೊಯ್ನಾ 22 ಲಕ್ಷ ರೂ. ಪಡೆದುಕೊಂಡಿದ್ದರು. ಕೊಯ್ನಾ ಹಣ ವಾಪಸ್ಸು ನೀಡುವಾಗ 19 ಲಕ್ಷ ರೂ. ಮಾತ್ರ ನೀಡಿದ್ದರು. ಉಳಿದ 3 ಲಕ್ಷ ರೂ.ನ ಚೆಕ್​ ಬೌನ್ಸ್​ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಯ್ನಾ ವಿರುದ್ಧ 2013ರಲ್ಲಿ ಪೂನಮ್​ ಸೇಥಿ ಚೆಕ್​ ಬೌನ್ಸ್​ ಪ್ರಕರಣ ದಾಖಲಿಸಿದ್ದರು. ಇದನ್ನು ಅಲ್ಲಗಳೆದಿದ್ದ ಕೊಯ್ನಾ, ಕೋರ್ಟ್​​ ಮೆಟ್ಟಿಲೇರಿದ್ದರು. ಪೂನಮ್​ ಸೇಥಿ ಅವರಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ, ಅವರು ನನ್ನ ಚೆಕ್​ ಬುಕ್​ ಕದ್ದು, ಹಣ ತೆಗೆಯುವ ಪ್ರಯತ್ನ ಮಾಡಿದ್ದರು. ಆದರೆ, ಈ ವಾದವನ್ನು ಕೋರ್ಟ್​​ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಕೊಯ್ನಾ ಮಾತ್ರ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ‘ಕೊನೆಯ ದಿನದ ವಾದಕ್ಕೆ ನನ್ನ ಪರ ವಕೀಲರು ಬಂದಿರಲಿಲ್ಲ. ನ್ಯಾಯಾಧೀಶರು ನಮ್ಮ ವಾದವನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಹಾಗಾಗಿ, ಈ ತೀರ್ಪು ಸರಿಯಿಲ್ಲ,’ ಎಂದಿದ್ದಾರೆ ಕೊಯ್ನಾ.

CG ARUN

ಕಿಚ್ಚನ ಜತೆ ನಟಿಸುವುದಕ್ಕೊಂದು ಚಾನ್ಸ್!

Previous article

ಕಾಂಗ್ರೆಸ್ ಮಹಿಳಾ ಸಚಿವರುಗಳ ಹಣದ ಜ್ವರಕ್ಕೆ ತಗಲಿಕೊಂಡ ಅಮಾಯಕ ಕಂಟ್ರಾಕ್ಟರ್!

Next article

You may also like

Comments

Leave a reply

Your email address will not be published. Required fields are marked *