ರಜನೀಕಾಂತ್ರಂಥ ರಜನೀಕಾಂತ್ ತಮಿಳುನಾಡಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಕನ್ನಡತನವನ್ನು ಪಣಕ್ಕಿಡುತ್ತಾರೆ. ತಾನು ವೀರ ಕನ್ನಡಿಗ ಎಂಬಂತೆ ಪೋಸು ಕೊಡೋ ಪ್ರಕಾಶ್ ರೈ ನವರಂಗೀ ನಾಟಕವಾಡುತ್ತಾರೆ. ಇಂಥಾ ಸಂದರ್ಭದಲ್ಲಿ ತಮಿಳು ಮಾಧ್ಯಮದ ಮುಂದೆ ಕನ್ನಡ ಚಿತ್ರಗಳ ಶ್ರೇಷ್ಠತೆಯ ಬಗ್ಗೆ ಮಾತಾಡಿ ಮನಗೆದ್ದವರು ನಟಿ ಸುಹಾಸಿನಿ. ಈ ವಿದ್ಯಮಾನವನ್ನಿಟ್ಟುಕೊಂಡೇ ಕನ್ನಡ ಚಿತ್ರರಂಗದ ಈವತ್ತಿನ ಸ್ಥಿತಿಗತಿಗಳ ಬಗ್ಗೆ ಚಿಂತನೆಗೆ ಹಚ್ಚುವ ಅರ್ಥಪೂರ್ಣ ಬರಹವೊಂದನ್ನು ಬರೆದಿರುವವರು ಖಡಕ್ ಪೊಲೀಸ್ ಅಧಿಕಾರಿ ಕೆ ಪಿ ಸತ್ಯನಾರಾಯಣ್. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರೋ ಸತ್ಯನಾರಾಯಣ್ ವನ್ಯಜೀವಿ ಛಾಯಾಗ್ರಾಹಕರಾಗಿ, ಬರಹಗಾರರಾಗಿ ವಿಭಿನ್ನ ಒಳನೋಟಗಳ ಮೂಲಕವೇ ಅಚ್ಚರಿ ಹುಟ್ಟಿಸುತ್ತಾರೆ. ಅವರ ಬರಹದ ಪೂರ್ಣಪಾಠ ನಿಮಗಾಗಿ…
ಮುತ್ತಿನ ಹಾರ ಪೋಣಿಸಿದಂತೆ…
ಭಾಷಾಂಧ ತಮಿಳು ಮಾಧ್ಯಮಗಳ ಮುಂದೆ ಕುಳಿತ ಸುಹಾಸಿನಿ ಎಂಬ ಹೆಣ್ಣು ಮಗಳು ಕನ್ನಡ ಸಿನೆಮಾಗಳ ಶ್ರೇಷ್ಠತೆಯನ್ನು ಕೊಂಡಾಡುವ ವಿಡಿಯೋ ನೋಡಿದ ಯಾವನೇ ಕನ್ನಡಿಗನಿಗೆ ಆಗುವ ಖುಷಿ ಹೇಳಸಾಧ್ಯವಿಲ್ಲ. ಸಾಮಾಜಿಕ ಸಂದೇಶಗಳನ್ನು ಹೊತ್ತು ತರುತ್ತಿದ್ದ, ಸದಭಿರುಚಿಯ ಅಂದಿನ ಸಿನೆಮಾಗಳು ಸೀಮಿತ ಮಾರುಕಟ್ಟೆಯಲ್ಲಿ ಗೆದ್ದರೂ, ಸೋತರೂ ಜನಮನದಲ್ಲಿ ಶಾಶ್ವತವಾಗಿ ಛಾಪು ಮೂಡಿಸುತ್ತಿದ್ದವು.
ಇತ್ತೀಚಿನ ಸಿನೆಮಾಗಳಲ್ಲಿ ಒಂದೆರಡು Fights, ಒಂದೆರಡು duets, ಅಸಹ್ಯ ದೇಹ ಭಾಷೆಯ comedy, ವೈಭವೋಪೇತ ಹೀರೋ, ಅವನಷ್ಟೇ ಭಯಾನಕ ವಿಲನ್ (ದಿ ವಿಲನ್) ಅವರ ಹರಿದ ಉಡುಗೆ ತೊಡುಗೆ, ಹೀಗೆಯೇ ಸ್ಯಾಟಲೈಟ್ ಹಕ್ಕುಗಳು, ಸಬ್ಸಿಡಿಗಾಗಿ, ಒಂದು ವಾರದ ಕಲೆಕ್ಷನ್ ಗಾಗಿ ತಯಾರಿಸಿದ ರಿಯಲ್ ಎಸ್ಟೇಟ್ production ಬ್ಯಾನರುಗಳ ಸಿನೆಮಾಗಳನ್ನು ನೋಡಿ ವಾಂತಿಗೂ ಬೇಸರವಾಗಿ ಆಚೆ ಬರಲಾರದೆ ಸುಮ್ಮನಾಗಿ ಬಿಟ್ಟಿದೆ.
ಮುತ್ತಿನ ಹಾರ ಸಿನೆಮಾದಲ್ಲಿ ಚೀನಾ ಸೈನ್ಯದ ಕ್ರೌರ್ಯಕ್ಕೆ ತುತ್ತಾಗುವ ಸನ್ನಿವೇಶಕ್ಕಾಗಿ ವಿಷ್ಣು ತಮ್ಮ ತಲೆ ಬೋಳಿಸಿಕೊಂಡು ಕ್ಯಾಮರಾ ಮುಂದೆ ನಿಂತಿದ್ದರು. ಕನ್ನಡದ ಭಾಷೆಯನ್ನು ಕಲಿತ ಸುಹಾಸಿನಿ ತಮ್ಮೆಲ್ಲ ಚಿತ್ರಗಳಲ್ಲಿ ಖುದ್ದು ಡಬ್ಬಿಂಗ್ ಮಾಡಿಬಿಟ್ಟರು.
ಅಂಥಹ committed ವ್ಯಕ್ತಿತ್ವದ ಹೀರೋ/ ಹೀರೋಯಿನ್ ಗಳು ಈಗ ಎಷ್ಟು ಜನರಿದ್ದಾರೆ..!?
#
No Comment! Be the first one.