ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಹಿಂದಿನ ಸಿನಿಮಾದಲ್ಲಿ ರಾಬರ್ಟ್‌ ವೇಷದಲ್ಲಿ ಕಾಣಿಸಿಕೊಂಡಿದ್ದರು. ಉದ್ದ ಕೂದಲು, ಫಿಟ್‌ ಜೀನ್ಸ್‌, ಜರ್ಕಿನ್‌ ತೊಟ್ಟು ಬೈಕಿನ ಮೇಲೆ ಸ್ಟೈಲಿಷ್‌ ಲುಕ್ಕಲ್ಲಿ ಕಂಗೊಳಿಸಿದ್ದ ದಾಸ  ಈ ಸಲ ಕ್ರಾಂತಿಯಲ್ಲಿ ಸಾಂಪ್ರದಾಯಿಯ ಮುಸ್ಲಿಂ ಉಡುಗೆ ತೊಟ್ಟಿದ್ದಾರೆ. ಪಟಾಣ್‌ ಪಾಯಿಜಾಮ, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಥೇಟು ಮುಸಲ್ಮಾನನ ಗೆಟಪ್ಪಿನಲ್ಲಿ ಎಂಟ್ರಿ ಕೊಡಲಿದ್ದಾರೆ…!

ಸಿನಿಮಾ ಯಾವತ್ತಿಗೂ ಜಾತಿ, ಮತಗಳನ್ನು ಮೀರಿದ್ದು. ಇಲ್ಲಿ ಯಾರು ಯಾವ ಧರ್ಮೀಯನ ಪಾತ್ರದಲ್ಲಿ ಬೇಕಿದ್ದರೂ ನಟಿಸಬಹುದು. ಆದರೆ ಬಹುತೇಕ ಕನ್ನಡ ಸಿನಿಮಾಗಳು ಹಿಂದೂ ಧರ್ಮ ಮತ್ತು ಪಾತ್ರಗಳ ಸುತ್ತಲೇ ಆವರಿಸಿಕೊಂಡಿದೆ. ಎಲ್ಲೋ ಅಪರೂಪಕ್ಕೆ ನಮ್ಮ ಕನ್ನಡದ ಹೀರೋಗಳು ಕ್ರಿಶ್ಚಿಯನ್ ಪಾತ್ರದಲ್ಲಿ ನಟಿಸಿದ್ದಿದೆ. ಇತ್ತೀಚೆಗೆ ಕ್ರಿಶ್ಚಿಯನ್ ಹೆಸರುಗಳನ್ನು ಚಿತ್ರಕ್ಕಿಡುವುದು ಒಂದು ರೀತಿಯಲ್ಲಿ ಟ್ರೆಂಡ್ ಕೂಡಾ ಆಗಿದೆ. ಟೋನಿ, ರಾಬರ್ಟ್, ಜೇಮ್ಸ್, ಮಾರ್ಟಿನ್ ಮುಂತಾದವು ಅದಕ್ಕೆ ಉದಾಹರಣೆ. ನಮ್ಮ ಕನ್ನಡದ ಹೀರೋಗಳು ಮುಸ್ಲಿಂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿರಳ. ಡಾ. ರಾಜ್ ಕುಮಾರ್ ರಂಥಾ ಮೇರು ನಟ   ಗುರಿ ಚಿತ್ರದಲ್ಲಿ ʻಅಲ್ಲಾ ಅಲ್ಲಾ ನೀನೇ ಎಲ್ಲಾʼ ಎಂದು ಹಾಡಿದ್ದರು. ಈ ಹಾಡು ನಿಜಕ್ಕೂ ಧಾರ್ಮಿಕ ಸಾಮರಸ್ಯ ಸಾರಿತ್ತು.

ಈಗ ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗ ಮತ್ತು ಮುಸ್ಲಿಂ ಪಾತ್ರಗಳಿಗೆ ಇರುವ ನಂಟಿನ ಬಗ್ಗೆ ಹೇಳಲೂ ಕಾರಣವಿದೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನವಗ್ರದಲ್ಲಿ ಮುಸ್ಲಿಂ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದರು. ಈಗ ದರ್ಶನ್  ಕ್ರಾಂತಿ  ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಈ ವಿಚಾರ ನಿಜವೇ ಆಗಿದ್ದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಇದು ನಿಜಕ್ಕೂ ʻಕ್ರಾಂತಿʼಕಾರಕ ಬೆಳವಣಿಗೆ ಅಂತಲೇ ಭಾವಿಸಬಹುದು.

ಯಾಕೆಂದರೆ, ಶಿವರಾಜ್ ಕುಮಾರ್, ಸುದೀಪ್‌, ಸಂಚಾರಿ ವಿಜಯ್‌,  ಸಲಗ ವಿಜಯ್ ಥರದ ಕೆಲವೇ ಹೀರೋಗಳು ಮುಸ್ಲಿಮರ ಸಾಂಪ್ರದಾಯಿಕ ಉಡುಗೆ ತೊಟ್ಟು ಕೆಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಅದೇನು ವಿಚಿತ್ರವೋ ಗೊತ್ತಿಲ್ಲ ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಮುಸ್ಲಿಮರನ್ನು ವಿಲನ್ನುಗಳ ಪಾತ್ರದಲ್ಲಿಯೇ ತೋರಿಸಿದ್ದಾರೆ.

ಸದ್ಯ ದರ್ಶನ್ ಅವರ ಕ್ರಾಂತಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಟೊರಿನೋ ಫ್ಯಾಕ್ಟರಿಯಲ್ಲಿ ಒಂದಷ್ಟು ದಿನಗಳ ಚಿತ್ರೀಕರಣ ಮುಗಿಸಿ ಸದ್ಯ ಚಿತ್ರತಂಡ ಹೈದರಾಬಾದಿಗೆ ತೆರಳಿರುವುದಾಗಿ ಮಾಹಿತಿ ಇದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಇದು ಬಿಕಾಂ ಗಣಿ ಗ್ಯಾಂಗ್‌ ಸಿನಿಮಾ!

Previous article

ಬ್ಯಾಂಗಲ್‌ ಸ್ಟೋರ್‌ ಹುಡುಗನ ಬೆಳವಣಿಗೆ ನೋಡಿ….

Next article

You may also like

Comments

Leave a reply