ನಿರ್ಮಾಪಕ ದಿನೇಶ್ ವಿಜಾನ್ ಹಾಗೂ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಕಾಂಬಿನೇಷನ್ನಿನಲ್ಲಿ ಬಾಡಿಗೆ ತಾಯಿಯ ಕುರಿತಾದ ಹೊಸ ಸಿನಿಮಾವೊಂದು ತೆರೆಗೆ ಬರುವ ಪ್ಲ್ಯಾನ್ ರೆಡಿಯಾಗುತ್ತಿದೆ.. ಈ ಚಿತ್ರಕ್ಕೆ ಬಾಡಿಗೆ ತಾಯಿ ಕಮ್ ನಾಯಕಿಯ ಪಾತ್ರದಲ್ಲಿ ಕೃತಿ ಅರೋರಾ ನಟಿಸುತ್ತಿದ್ದಾರೆ. ಸದ್ಯ ಮಮ್ಮಾ ಮಿಯಾ ಎಂಬ ಟೈಟಲ್ ಅಂತಿಮಗೊಂಡಿದೆ. ಬರೇಲಿ ಕಿ ಬರ್ಫಿ ಚಿತ್ರದ ಬೆನ್ನಲ್ಲೇ ಲುಕಾ ಚಿಪ್ಪಿ ಕೂಡಾ ಭರ್ಜರಿ ಯಶಸ್ಸಿನ ಹಿನ್ನೆಲೆ ಕೃತಿ ಅರೋರಾ ಬಿ ಟೌನ್ ನಲ್ಲಿ ಒಂದು ಮಟ್ಟಿನ ಬೇಡಿಕೆಯನ್ನು ಕ್ರಿಯೇಟ್ ಮಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಮೆಡಾಕ್ ಫಿಲ್ಮ್ಸ್ ನಿರ್ಮಿಸಿದ್ದ ಮರಾಠಿಯ ಮಲಾ ಆಯಿ ವಾಚ್ ಕಿ ಸಿನಿಮಾವು ಬಾಡಿಗೆ ತಾಯಿಯ ಕತೆಯನ್ನು ಒಳಗೊಂಡಿತ್ತು. ಆದರೆ ಮರಾಠಿ ಚಿತ್ರಕ್ಕಿಂತಲೂ ವಿಭಿನ್ನವಾದ ಚೌಕಟ್ಟಿನಲ್ಲಿ ಮಮ್ಮಿ ಮಿಯಾ ಸಿನಿಮಾ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಬಾಡಿಗೆ ತಾಯಿಯ ಕುರಿತಾದ ಬಹಳಷ್ಟು ಸಿನಿಮಾಗಳು ಬಂದು, ಗೆದ್ದು, ಸೋತು ಹೋಗಿದ್ದರೂ, ಪ್ರೇಕ್ಷಕರು ಹಿಂದೆಂದೂ ಕಂಡಿರದ ಕಥಾವಸ್ತು ಸನ್ನಿವೇಶಗಳನ್ನು ಮಮ್ಮಿ ಮಿಯಾದಲ್ಲಿ ತೋರಿಸಲಿದ್ದೇವೆ ಎಂಬುದು ನಿರ್ದೇಶಕರ ಅಂಬೋಣ. ಎಲ್ಲವೂ ಅಂದುಕೊಂಡಂತಾದರೆ ಇದೇ ನವೆಂಬರ್ ತಿಂಗಳಿನಿಂದ ಮಮ್ಮಿ ಮಿಯಾ ಸೆಟ್ಟೇರಲಿದೆ.
No Comment! Be the first one.