ಸ್ಯಾಂಡಲ್ ವುಡ್ ನಲ್ಲಿ ಪ್ರಾಣಿ ಪಕ್ಷಿಗಳನ್ನು ಹೆಚ್ಚು ಇಷ್ಟಪಡುವ ನಟರೆಂದರೆ ಥಟ್ಟಂತ ನೆನಪಾಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದಾಯ ರಹಿತವಾಗಿದ್ದರೂ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟು, ಪ್ರಾಣಿ ಪಕ್ಷಿಗಳನ್ನು ಸಾಕುವ, ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಕಾಯಕದಲ್ಲಿ ದರ್ಶನ್ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ 2.95 ಲಕ್ಷ ರೂಪಾಯಿ ಚೆಕ್ ನೀಡಿ ತಮ್ಮ 4 ಹುಲಿಗಳ ದತ್ತು ನವೀಕರಣವನ್ನು ಮಾಡಿಕೊಂಡಿದ್ದಾರೆ.
https://www.instagram.com/p/B0rDt1YAQgD/?utm_source=ig_web_copy_link
ಇತ್ತೀಚಿಗಷ್ಟೇ ಚಿರಂಜೀವಿ ಸರ್ಜಾ ದಂಪತಿ ದರ್ಶನ್ ಅವರಿಗೆ ನಾಯಿ ಮರಿಯೊಂದನ್ನು ಗಿಫ್ಟ್ ನೀಡಿದ್ದಾರೆ. ಈಗ ಕುಲವಧು ಧಾರವಾಹಿ ಖ್ಯಾತಿಯ ದೀಪಿಕಾ ಕೂಡ ಮುದ್ದಾದ ನಾಯಿ ಮರಿಯೊಂದನ್ನು ಗಿಫ್ಟ್ ಮಾಡಿದ್ದಾರೆ. ದರ್ಶನ್ ಅವರ ಭೇಟಿ ಮಾಡಿದ ಸಂತಸದ ಕ್ಷಣಗಳನ್ನು ಧನ್ಯ ಅಲಿಯಾಸ್ ದೀಪಿಕಾ ಅವರೇ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
No Comment! Be the first one.