ಕುಣಿಗಲ್ ತಾಲ್ಲೂಕಿನ ತಿಪ್ಪಸಂದ್ರ ಯುವಕರು ನಿರ್ಮಿಸಿದ್ದ ನಮ್ಮೂರು ಕುಣಿಗಲ್ ಸಿನಿಮಾ ಪಟ್ಟಣದ ಆಕಾಶ್ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾಯಿತು. ಚಿತ್ರದ ನಿರ್ದೇಶಕ ಗಗನ್ ರೇವಣ್ಣ, ನಾಯಕ ನಟ ಪ್ರಸನ್ನ ಮತ್ತು ತಂಡದವರು ಚಿತ್ರಮಂದಿರದ ಮುಂಭಾಗ ನೆರೆದಿದ್ದ ಸಿನಿಮಂದಿಯನ್ನು ಸ್ವಾಗತಿಸಿದರು. ಮೊದಲ ಪ್ರದರ್ಶನ ಬೆಳಗಿನ ಆಟ ಪ್ರಾರಂಭವಾಗುವ ಸಮಯಕ್ಕೆ ಚಿತ್ರಮಂದಿರ ತುಂಬಿದ್ದು ತಂಡದ ಸಂತೋಷಕ್ಕೆ ಮುಖ್ಯ ಕಾರಣವಾಗಿತ್ತು.
ಹಿರಿಯ ರಂಗ ಕಲಾವಿದ ಹುಲಿವಾನ ಗಂಗಾಧರಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಬೆಳ್ಳಿ ಪರದೆಗೆ ಪೂಜೆ ಸಲ್ಲಿಸಿ ಚಿತ್ರತಂಡಕ್ಕೆ ಶುಭಕೋರಿದರು.ಮೊದಲ ಪ್ರದರ್ಶನದ ನಂತರ ಅಭಿಮಾನಿಗಳು ನಾಯಕ ನಟ ಪ್ರಸನ್ನ ಅವರನ್ನು ಸನ್ಮಾನಿಸಿದರು. ಚಿತ್ರವನ್ನು ವೀಕ್ಷಿಸಿದ ಹುಲಿವಾನ್ ಗಂಗಾಧರಯ್ಯ, “ಗ್ರಾಮೀಣ ಪ್ರದೇಶದ ಸೊಗಡನ್ನು, ಸಮಸ್ಯೆಗಳನ್ನು ಸತ್ಯಕ್ಕೆ ಹತ್ತಿರವಾಗಿ ಬಿಂಬಿಸಲಾಗಿದೆ. ನಿರ್ದೇಶಕ ಗಗನ್ ರೇವಣ್ಣ ನೈಫುಣ್ಯತೆ ಪ್ರತಿ ದೃಶ್ಯದಲ್ಲೂ ಎದ್ದುಕಾಣುತ್ತಿದೆ ಎಂದರು.
No Comment! Be the first one.