ಬಾಹುಬಲಿ ಬಿಗೀನ್ಸ್ ರಿಲೀಸ್ ಆಗಿ, ಬಾಹುಬಲಿ ಕಂಕ್ಲೂಷನ್ ಬರುವವರೆಗೂ ಭಾರತೀಯರ ಮಟ್ಟಿಗೆ ಉಳಿದುಕೊಂಡಿದ್ದ ಯಕ್ಷ ಪ್ರಶ್ನೆ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ.. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ಆಂದೋಲನವನ್ನೇ ಸೃಷ್ಟಿಮಾಡಿತ್ತು. ಸದ್ಯ ಕನ್ನಡದ ಮಟ್ಟಿಗೆ ಹೆಚ್ಚು ಚರ್ಚೆಯಲ್ಲಿರುವ ವಿಚಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಯಾವಾಗ? ಅನ್ನೋದೆ. ಹಾಗಂತ ಬಾಹುಬಲಿ ಮತ್ತು ಕುರುಕ್ಷೇತ್ರವನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕೆಲಸವಂತೂ ನಮ್ಮದಲ್ಲ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟಿಕೊಂಡಿದೆಯಷ್ಟೇ. ನಿರ್ಮಾಪಕ ಮುನಿರತ್ನ ಸಾವಿನಲ್ಲಿ ಸಿಕ್ಕರೂ, ಮತ್ತಾವುದೋ ಸಿನಿಮಾದ ಪ್ರಮೋಷನ್ ಗೆ ಬಂದಿದ್ದರೂ, ಬಿಡುವಿದ್ದ ನಿಂತಾಗಲೂ ಎಲ್ಲರೂ ಅವರನ್ನು ಕೇಳುವ ಕಾಮನ್ ಕ್ವಶ್ಚೆನ್ ಸರ್ ಕುರುಕ್ಷೇತ್ರವನ್ನು ರಿಲೀಸ್ ಯಾವಾಗ ಮಾಡ್ತೀರಾ ಅಂತಲೇ. ಮಾಧ್ಯಮ ಮಿತ್ರರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಮುನಿರತ್ನ ಅವರಿಗೆ ಇಲ್ಲ ಸಲ್ಲದ ಕಾರಣಗಳನ್ನುಹೇಳಿ ಹೇಳಿಯೂ ಸಾಕಾಗಿ ಹೋಗಿದೆ. ಅಷ್ಟರಮಟ್ಟಿಗೆ ಅವರಿಗೂ ತಲೆ ಚಿಟ್ಟು ಹಿಡಿಯುವಂತೆ ಮಾಡಲಾಗುತ್ತಿದೆ. ಏನೇ ಮಾತನಾಡಿದರೂ, ಎಷ್ಟೇ ಮಾತನಾಡಿದರೂ ಮುನಿರತ್ನ ಅವರು ಸದ್ಯದಲ್ಲೇ ಕುರುಕ್ಷೇತ್ರ ಸಿನಿಮಾ ದಿನಾಂಕವನ್ನು ಅನೌನ್ಸ್ ಮಾಡಲಾಗುತ್ತದೆ ಎಂಬುದಷ್ಟೇ.
ಧಗ ಧಗ ಉರಿದು ನಡೆದ ಮಂಡ್ಯ ಲೋಕಸಭಾ ಚುನಾವಣೆಯ ನಂತರ ಈಗ ಮುನಿರತ್ನ ಕುರುಕ್ಷೇತ್ರ ಮತ್ತದೇ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಬಹುದೊಡ್ಡ ಸಿನಿಮಾ ಎಂದು ಗುರುತಿಸಿಕೊಂಡಿರುವ ಕುರುಕ್ಷೇತ್ರ ಸಿನಿಮಾ ಐದು ಭಾಷೆಯಲ್ಲಿ ತೆರೆಕಾಣಲಿದೆ. ಹಿಂದಿ ಡಬ್ಬಿಂಗ್ ಹಕ್ಕು ಒಂಬತ್ತುವರೆ ಕೋಟಿಗೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ವಿಶೇಷವೆಂದರೆ ಇದು ಕೇವಲ ಟಿವಿಗೆ ಮಾತ್ರ ಮಾರಾಟ ಮಾಡಿರುವುದು. ಥಿಯೇಟರ್ ಗೆ ಇನ್ನು ಸೇಲ್ ಮಾಡಲಾಗಿಲ್ಲ. ಓವರ್ ಸೀಸ್ ಕೂಡ ಯಾವ ಭಾಷೆಯ ಹಕ್ಕು ಕೂಡ ಮಾರಾಟ ಮಾಡಿಲ್ಲವಂತೆ.
ಈಗಾಗಲೇ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಸಿದ್ಧವಾಗಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡ ಆಗಿದೆ. ಉಳಿದ ಮೂರು ಭಾಷೆ ಮುಂದಿನ ವಾರ ಸೆನ್ಸಾರ್ ಗೆ ಹೋಗುತ್ತಿದೆ. ಹಿಂದಿ ವರ್ಷನ್ ಹದಿನೈದು ದಿನದಲ್ಲಿ ಮುಗಿಯುತ್ತದೆ.. ಅಮೇರಿಕಾ ಒಂದರಲ್ಲೇ ಐದು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿದೆ ಚಿತ್ರತಂಡ.
ಐದು ಭಾಷೆಯ ಪ್ರಿಂಟ್ 3ಡಿ ವ್ಯವಸ್ಥೆಯಲ್ಲಿ ಸಿದ್ಧವಾಗಿ ಮುನಿರತ್ನ ಅವರ ಕೈ ಸೇರಿದ ಮೇಲಷ್ಟೇ ಬಿಡುಗಡೆಯ ದಿನಾಂಕವನ್ನ ಪ್ರಕಟ ಮಾಡಲಿದ್ದಾರಂತೆ. ಬಹುಕೋಟಿಯಲ್ಲಿ ತಯಾರಾಗಿರುವ ಕುರುಕ್ಷೇತ್ರ ಸಿನಿಮಾವನ್ನ ನಾಗಣ್ಣ, ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಅರ್ಜುನ್ ಸರ್ಜಾ, ಸೋನು ಸೂದ್, ಮೇಘನಾ ರಾಜ್, ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ ರೆಬಲ್ ಸ್ಟಾರ್ ಅಂಬರೀಶ್ ನಟಿಸಿರುವ ಕಟ್ಟ ಕಡೆಯ ಸಿನಿಮಾವೂ ಇದಾಗಿರುವುದು . ಬೇಸರದ ಸಂಗತಿ.
No Comment! Be the first one.