ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಹೆಸರು ಪಡೆದಿರುವ ಚಾಲೆಂಜಿಂಗ್ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡುವ ಬಹುತೇಕ ನಿರ್ಮಾಪಕರಿಗೆ ದುಡ್ಡಿಗೆ ಮೋಸವಿಲ್ಲ. ಅಷ್ಟರಮಟ್ಟಿಗೆ ಡಿ ಬಾಸ್ ಸಿನಿಮಾಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಬಹುನಿರೀಕ್ಷಿತ, ಬಹು ಭಾಷಾ ಸಿನಿಮಾ ಕುರುಕ್ಷೇತ್ರ ಸಿನಿಮಾ ಕೂಡ ಅದೇ ದಾರಿಯಲ್ಲಿದೆ.
ಬಹುಕೋಟಿ ವೆಚ್ಚದ ಸಿನಿಮಾ ಇದಾಗಿದ್ದು ಅದ್ಧೂರಿ ಸೆಟ್ ಹಾಗೂ ಮೇಕಿಂಗ್ನಿಂದಲೇ ಗಮನ ಸೆಳೆದಿದೆ. ಇದೀಗ ವರಮಹಾಲಕ್ಷೀ ಹಬ್ಬಕ್ಕೆ ಉಡುಗೊರೆಯಾಗಿ ಆಗಸ್ಟ್ 9 ರಂದು ಪ್ರಪಂಚದಾದ್ಯಂತ ಸಿನಿಮಾ ತೆರೆ ಕಾಣುತ್ತಿದೆ. ವಿಶೇಷ ಅಂದ್ರೆ ರಿಲೀಸ್ಗೂ ಮುನ್ನವೇ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 9.50 ಕೋಟಿಗೆ ಮಾರಾಟವಾಗಿದ್ದು, ಹೊಸ ದಾಖಲೆ ಬರೆದಿದೆ. ಕನ್ನಡಕ್ಕೆ ಇದೊಂದು ದಾಖಲೆ ಮೊತ್ತವಾಗಿರೋದು ವಿಶೇಷ. ಉಳಿದಂತೆ ಕನ್ನಡ ಅವತರಣಿಕೆಯ ಸ್ಯಾಟಲೈಟ್ಸ್ ರೈಟ್ಸ್ 9 ಕೋಟಿಗೆ ಮಾರಾಟವಾಗಿದೆ. ಅಲ್ಲದೇ ಪ್ರಪಂಚದಾದ್ಯಂತ ದಾಖಲೆ ಮಟ್ಟದ ಥಿಯೇಟರ್ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆಯೋ ಸೂಚನೆ ಕೊಟ್ಟಿದೆ ಕುರುಕ್ಷೇತ್ರ. ಇನ್ನು ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಕ್ರೇಜಿ ಸ್ಟಾರ್ ರವಿಚಂದ್ರನ್, ಶ್ರೀನಾಥ್, ಲಕ್ಷ್ಮೀ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಮುನಿರತ್ನಂ ಅವರು ಕುರುಕ್ಷೇತ್ರಕ್ಕೆ ಬಂಡವಾಳ ಹೂಡಿದ್ದಾರೆ.
No Comment! Be the first one.