ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ಜತೆಗೆ ಸ್ಯಾಂಡಲ್ ವುಡ್ ನಲ್ಲಿ ಕುರುಕ್ಷೇತ್ರ ಹಬ್ಬ ಕೂಡ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 50 ನೇ ಚಿತ್ರ ಕುರುಕ್ಷೇತ್ರ ಅಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಹುತಾರಾಂಗಣದಲ್ಲಿ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್, ಟೀಸರ್, ಆಡಿಯೋ, ಲಿರಿಕಲ್ ವಿಡಿಯೋ ಸಾಂಗುಗಳ ಮೂಲಕ ಸಾಕಷ್ಟು ಭರವಸೆಯನ್ನು ಮೂಡಿಸಿರುವ ಕುರುಕ್ಷೇತ್ರ ಸಿನಿಮಾವನ್ನು ರಿಲೀಸ್ ಗೂ ಮೊದಲೇ ನೋಡ್ಬೇಕಾ!
https://twitter.com/Ragsblr/status/1156961225927847941
ಯೆಸ್.. ಈ ಚಿತ್ರವನ್ನು ಬಿಡುಗಡೆ ಮುನ್ನವೇ ನೋಡಬಹುದಾಗಿದ್ದು, ಆಗಸ್ಟ್ 8ರಂದು ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಆಸಕ್ತರು ಒಂದು ದಿನ ಮುಂಚಿತವಾಗಿಯೇ ಕುರುಕ್ಷೇತ್ರ ಸಿನಿಮಾವನ್ನು ನೋಡಬಹುದಾಗಿದೆ. ಸದ್ಯದಲ್ಲೇ ಪ್ರೀಮಿಯರ್ ಶೋ ಎಲ್ಲಿ, ಟಿಕೇಟ್ ಬುಕ್ಕಿಂಗ್ ಹೇಗೆ ಎಂಬ ವಿಚಾರವನ್ನು ಚಿತ್ರತಂಡವು ಅಧಿಕೃತವಾಗಿ ತಿಳಿಸಲಿದೆ.
No Comment! Be the first one.