ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ. ಸೆಪ್ಟೆಂಬರ್ 9 ವರಮಹಾಲಕ್ಷ್ಮಿ ಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಕುರುಕ್ಷೇತ್ರ ರಿಲೀಸ್ ಆದ 14 ದಿನಗಳಲ್ಲಿ 97 ಕೋಟಿ ಗಳಿಸಿದ್ದು, ನೂರು ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ.
ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೇಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ..
ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless..@dasadarshan https://t.co/uQoQ6hpq1i— ನವರಸನಾಯಕ ಜಗ್ಗೇಶ್ (@Jaggesh2) August 26, 2019
ಬಹುತಾರಾಗಣದ ಈ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡಿದ್ದು, ವೃಷಭಾದ್ರಿ ಪ್ರೊಡಕ್ಷನ್ಸ್ ನಲ್ಲಿ ಮುನಿರತ್ನ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳ ಕೊರತೆ ಕಾಣುತ್ತಿರುವ ಸದ್ಯದ ಸಿಚುವೇಷನ್ ನಲ್ಲಿ ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. 3ಡಿ ರೂಪದಲ್ಲಿಯೂ ತೆರೆಕಂಡಿರುವ ಈ ಚಿತ್ರಕ್ಕೆ ಭಾರತದಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಯಾಂಡಲ್ ವುಡ್ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೂಡ ಕುರುಕ್ಷೇತ್ರದ ಸಕ್ಸಸ್ ನ ಕುರಿತು ಪೋಸ್ಟ್ ಮಾಡಿದ್ದು, ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೇಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ.. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless.. ಎಂದು ಬರೆದುಕೊಂಡಿದ್ದಾರೆ.
ನನ್ನ ಆನಂದಕ್ಕೆ ಪಾರವೇ ಇಲ್ಲಾ!
ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
ಭಾರಿಸಲಿ ನಮ್ಮ ಹುಡುಗರು
ಕನ್ನಡ ಡಿಂಡಿಮವ!
ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
ಕನ್ನಡಚಿತ್ರರಂಗ ರಾಯರದಯೆಯಿಂದ
ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBX— ನವರಸನಾಯಕ ಜಗ್ಗೇಶ್ (@Jaggesh2) August 26, 2019