ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ. ಭಾರತದಾದ್ಯಂತ ಹೆಚ್ಚು ಸದ್ದುಮಾಡುತ್ತಿರುವ ಕುರುಕ್ಷೇತ್ರ ಸೋಶಿಯಲ್ ಮೀಡಿಯಾದಲ್ಲಿಯೂ ಕಮಾಲು ಮಾಡುತ್ತಿದೆ. ಈಗಾಗಲೇ ರಾ ಅಂಡ್ ರೊಮ್ಯಾಂಟಿಕ್ ಸಾಂಗನ್ನು ಬಿಡುಗಡೆ ಮಾಡಿರುವ ಕುರುಕ್ಷೇತ್ರ ಇಂದು ಸಂಜೆ 06.30ಕ್ಕೆ ಎಲ್ಲಿರುವೇ ಹರಿಯೇ ಎಂಬ ಹಾಡನ್ನು ಬಿಡುಗಡೆ ಮಾಡಲಿದೆ.

ಇದು ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣನಿಗಾಗಿ ಮನವಿ ಮಾಡುವ ಶೋಕ ಗೀತೆ ಇದಾಗಿದ್ದು, ದ್ರೌಪದಿ ಪಾತ್ರದಲ್ಲಿ ದಕ್ಷಿಣ ಭಾರತದ ಬಹುಭಾಷಾ ನಟಿ ಸ್ನೇಹ ನಟಿಸಿದ್ದಾರೆ. ಕೃಷ್ಣನ ಪಾತ್ರದಲ್ಲಿ ರವಿ ಚಂದ್ರನ್ ‍ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಎಲ್ಲಿರುವೇ ಹರಿಯೇ ಎಂಬ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಭಾರತದಾದ್ಯಂತ ಬಹುಭಾಷೆಗಳಲ್ಲಿ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ.

CG ARUN

ಇನ್ ಸ್ಟಾಗ್ರಾಮ್ ಗೂ ಎಂಟ್ರಿ ಕೊಟ್ಟ ಹ್ಯಾಟ್ರಿಕ್ ಹೀರೋ!

Previous article

ಸುಳ್ಳು, ಸೆಳೆತಗಳ ಪುರಾಣ ಪರ್ವ: ಆದಿಲಕ್ಷ್ಮಿ ಪುರಾಣ!

Next article

You may also like

Comments

Leave a reply

Your email address will not be published. Required fields are marked *