ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ ಕುರುಕ್ಷೇತ್ರ. ಈ ಚಿತ್ರಕ್ಕಾಗಿ ಕಳೆದ ವರ್ಷವಿಡೀ ಅಭಿಮಾನಿಗಳು ಕಾದು ಕೂತಿದ್ದರು. ಆದರೆ ಹೊಸಾ ಸಂವತ್ಸರ ಬಂದರೂ ಈ ಸಿನಿಮಾದ ನಿಖರವಾದ ಬಿಡುಗಡೆಯ ದಿನಾಂಕ ಇನ್ನೂ ಜಾಹೀರಾಗಿಲ್ಲ. ಆದರೆ ಯಜಮಾನ ಚಿತ್ರಕ್ಕಿಂತ ಮೊದಲೇ ಕುರುಕ್ಷೇತ್ರ ಶುರುವಾಗೋ ಸೂಚನೆಯಂತೂ ಸಿಕ್ಕಿದೆ!
ಇಂಥಾದ್ದೊಂದು ಸೂಚನೆ ಸಿಕ್ಕಿರೋದು ಯಜಮಾನ ಚಿತ್ರದ ಕಡೆಯಿಂದಲೇ ಅನ್ನೋದು ವಿಶೇಷ. ಯಜಮಾನ ಚಿತ್ರದ ಶಿವಾನಂದಿ ಹಾಡೀಗ ಸೂಪರ್ ಹಿಟ್ ಆಗಿದೆಯಲ್ಲಾ? ಯೂಟ್ಯೂಬಿನಲ್ಲಿ ಇದರ ವಿವರಣೆಯ ಜಾಗದಲ್ಲಿ ಯಜಮಾನ ೫೧ನೇ ಚಿತ್ರ ಅಂತ ಬರೆಯಲಾಗಿದೆ. ಅಲ್ಲಿಗೆ ದರ್ಶನ್ ಅವರ ಐವತ್ತನೇ ಚಿತ್ರ ಕುರುಕ್ಷೇತ್ರ ಮತ್ತದು ಯಜಮಾನಕ್ಕಿಂತ ಮೊದಲೇ ಬಿಡುಗಡೆಯಾಗುತ್ತದೆಂಬುದು ಪಕ್ಕಾ ಆಗಿದೆ.
ಕುರುಕ್ಷೇತ್ರ ದೊಡ್ಡ ಕ್ಯಾನ್ವಾಸಿನ ಬಿಗ್ ಬಜೆಟ್ ಚಿತ್ರ. ಬಾಹುಬಲಿಯನ್ನೇ ಮೀರಿಸುವಂಥಾ ಆವೇಗದೊಂದಿಗೆ ಶುರುವಾಗಿದ್ದ ಕುರುಕ್ಷೇತ್ರಕ್ಕೆ ಸಹಜವಾಗಿಯೇ ಸಾಕಷ್ಟು ಸಮಯ ಹಿಡಿದಿತ್ತು. ಆದರೆ ಇದರ ಕಡೇಯ ಹಂತದಲ್ಲಿ ಟೇಕಾಫ್ ಆಗಿದ್ದ ಯಜಮಾನ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಆದ್ದರಿಂದಲೇ ಕಳೆದ ವರ್ಷದ ಕಡೇಯ ಹೊತ್ತಿಗೆಲ್ಲ ಯಜಮಾನ ಚಿತ್ರವೇ ಮೊದಲು ಬಿಡುಗಡೆಯಾಗುತ್ತದೆಂಬಂಥಾ ಸುದ್ದಿ ಹರಡಿಕೊಂಡಿತ್ತು.
ಆದರೆ ಈ ಬಾರಿ ಹಬ್ಬದಂತೆ ಕುರುಕ್ಷೇತ್ರವೇ ಮೊದಲು ಬಿಡುಗಡೆಯಾಗೋ ಸೂಚನೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಯಜಮಾನ ಆಗಮಿಸಲಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಂಭ್ರಮಿಸೋದಕ್ಕೆ ಇದಕ್ಕಿಂತ ಬೇರೇನು ಬೇಕು?
#
No Comment! Be the first one.