ದಕ್ಷಿಣ ಭಾರತ ಸಿನಿಮಾಗಳ ನಟಿ ರಾಯಿ ಲಕ್ಷ್ಮೀ ಕನ್ನಡ ಮೂಲದ ಬೆಡಗಿ. ವಿವಿಧ ಭಾಷೆಗಳ ಚಿತ್ರಗಳಲ್ಲಿ ಬಿಝಿಯಾಗಿರುವ ನಟಿಗೆ ಸದಾ ಚಾಲ್ತಿಯಲ್ಲಿರುವ ಕಲೆ ಸಿದ್ಧಿಸಿದೆ. ಚಲಾವಣೆಯಲ್ಲಿರಲು ಅವರು ಒಂದಿಲ್ಲೊಂದು ಸುದ್ದಿ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಮುಮ್ಮೂಟಿ ಜೊತೆ ನಟಿಸಿರುವ ಅವರ ’ಒರು ಕುಟ್ಟನಾದನ್ ಬ್ಲಾಗ್’ ಮಲಯಾಳಂ ಚಿತ್ರ ತೆರೆಕಂಡಿತ್ತು. ಚಿತ್ರಗಳು ಇಲ್ಲದಾಗ ಅವರು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ತಮ್ಮ ಸಿನಿಮಾಗಳು ಹಾಗೂ ವೈಯಕ್ತಿಕ ಬದುಕಿನ ವಿಷಯಗಳನ್ನು ತಮ್ಮ ಆಕರ್ಷಕ ಫೋಟೋಗಳೊಂದಿಗೆ ಟ್ವೀಟ್ ಮಾಡುವುದು ಅವರ ನೆಚ್ಚಿನ ಹವ್ಯಾಸ. ಇದೀಗ ಅಂಥದ್ದೇ ಅವರ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
’ಸಮುದ್ರದ ಅಲೆಗಳಂತೆ ಸಂತೋಷ ಬದುಕಿಗೆ ಬರುತ್ತದೆ’ ಎನ್ನುವ ಅಡಿಟಿಪ್ಪಣಿಯೊಂದಿಗೆ ಲಕ್ಷ್ಮೀ ತಮ್ಮ ಬಿಕಿನಿ ಫೋಟೋ ಟ್ವೀಟ್ ಮಾಡಿದ್ದಾರೆ. ಅವರ ಈ ಫೋಟೋವನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಶೇರ್ ಮಾಡಿದ್ದಾರೆ. ಕೊಂಚ ಸಣ್ಣಗಾಗಿರುವಂತೆ ಕಾಣಿಸುವ ಅವರು, ತಮ್ಮ ಮೇಕ್‌ಓವರ್ ತೋರಿಸಲೆಂದೇ ಈ ಫೋಟೋ ಹಾಕಿರುವಂತಿದೆ. ಇನ್ನು ಸಿನಿಮಾಗೆ ಸಂಬಂಧಿಸಿದಂತೆ ನಟ ಜೈ ಜೊತೆಗೆ ಅವರು ನಟಿಸಿರುವ ’ನೀಯಾ ೨’ ತಮಿಳು ಸಿನಿಮಾ ತೆರೆಗೆ ಸಿದ್ಧವಾಗಿದೆ. ’ವೆಂಕಟ ಲಕ್ಷ್ಮೀ’ ತೆಲುಗು ಹಾರರ್ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ಚಿತ್ರ ’ಸಿಂಡ್ರೆಲ್ಲಾ’ ಶೀರ್ಷಿಕೆಯಡಿ ತಮಿಳಿನಲ್ಲೂ ತೆರೆಗೆ ಬರಲಿದೆ.
Leave a Reply
You must be logged in to post a comment.