ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ, ಯೋಗಿ ನಾಯಕರಾಗಿ ನಟಿಸಿರುವ ‘ಲಂಬೋದರ‘ ಚಿತ್ರಕ್ಕಾಗಿ ಗೌಸ್ಫ಼ಿರ್ ಅವರು ಬರೆದಿರುವ ಕೇಡಿ ಸಾಂಗ್ ಹಾಡಿನ ಲಿರಿಕಲ್ ವೀಡಿಯೋವನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಕೇರಳದ ವೈಕಮ್ ವಿಜಯಲಕ್ಷ್ಮೀ ಈ ಹಾಡನ್ನು ಹಾಡಿದ್ದಾರೆ. ಮುಂದಿನ ವಾರ ಚಿತ್ರದ ಮತ್ತೊಂದು ಹಾಡನ್ನು ಚಿತ್ರರಂಗದ ಗಣ್ಯರೊಬ್ಬರು ಬಿಡುಗಡೆ ಮಾಡಲಿದ್ದಾರಂತೆ. ರಘುಶಾಸ್ತ್ರಿ, ರಂಗನ ಸ್ಟೈಲ್ ಪ್ರಶಾಂತ್ ಹಾಗೂ ಕೋಲಾರ ಸೀನು ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ.
ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರಕ್ಕೆ ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ, ಭೂಮಿಕಾ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
#
No Comment! Be the first one.