ಈವಾರ ಲಂಗೋಟಿ ಮ್ಯಾನ್ ಚಿತ್ರ ತೆರೆಗೆಬರುತ್ತಿದೆ. ಭಿನ್ನ ಶೀರ್ಷಿಕೆಯ ಅಷ್ಟೇ ಹೊಸತನದ ಕಥಾವಸ್ತು ಹೊಂದಿರು ಲಂಗೋಟಿ ಮ್ಯಾನ್ ಬಗ್ಗೆ ಅದರ ನಿರ್ದೇಶಕಿ ಸಂಜೋತಾ ಒಂದಿಷ್ಟು ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ…!
ಟೀಸರ್ ನೋಡಿದ ಕೆಲವರು ನಮ್ಮ ಚಿತ್ರದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದು ನಿಜ. ಯಾವಾಗ ಹಾಡು ಅನಾವರಣಗೊಂಡಿತೋ ಆಗ ಜನಕ್ಕೆ ವಾಸ್ತವದ ಅರಿವಾಯಿತು. ಲಂಗೋಟಿ ಮ್ಯಾನ್ ಎನ್ನುವ ಹೆಸರಿಟ್ಟಿದ್ದೇವೆ ಹೊರತು, ಇದು ಯಾವುದೇ ಜನಾಂಗ ಅಥವಾ ವರ್ಗವನ್ನು ಲೇವಡಿ ಮಾಡುವ ಉದ್ದೇಶ ಹೊಂದಿಲ್ಲ ಅನ್ನೋದು ಟ್ರೇಲರ್ ಬರುವ ಹೊತ್ತಿಗೆ ಪ್ರತಿಯೊಬ್ಬರಿಗೂ ಅರಿವಾಗಿದೆ. ಈ ಚಿತ್ರದಲ್ಲಿ ಸ್ಟ್ರಾಂಗ್ ಆಗಿರುವಂಥಾ ಕಂಟೆಂಟ್ ಇದೆ ಅನ್ನೋದು ಈಗ ಎಲ್ಲರ ಗಮನಕ್ಕೆ ಬಂದಿದೆ. ಆರಂಭದಲ್ಲಿ ಯಾರೆಲ್ಲಾ ನೆಗೆಟೀವ್ ಆಗಿ ಕಮೆಂಟ್ ಮಾಡುತ್ತಿದ್ದರೋ ಅವರೇ ಈಗ ಸಿನಿಮಾದ ಕುರಿತು ಒಳ್ಳೇ ಮಾತುಗಳನ್ನಾಡುವಂತಾಗಿದೆ. ನಮ್ಮ ಸಿನಿಮಾದ ಬಗ್ಗೆ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಆಸಕ್ತಿ ತೋರುತ್ತಿದ್ದಾರೆ. ಟ್ರೇಲರ್ ಮತ್ತು ಹಾಡುಗಳ ಕಮೆಂಟ್ ಬಾಕ್ಸನ್ನು ನೋಡಿದರೇನೆ ಇದು ಗೊತ್ತಾಗುವಂತಿದೆ. ನಿಮಗೆ ತುಂಬಾ ಕುತೂಹಲ ಅನ್ನಿಸಿದು. ಲಂಗೋಟಿ ಮ್ಯಾನ್ ಚಿತ್ರದ ಟ್ರೇಲರನ್ನು ಮಕ್ಕಳು ತುಂಬಾ ಇಷ್ಟ ಪಟ್ಟು ನೋಡುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನವರು, ಪರಿಚಯಸ್ತರ ಮನೆಗಳಲ್ಲಿ ಮಕ್ಕಳು ಪದೇ ಪದೇ ಟ್ರೇಲರ್ ನೋಡುತ್ತಿರುವುದು ಮತ್ತು ʻಥೇಟರಿಗೆ ಕರೆದುಕೊಂಡು ಹೋಗಿ ಈ ಮೂವಿ ತೋರಿಸಿʼ ಅಂತಾ ಕೇಳುತ್ತಿದ್ದಾರೆ ಎನ್ನುವ ವಿಚಾರ ನಮ್ಮ ಕಿವಿಗೆ ಬೀಳುತ್ತಲೇ ಇದೆ. ಈ ವರೆಗೂ ಯಾವುದೇ ಸಿನಿಮಾಗಳ ಗೆಲುವಿನ ಫಾರ್ಮುಲಾಗಳನ್ನು ಹುಡುಕಿದಾಗ, ಫ್ಯಾಮಿಲಿ ಮತ್ತು ಮಕ್ಕಳು ಮೆಚ್ಚಿದ ಚಿತ್ರಗಳೆಲ್ಲಾ ದೊಡ್ಡ ಮಟ್ಟದ ಗೆಲುವು ಕಂಡಿವೆ. ಬಹುಶಃ ಲಂಗೋಟಿ ಮ್ಯಾನ್ ಕೂಡಾ ಹೀಗೇ ಆಗಲಿ ಅನ್ನೋದು ನಮ್ಮ ಬಯಕೆ.
No Comment! Be the first one.