ಇದೇ ವಾರ ಲಂಗೋಟಿ ಮ್ಯಾನ್ ಹೆಸರಿನ ಚಿತ್ರ ತೆರೆಗೆ ಬರುತ್ತಿದೆ. ಪುರುಷರ ಅಸ್ತಿತ್ವವೇ ಆಗಿರುವ ಲಂಗೋಟಿಯ ಸುತ್ತ ಕಥಾವಸ್ತುವನ್ನು ಹೆಣೆದು, ಅದಕ್ಕೆ ಪೂರಕವಾದ ತಮಾಷೆಯನ್ನೂ ಬೆರೆಸಿ ಸಿನಿಮಾರೂಪದಲ್ಲಿ ಕಟ್ಟಿರುವವರು ಮಹಿಳಾ ನಿರ್ದೇಶಕಿ. ಹೆಚ್ಚೇನಲ್ಲ, ಕಳೆದ ಒಂಭತ್ತು ವರ್ಷಗಳ ಹಿಂದಷ್ಟೇ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ನೋಡಿದ ಎಲ್ಲರೂ ಇಷ್ಟಪಟ್ಟಿದ್ದ ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಸಂಜೋತಾ. ಮೊದಲ ಸಿನಿಮಾದ ನಿರ್ದೇಶನದ ನಂತರ ಟೀವಿ ವಾಹಿನಿಯಲ್ಲಿ ನೌಕರಿ ಆರಂಭಿಸಿದ್ದರು. ಟೀವಿ ಉದ್ಯಮದ ಒತ್ತಡ ಮತ್ತು ಏಕತಾನತೆಯ ಕೆಲಸಗಳ ನಡುವೆ ಅದೇನನ್ನಿಸಿತೋ? ಸಂಜೋತಾ ಮನಸ್ಸಿನಲ್ಲಿ ಮತ್ತೆ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಬಯಕೆ ಮೂಡಿತ್ತು. ಇನ್ನೇನು ಎಲ್ಲ ತಯಾರಿ ಮುಗಿದು, ಚಿತ್ರೀಕರಣ ಆರಂಭಿಸಬೇಕು ಎನ್ನುವಷ್ಟರಲ್ಲಿ ಅಮರಿಕೊಂಡುತ್ತು ನೋಡಿ… ಮಹಾಮಾರಿ ಕೊರೋನಾ! ಕೋವಿಡ್ ಸಾಕಷ್ಟು ಜನರ ಕನಸಿಗೆ ತಣ್ಣೀರೆರೆಚಿತ್ತು. ಸಂಜೋತಾ ಅವರ ಸಿನಿಮಾ ಕೂಡಾ ಚೂರು ತಡವಾಗಿ ಶುರುವಾಗಲು ಕಾರಣವಾಗಿದ್ದು ಕೂಡಾ ಇದೇ ಕೋವಿಡ್ಡು. ವೈರಸ್ಸು ವಾಪಾಸು ಹೋಗುತ್ತಿದ್ದಂತೇ ಮತ್ತೆ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದ್ದರು ಸಂಜೋತಾ.
ಬಟ್ಟೆ ಅನ್ನೋದನ್ನು ಎಲ್ಲರೂ ಹಾಕೇ ಹಾಕುತ್ತಾರೆ. ಬಟ್ಟೆ ಹಾಕೋ ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು! ಇದು ಬಟ್ಟೆಯ ಸುತ್ತಲೇ ಬೆಸೆದುಕೊಂಡಿರುವ ಕಥೆ.
ಬಟ್ಟೆ, ಅಂಡರ್ವೇರ್ ಕುರಿತಾದ ಕಥೆ ಇದಾಗಿರೋದರಿಂದ ಯೂನಿವರ್ಸಲ್ ಸಬ್ಜೆಕ್ಟ್ ಇದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನಕ್ಕೆ ಈ ಕಥೆ ಹತ್ತಿರವಾಗುತ್ತದೆ. ಆದರೂ ಇದನ್ನು ಕನ್ನಡ ಭಾಷೆಯೊಂದರಲ್ಲೇ ಮಾಡಿದ್ದೇವೆ. ಬಹುಶಃ ಲಂಗೋಟಿ ಮ್ಯಾನ್ನನ್ನು ಜನ ಒಳ್ಳೇ ರೀತಿಯಲ್ಲಿ ಸ್ವೀಕರಿಸಿದ್ದೇ ಆದಲ್ಲಿ ಮುಂದೆ ಇತರೆ ಭಾಷೆಗಳಿಗೆ ಡಬ್ ಅಥವಾ ರಿಮೇಕ್ ಆಗುವ ಸಾಧ್ಯತೆ ಇದೆ ಅನ್ನೋದು ಸಂಜೋತಾ ಅವರ ಅಭಿಪ್ರಾಯ.
ಇಂಥದ್ದೊಂದು ಗಂಭೀರ ಕಥಾವಸ್ತುವಿನ ಕುರಿತಾಗಿ ಸಿನಿಮಾ ಮಾಡಿದಾಗ ಕನ್ನಡದ ಪ್ರೇಕ್ಷಕರು ಅಥವಾ ಚಿತ್ರೋದ್ಯಮದವರು ಕೇಳುವ ಪ್ರಶ್ನೆ ಇದು ಕಮರ್ಷಿಯಲ್ಲಾ ಅಥವಾ ಪ್ರಯೋಗಾತ್ಮಕ ಚಿತ್ರವಾ? ಅಂತಾ. ಹಾಗೆ ನೋಡಿದರೆ ಹಿಂದಿ, ತಮಿಳು ಸೇರಿದಂತೆ ನೆರೆಯ ಭಾಷೆಗಳಲ್ಲಿ ಇಂಥ ಯಾವ ಕೆಟಗರಿಗಳೂ ಇರೋದಿಲ್ಲ. ರಾಜ್ ಕುಮಾರ್ ಹಿರಾನಿ ಥರದ ನಿರ್ದೇಶಕರು ಪ್ರಯೋಗಗಳನ್ನೇ ಕಮರ್ಷಿಯಲ್ಲಾಗಿ ಕಟ್ಟಿಕೊಡುತ್ತಾರೆ. ಬಹುಶಃ ನಮ್ಮ ಚಿತ್ರ ಕೂಡಾ ಅದೇ ರೀತಿ. ಲಂಗೋಟಿ ಮ್ಯಾನ್ ಕಮರ್ಷಿಯಲ್ಲೂ ಹೌದು ಪ್ರಯೋಗವೂ ಇದರಲ್ಲಿದೆ. ಕಮರ್ಷಿಲ್ ಅಂದರೆ ಹೀರೋ ಬಿಲ್ಡಪ್ ಇರಬೇಕು, ನಾಲ್ಕಾರು ಜನರನ್ನು ಬಡಿಯಬೇಕು ಅನ್ನೋದೇ ತಪ್ಪು ಪರಿಕಲ್ಪನೆ. ಯಾವ ಸಿನಿಮಾ ಥೇಟರಿಗೆ ಬಂದು ನೋಡುವಂಥಾ ಕಂಟೆಂಟ್ ಹೊಂದಿರುತ್ತದೋ ಅದು ಕಮರ್ಷಿಯಲ್ ಚಿತ್ರ.
No Comment! Be the first one.