ಲಾಸ್ಟ್ ಸೀನ್ ಹೆಸರಿನ ವಿಡಿಯೋ ಸಾಂಗ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಯಾವ ಸಿನಿಮಾ ಹಾಡಿಗೂ ಕಡಿಮೆಯಿಲ್ಲದಂತೆ ರೂಪಿಸಲಾಗಿರುವ ಈ ಸಾಂಗನ್ನು ನೋಡಿದವರೆಲ್ಲಾ ಇದರ ನಿರ್ದೇಶಕನ ಬಗ್ಗೆ ಮೆಚ್ಚುಗೆಯ ಮಾತಾಡುತ್ತಿದ್ದಾರೆ. ನಿರ್ದೇಶಕ ನಾಗಚಂದ್ರ ಬಳಿ ಸಹಾಯಕರಾಗಿದ್ದ ವಿನಾಯಕ್ ಅಚ್ಚುಕಟ್ಟಾಗಿ ರೂಪಿಸಿರುವ ಹಾಡಿದು. ಭವಿಷ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ವಿನಾಯಕ್ ಪರಿಪೂರ್ಣ ನಿರ್ದೇಶಕನಾಗಿ ನಿಲ್ಲಬಲ್ಲರು ಅನ್ನೋದನ್ನು ಈ ಹಾಡು ತೋರಿಸಿಕೊಟ್ಟಿದೆ.
ಬಹುತೇಕ ಹೊಸಬರೇ ಸೇರಿಕೊಂಡು 4.30 ನಿಮಿಷದ ʻಲಾಸ್ಟ್ ಸೀನ್’ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ. ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿರುವ ಎನ್.ವಿನಾಯಕ್ ಮಾತನಾಡಿ ಮೊದಲ ಬಾರಿ ನಮ್ಮ ಭಾಷೆ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಹಾಡನ್ನು ಸಿದ್ದಪಡಿಸಲಾಗಿದೆ. ಮೂರು ದಿನಗಳ ಕಾಲ ಬೆಂಗಳೂರು, ಮಂಗಳೂರು, ದಾಬಸ್ಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಮಾಜದಲ್ಲಿ ಒಂದು ಹುಡುಗಿ ಅತ್ಯಾಚಾರವಾದಾಗ ಆಕೆ ಅನುಭವಿಸುವ ನೋವು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಮಿಯಾದವನು ಯಾವ ರೀತಿ ವೇದನೆ ಪಡುತ್ತಾನೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.
ವಾಟ್ಸ್ ಅಪ್ದಲ್ಲಿ ಕೊನೆ ಸಲ ನೋಡಿ, ಬೆಳಿಗ್ಗೆ ಆಗುವುದರ ಒಳಗೆ ದುಷ್ಟರಿಂದ ಅನ್ಯಾಯಕ್ಕೆ ಒಳಗಾಗಿರುತ್ತಾಳೆ. ಅವನು ಮತ್ತೆ ಫೋನ್ದಲ್ಲಿ ಉತ್ತರಿಸುತ್ತಾಳಾ ಎಂಬುದಕ್ಕೆ ಕಾಯುತ್ರಿರುತ್ತಾನೆ. ಅದಕ್ಕಾಗಿ ಇದನ್ನೆ ಇಡಲಾಗಿದೆ ಎಂದು ಟೈಟಲ್ ಇಡಲಾಗಿದ್ದಕ್ಕೆ ಸಮಜಾಯಿಷಿ ನೀಡಿದರು. ಶಿಷ್ಯ ರಿಚ್ ಆಗಿ ಹಾಡನ್ನು ಚಿತ್ರೀಕರಿಸಿದ್ದಾರೆ. ಸಿನಿಮಾದಲ್ಲಿ ಶೀರ್ಷಿಕೆಗೆ ಕ್ಲೈಮಾಕ್ಸ್ ಎಂದು ಕರೆಯುತ್ತೇವೆ. ರೈನ್ ಎಫೆಕ್ಟ್, ದ್ರೋಣ್, ಕ್ರೇನ್ ಉಪಯೋಗಿಸಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಇಂದು ಐದು ಲಕ್ಷದಲ್ಲಿ ಸಿನಿಮಾ ಮಾಡುವವರ ಪೈಕಿ, ಇವರು ಅದೇ ಮೊತ್ತದಲ್ಲಿ ಹಾಡಿಗೆ ಖರ್ಚು ಮಾಡಿರುವುದು ನೋಡಿದಾಗ ಖುಷಿಯಾಗುತ್ತದೆ. ಮುಂದೆ ಹಿರಿತೆರೆಗೆ ನಿರ್ದೇಶಕರಾಗಿ ಬರಲೆಂದು ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಶುಭ ಹಾರೈಸಿದರು.
ಟೆಂಟ್ ವಿದ್ಯಾರ್ಥಿಯಾಗಿರುವ ವಾಗೀಶ್ಆಯುಷ್ ನಾಯಕ ಮತ್ತು ಟೆಕ್ಕಿ ಸಂಗೀತ ನಾಯಕಿ. ಇಬ್ಬರು ಅನುಭವಗಳನ್ನು ಹಂಚಿಕೊಂಡು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಸಂಕಲನ ಕೃಷ್ಣಸುಜಾನ್, ನೃತ್ಯ ಮೋಹನ್ಜಾಕ್ಸನ್ ಮುಖ್ಯ ಅತಿಥಿ ಶಿವು, ಶ್ರೀಧರ್ಕಶ್ಯಪ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಛಾಯಾಗ್ರಹಣ ಮನು.ಬಿ.ಕೆ, ಸಂಗೀತ ಜುಬೇರ್ಮೊಹಮದ್, ಸಾಹಿತ್ಯ ಪ್ರಮೋದ್ಆಚಾರ್ಯ, ಗಾಯನ ವಾಸುಕಿವೈಭವ್ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ವಿನು ಐಡಿಯಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಗೊಂಡಿರುವ ಕನ್ನಡದ ಹಾಡು ಭಾನುವಾರ ಆನಂದ್ ಆಡಿಯೋ ಯೂ ಟ್ಯೂಬ್ದಲ್ಲಿ ಲೋಕಾರ್ಪಣೆಗೊಂಡಿದೆ. ತರುವಾಯ ಒಂದು ವಾರ ಗ್ಯಾಪ್ದಲ್ಲಿ ಇತರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.