ಪಾಕಿಸ್ತಾನದ ಕಲಾವಿದೆ ಸುಂದಾಸ್ ಮಲಿಕ್ ಮತ್ತು ಭಾರತೀಯ ಹಿಂದೂ ಮಹಿಳೆ ಅಂಜಲಿ ಚಕ್ರ ಅವರ ಇತ್ತೀಚಿಗೆ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರ ಒಂದು ಪೋಸ್ಟ್ ನಲ್ಲಿ ಅಂಜಲಿ ಚಕ್ರ ತಮ್ಮ ಲೆಸ್ಬಿಯನ್ ಕಥೆಯನ್ನು ಹಂಚಿಕೊಂಡಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/BzKBQWrFXJz/?utm_source=ig_web_copy_link
” ನಾವು ಮೊದಲು ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ ನಾನು ಕೆಲಸಕ್ಕೆ ಸೇರಿದಾಗ ಸುಂದಾಸ್ ಇದ್ದಾಳೆಂಬ ಧೈರ್ಯದಲ್ಲಿ ಇರುತ್ತಿದ್ದೆ. ಯಾಕೆಂದರೆ ನನಗೆ ಜನರ ಮೇಲೆ ಬಹಳ ಭಯವಿತ್ತು. ಆಕೆ ನನಗೆ ಬೆಂಗಾವಲಾಗಿ ನಿಂತಿರುತ್ತಿದ್ದಳು. ಹಾಗೆಯೇ ನಮ್ಮ ಜೀವನವು ಕಲರ್ ಫುಲ್ ಆಗಿಯೇ ಸಾಗುತ್ತಿತ್ತು. ಒಂದು ವರ್ಷದ ನಂತರ ನಾವು ನಮ್ಮ ವಾರ್ಷಿಕೋತ್ಸವವನ್ನು ನನ್ನ ಸೋದರ ಸಂಬಂಧಿ ವಿವಾಹದಲ್ಲಿ ಆಚರಿಸಿಕೊಂಡೆವು. ಅಲ್ಲಿ ನನ್ನ ಆತ್ಮೀಯರನ್ನು ಭೇಟಿಯಾದೆ. ನಾವು ಇನ್ನಷ್ಟು ಹತ್ತಿರವಾಗಲು ಇನ್ನೂ ಹಲವು ವರ್ಷಗಳು ಕಳೆದವು”.
https://www.instagram.com/p/B0ejoIJnVdV/?utm_source=ig_web_copy_link
ಇನ್ನು ಸುಂದಾಸ್ ಮಲಿಕ್ ಕೂಡ ತಮ್ಮ ಇತ್ತೀಚಿನ ಫೋಟೋ ಶೂಟ್ ನ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ‘ನಾನು ಅವಳ ಲೆಹೆಂಗಾಗೆ ಕುರ್ತಾ ಆಗಿದ್ದೇನೆ. ಆದ್ದರಿಂದ ಸಾಂಪ್ರದಾಯಿಕ ಬಟ್ಟೆಗಳೊಂದಿಗೆ ಕಾಣಿಸಿಕೊಳ್ಳುವುದು ನನಗೆ ಸ್ವಲ್ಪ ಒತ್ತಡವನ್ನುಂಟುಮಾಡಿದೆ. ಅದೃಷ್ಟವಶಾತ್ @borrowthebazaar ನಾನು ಆರಿಸಬಹುದಾದ ಬಟ್ಟೆಗಳನ್ನು ಆಯ್ಕೆ ಮಾಡಿದೆ, ಹಾಗಾಗಿ ಅಂಜಲಿಯ ಕುಟುಂಬವನ್ನು ಭೇಟಿಯಾದಾಗ ನಾನು ಹಾಯಾಗಿರುತ್ತೇನೆ”
No Comment! Be the first one.