ಮೂಲತಃ ರೇಡಿಯೋ ಜಾಕಿಯಾದ ಆರ್ಜೆ ಬಾಲಾಜಿ ನಟನೆಯ ’ಎಲ್ಕೆಜಿ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇಲ್ಲಿ ಎಲ್ಕೆಜಿ ಅಂದರೆ ಲಾಲ್ಗುಡಿ ಕರುಪ್ಪಯ್ಯ ಗಾಂಧಿ! ಅದು ರಾಜಕಾರಣಿ ಪಾತ್ರ ಮಾಡಿರುವ ಆರ್ಜೆ ಬಾಲಾಜಿ ಹೆಸರು. ಕೆ.ಆರ್.ಪ್ರಭು ನಿರ್ದೇಶನದ ಈ ಚಿತ್ರದ ಟ್ರೈಲರ್ನಲ್ಲಿ ಭಾರತೀಯ ರಾಜಕಾರಣಿಗಳ ಅಣಕವಿದೆ. ನಾನು ಅಂದುಕೊಂಡದ್ದನ್ನು ನೀನು ನೆರವೇರಿಸಿದರೆ, 300 ಕೋಟಿ ರೂಪಾಯಿ ಖರ್ಚು ಮಾಡಿ ನಿನ್ನದೊಂದು ಪ್ರತಿಮೆ ನಿಲ್ಲಿಸುತ್ತೇನೆ ಎನ್ನುತ್ತಾನೆ ಚಿತ್ರದ ನಾಯಕ.
ಹೀಗೆ ಟ್ರೈಲರ್ ಉದ್ದಕ್ಕೂ ದೇಶದ ಸಮಕಾಲೀನ ರಾಜಕೀಯವನ್ನು ಅಣಕವಾಡುವ ಸಂಭಾಷಣೆಗಳಿವೆ. ಚಿತ್ರದ ನಾಯಕ ಆರ್ಜೆ ಬಾಲಾಜಿ ಅವರೇ ಚಿತ್ರಕಥೆ ಬರೆದಿದ್ದಾರೆ. ರಾಜಕಾರಣಿಯಾಗಿ ಬೆಳೆಯುವ ಲಾಲ್ಗುಡಿಯ ಕತೆ ಇಲ್ಲಿದೆ. ತಮಿಳುನಾಡು ಸೇರಿದಂತೆ ದೇಶದ ರಾಜಕಾರಣದಲ್ಲಿನ ಇತ್ತೀಚಿನ ಕೆಲವು ವಿಚಾರಗಳು ಇಲ್ಲಿ ಪ್ರಸ್ತಾಪವಾಗುತ್ತವೆ. ನಟ ಕಮಲಹಾಸನ್ ರಾಜಕೀಯ ಪ್ರವೇಶ, ಜೆಲ್ಲಿಕಟ್ಟು ವಿವಾದ, ಗೋಹತ್ಯೆಗೆ ಸಂಬಂಧಿಸಿದ ರಾಜಕಾರಣ ಸೇರಿದಂತೆ ಕೆಲವು ವಿವಾದಗಳನ್ನು ವಿಡಂಬಿಸಲಾಗಿದೆ.
ಹಸು ಮತ್ತು ಮನುಷ್ಯ ತೊಂದರೆಗೆ ಸಿಲುಕಿದ್ದರೆ, ಯಾರನ್ನು ಕಾಪಾಡುತ್ತೀರಿ? ಎನ್ನುವ ಒಂದು ಸಂಭಾಷಣೆ ಟ್ರೈಲರ್ನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಿನ ಯೋಗವನ್ನು ಅಣಕವಾಡುವ ಸನ್ನಿವೇಶವೂ ಇದೆ! ಜೆ.ಕೆ.ರಿತೇಶ್ ಮತ್ತು ನಂಜಿಲ್ ಸಂಪತ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ’ನಾನಂ ರೌಡಿ ಧಾನ್’, ’ಕಾಟ್ರು ವಿಲಿಯಿದೈ’ ತಮಿಳು ಚಿತ್ರಗಳಲ್ಲಿ ನಟಿಸಿದ್ದ ಆರ್ಜೆ ಬಾಲಾಜಿ ’ಎಲ್ಕೆಜಿ’ಯಲ್ಲಿ ಪೂರ್ಣಪ್ರಮಾಣದ ನಾಯಕನಾಗಿದ್ದಾರೆ.
https://youtu.be/xk7t408VZAY #
No Comment! Be the first one.