ಎಲ್.ಎನ್ ಶಾಸ್ತ್ರಿ ತಮ್ಮ ಕಡೇಯ ದಿನಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದ, ಹಾಡಿದ್ದ ಕೊನೆಯ ಚಿತ್ರ ಮೇಲೊಬ್ಬ ಮಾಯಾವಿ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮುಖ್ಯ ಪಾತ್ರವನ್ನೂ ಕೂಡಾ ಈ ಸಿನಿಮಾದಲ್ಲಿ ಚಂದ್ರಚೂಡ್ ನಿರ್ವಹಿಸಿದ್ದಾರೆ. ಇದೀಗ ಮೇಲೊಬ್ಬ ಮಾಯಾವಿ ಹಾಡುಗಳು ಎಲ್ಲಡೆ ಹರಿದಾಡುತ್ತಿವೆ.
ಖ್ಯಾತ ಗಾಯಕ ಎಲ್. ಎನ್ ಶಾಸ್ತ್ರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಹಂತದಲ್ಲಿ ಅನಾರೋಗ್ಯದಿಂದ ಕಂಗಾಲಾಗಿದ್ದರೂ ತಮ್ಮ ಕೆಲಸವನ್ನವರು ಉತ್ಸಾಹದಿಂದಲೇ ನಿರ್ವಹಿಸಿದ್ದರು. ಕಡೆಗೆ ರೆಕಾರ್ಡಿಂಗಿಗೂ ಬರಲಾರದ ಪರಿಸ್ಥಿತಿ ಹೊಂದಿದ್ದರೂ ಕೂಡಾ ಅವರು ತೋರಿದ್ದ ಉತ್ಸಾಹ, ಸಂಗೀತ ಶ್ರದ್ಧೆಗಳನ್ನು ಮತ್ತೆ ಚಿತ್ರ ತಂಡ ನೆನಪಿಸಿಕೊಂಡಿದೆ. ಅನಾರೋಗ್ಯದ ನಡುವೆಯೂ ಅವರು ಹಾಡಿರೋ ಹಾಡುಗಳು, ಧ್ವನಿಯಲ್ಲಿನ ಎನರ್ಜಿ ಎಂಥವರೂ ಅಚ್ಚರಿಗೊಳ್ಳುವಂತಿವೆ. ಈ ಹಾಡುಗಳೆಲ್ಲವೂ ಮನಸುಗಳನ್ನು ತೇವಗೊಳಿಸುವಷ್ಟು ಮಧುರವಾಗಿ ಮೂಡಿ ಬಂದಿವೆ.
ಚಂಣದ್ರಚೂಡ್ ಬರೆದಿರೋ ಕಲ್ಲಕೊಳದ, ಬುಡುಬುಡಿಕೆ ಮುಂತಾದ ಹಾಡುಗಳೂ ವಿಶಿಷ್ಟವಾಗಿ ಮೂಡಿ ಬಂದಿವೆ. ಒಟ್ಟಾರೆಯಾಗಿ ಬಿಡುಗಡೆಗೆ ಸಜ್ಜಾಗಿ ನಿಂತಿರೋ ಮೇಲೊಬ್ಬ ಮಾಯಾವಿ ಕಹಾಡುಗಳ ಮೂಲಕವೇ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈ ವ್ಯವಸ್ಥೆಯ ಅಧ್ವಾನಗಳಿಗೆ ಕನ್ನಡಿ ಹಿಡಿಯುವಂಥಾ ನೆಲದ ಕಥೆ ಹೊಂದಿರೋ ಈ ಚಿತ್ರವನ್ನ ನವೀನ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಬೇರೆಯದ್ದೇ ಜಾಡಿನ ಮೂಲಕ ಅವರು ಮೊದಲ ಪ್ರಯತ್ನದಲ್ಲಿಯೇ ಗೆಲುವಿನ ಹಾದಿಯಲ್ಲಿದ್ದಾರೆ.
#
No Comment! Be the first one.