ಕೊರೋನಾ ಕಾಟ ಶುರುವಿಟ್ಟುಕೊಂಡು ಒಂದೂವರೆ ವರ್ಷವೇ ಕಳೆದುಹೋಯ್ತು. ಅಲೆ ಅಲೆಯಾಗಿ ಅಪ್ಪಳಿಸುತ್ತಿರುವ ಈ ಪೀಡೆ ಕಾಟಕ್ಕೆ ಎಣಿಸಲಾರದಷ್ಟು ಜನ ಜೀವ ಚೆಲ್ಲಿದ್ದಾರೆ. ಚಿತ್ರರಂಗ ತತ್ತರಿಸಿಹೋಗಿದೆ. ಎಷ್ಟೋ ಸಿನಿಮಾಗಳು ಅರ್ಧಕ್ಕೇ ನಿಂತುಬಿಟ್ಟಿವೆ. ಶುರು ಮಾಡಬೇಕು ಅಂದುಕೊಂಡಿದ್ದವರೆಲ್ಲಾ ಹೆದರಿ ಸೈಲೆಂಟಾಗಿಬಿಟ್ಟಿದ್ದಾರೆ. ಆದರೆ ಇಲ್ಲೊಂದು ತಂಡ ಕೊರೋನಾ ಮೊದಲ ಅಲೆಯಲ್ಲಿ ಲಾಕ್ ಡೌನ್ ಆಗಿತ್ತಲ್ಲಾ? ಆಗ ಕೆಲಸ ಶುರು ಮಾಡಿ, ಎರಡನೇ ಲಾಕ್ ಡೌನ್ ಮುಗಿಯುತ್ತಿದ್ದಂತೇ ಅಚ್ಚುಕಟ್ಟಾಗಿ ಚಿತ್ರವನ್ನು ಕಂಪ್ಲೀಟ್ ಮಾಡಿದೆ.
ಗುಡ್ ವ್ಹೀಲ್ ಪ್ರೊಡಕ್ಷನ್ ಸಂಸ್ಥೆಯ ಮಂಜುನಾಥ್ ನಿರ್ಮಿಸಿ, ಶ್ರೀ ರಾಜ್ ನಿರ್ದೇಶಿಸಿರುವ ಕಿಟ್ಟಿ ಕೌಶಿಕ್ ಕೈ ಚಳಕದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹೆಸರು ಲಾಂಗ್ ಡ್ರೈವ್. ಗುಣಾತ್ಮಕ ಚಿಂತನೆಗಳಿದ್ದರೆ ಎಲ್ಲವೂ ಒಳ್ಳೆಯದ್ದೇ ಆಗುತ್ತದೆ ಅನ್ನೋದು ಕೇವಲ ಮಾತಿಗಷ್ಟೇ ಅಲ್ಲ, ಕಾರ್ಯರೂಪಕ್ಕೂ ತರಬಹುದು ಅನ್ನೋದನ್ನು ಲಾಂಗ್ ಡ್ರೈವ್ ತಂಡ ನಿರೂಪಿಸಿದೆ.
ಈ ಚಿತ್ರದ ನಾಯಕ ನಟನಾಗಿ ಅರ್ಜುನ್ ಯೋಗಿ ನಟಿಸಿದ್ದಾರೆ ಈಗಾಗಲೇ ತೆರೆ ಕಂಡಿರುವ ನನ್ನ ಪ್ರಕಾರ ಚೆಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀರೋ ಆಗಲು ಬೇಕಿರುವ ಎಲ್ಲ ಅರ್ಹತೆ ಹೊಂದಿರುವ ಅರ್ಜುನ್ ಗೆ ಲಾಂಗ್ ಡ್ರೈವ್ ನಲ್ಲಿ ಹೇಳಿಮಾಡಿಸಿದಂತಾ ಪಾತ್ರ ದಕ್ಕಿದೆ.
ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಪ್ರಿತಾ ಸತ್ಯನಾರಾಯಣ್, ಸಂಘರ್ಷ ಸೀರಿಯಲ್ಲಿನಲ್ಲಿ ಲೀಡ್ ರೋಲ್ ನಿಭಾಯಿಸುತ್ತಿರುವ ತೇಜಸ್ವಿನಿ ಶೇಖರ್ ನಾಯಕಿಯಾರಾಗಿ ಲಾಂಗ್ ಡ್ರೈವ್ ನೊಂದಿಗೆ ಸೇರಿದ್ದಾರೆ, ಇನ್ನು ಮುಖ್ಯ ಪಾತ್ರದಲ್ಲಿ ರಂಗಭೂಮಿ ಹಿನ್ನಲೆ ಇಂದ ಬಂದ ಶಬರಿ ಮಂಜು ಈ ಚಿತ್ರದಲ್ಲಿ ಕಾಣಿಸುತ್ತಾರೆ ಈಗಾಗಲೇ kgf 2,ಬಹದ್ದೂರ್ ಗಂಡು, ಚಿಕನ್ ಪುಳಿಯೋಗರೆ, ವಿರಾಮದ ನಂತರ ಚಿತ್ರಗಳಲ್ಲಿ ನಟಿಸಿದ್ದಾರೆ, ಈ ತಂಡಕ್ಕೆ ಮತ್ತೊರ್ವ ಅದ್ಭುತ ಕಲಾವಿದ ಭೈರವ ಗೀತಾ ಮಫ್ತಿಖ್ಯಾತಿಯ ಬಲ ರಾಜವಾಡಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ ಕನ್ನಡಕ್ಕೆ ಒಂದಿಷ್ಟು ಅಪ್ಪಟ ಪ್ರತಿಭಾವಂತರ ಪರಿಚಯವೂ ಆಗಲಿದೆ,ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿರುವ ಶಂಕರ್ BR, ಜಿಮ್ ಕೀರ್ತಿ,ಇಲ್ಲಿ ಕೀರ್ತಿ ಹಾಗೂ ಮಹೇಶ್ ಗುರು ಎಲ್ಲರನ್ನೂ ನಗಿಸುವ ಚೆಂದದ ಪಾತ್ರದಲ್ಲಿ ಕಾಣಿಸಿದ್ದಾರೆ
ಹೀಗೆ ಶುರುವಾದ ʻಲಾಂಗ್ ಡ್ರೈವ್ ಗೆ ಮದನ್ ಹರಿಣಿ ಹಾಡಿನ ಭಾಗ ಚಿತ್ರೀಕರಣ ಮುಗಿಸುವ ಮುಖಾಂತರ ಕುಂಬಳಕಾಯಿ ಹೊಡೆದಿದೆ. ಉಳಿದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಅಕ್ಟೋಬರ್ ವೇಳೆಗೆ ಜನರ ಮುಂದೆ ಬರಲು ಚಿತ್ರ ತಂಡ ತಯಾರಿ ಮಾಡುತ್ತಿದೆ.
ಶ್ರೀರಾಜ್ ನಿರ್ದೇಶನ, ಕಿಟ್ಟಿಕೌಶಿಕ್ ಛಾಯಾಗ್ರಹಣ, ರಾಮಿಶೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ಮದನ್ ಹರಿಣಿ ನೃತ್ಯ, ಸುಮುಖ್ ಮೇಲ್ವಿಚಾರಣೆಯ ಈ ಚಿತ್ರದಲ್ಲಿ ಅರ್ಜುನ್ ಯೋಗಿ, ಶಬರಿಮಂಜು, ಬಲ ರಾಜ್ ವಾಡಿ, ತೇಜಸ್ವಿನಿ ಶೇಖರ್, ಸುಪ್ರಿತಾ ಸತ್ಯನಾರಾಯಣ್, ಮಹೇಶ್ ಗುರು, ಮೋಹನ್ ಮುಂತಾದವರ ತಾರಾಗಣವಿದೆ. ಇಷ್ಟರಲ್ಲೇ ಚಿತ್ರದ ಫಸ್ಟ್ ಲುಕ್ ಸಹಾ ಹೊರಬೀಳಲಿದೆ.
No Comment! Be the first one.