ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಲೂಸ್ ಮಾದ ಉರುಫ್ ಯೋಗಿಶ್ ಅಪ್ಪನಾದ ಸಂಭ್ರಮದಲ್ಲಿದ್ದಾರೆ. ಯೋಗಿ ಮತ್ತು ಸಾಹಿತ್ಯ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಯೋಗಿ ಪತ್ನಿ ಸಾಹಿತ್ಯ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.