ಸಿಲ್ವರಿಥಮ್ ಪ್ರೊಡಕ್ಷನ್ಸ್ ಲಾಂಚನದಲ್ಲಿ ಕುಮಾರಿ ವಂದನ ಪ್ರಿಯ, ಪ್ರಭುಕುಮಾರ್ ಹಾಗೂ ಎ.ವಿ.ನಾಗರಾಜ್ ಅವರು ನಿರ್ಮಿಸುತ್ತಿರುವ ‘ಲವ್ ಮ್ಯಾಟ್ರು‘ ಚಿತ್ರಕ್ಕೆ ವಿರಾಟ್ ಅವರು ಬರೆದಿರುವ ‘ಖೋಟ ಪ್ರೀತಿ, ಹೃದಯ ಅಲ್ಲೋಲ, ಕಲ್ಲೋಲ‘ ಎಂಬ ಹಾಡು ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿದೆ. ವ್ಯಾಸರಾಜ್ ಸೋಸಲೆ ಈ ಹಾಡನ್ನು ಹಾಡಿದ್ದಾರೆ. ವಿರಾಟ್ ಅಭಿನಯಿಸಿದ್ದಾರೆ.

ಸೈಕಲಾಜಿಕಲ್ ಹಾಗೂ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿರಾಟ್ ಎನ್ ನಿರ್ದೇಶಿಸುತ್ತಿದ್ದಾರೆ. ದುನಿಯಾ ಸೂರಿ, ಪ್ರಶಾಂತ್ ನೀಲ್, ಕೆ.ಎಂ.ಚೈತನ್ಯ ಅವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದ ವಿರಾಟ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ವಿರಾಟ್ ಅವರೆ ಬರೆದಿದ್ದಾರೆ.

ಒಂದು ಹಾಡಿನ ಚಿತ್ರೀಕರಣ ಬಿಟ್ಟು ಉಳಿದ ಚಿತ್ರೀಕರಣ ಮಾಕ್ತಾಯವಾಗಿದ್ದು, ಕುದುರೆಮುಖ ಹಾಗೂ ಬೆಂಗಳೂರಿನಲ್ಲಿ ೬೦ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ೫ಹಾಡುಗಳಿದ್ದು, ಶೇಡ್ರ್ಯಾಕ್ ಸಾಲಮನ್ ಸಂಗೀತ ನೀಡಿದ್ದಾರೆ. ದೇವೇಂದ್ರ ಪರಮೇಶ್ ಚಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ನಿರ್ದೇಶಕ ವಿರಾಟ್ ಅವರೆ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅನಿತಾ ಭಟ್, ಸೋನಾಲ್ ಮಾಂಟೆರೊ, ಅಚ್ಯುತ ಕುಮಾರ್, ಸುಮನ್ ರಂಗನಾಥ್, ಸುಷ್ಮಿತ ರಂಗನಾಥ್, ಕರುಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

CG ARUN

ಪಂಚಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ  ‘ಮಿಸ್ಟರ್ ರಾವಣ’

Previous article

You may also like

Comments

Leave a reply

Your email address will not be published. Required fields are marked *