ಹೆಸರಘಟ್ಟದ ಕಾಲೇಜಿನಲ್ಲಿ ಕ್ರಿಕೆಟ್ ಸಾಹಸ!

ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯಿಸುತ್ತಿರುವ ಐಲವ್‌ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎರಡನೇ ಬಾರಿ ಚಂದ್ರು ಮತ್ತು ಉಪ್ಪಿ ಕಾಂಬಿನೇಷನ್ನಿನ ಈ ಚಿತ್ರದ ಸಾಹಸ ದೃಷ್ಯಾವಳಿಗಳು ಹೆಸರಘಟ್ಟದ ಆಚಾರ್ಯ ಕಾಲೇಜಿನಲ್ಲಿ ಸೆರೆಹಿಡಿಯಲ್ಪಡುತ್ತಿವೆ.

ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಅವರ ಸಮ್ಮುಖದಲ್ಲಿ ಐ ಲವ್ ಯೂ ಚಿತ್ರದ ಮೈ ನವಿರೇಳಿಸುವ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿವೆ. ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್‌ನ ರೋಚಕ ಸನ್ನಿವೇಶಗಳನ್ನು ಅವ್ಯಾಹತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

https://www.facebook.com/directorrchandru/videos/245602072779327/

ಈ ಚಿತ್ರವನ್ನು ಆರ್ ಚಂದ್ರು ಅವರೇ ಸಿದ್ದೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಧಾರಾಳವಾಗಿಯೇ ಖರ್ಚು ಮಾಡಿ ಈ ಸಾಹಸ ದೃಷ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಅದ್ದೂರಿ ವೆಚ್ಚದ ಈ ಸಾಹಸ ಸನ್ನಿವೇಶಗಳಲ್ಲಿ ಚಂದ್ರು ಅತ್ಯಂತ ದುಬಾರಿ ಕಾರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಡಾ.ರವಿವರ್ಮ, ವಿನೋದ್ ಮತ್ತು ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಚಿನ್ನಿ ಪ್ರಕಾಶ್ ಅವರು ಈ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸಂಗೀತ, ನೃತ್ಯ, ಸಾಹಸ ಸೇರಿದಂತೆ ಈ ಚಿತ್ರವನ್ನು ಎಲ್ಲ ವಿಧದಲ್ಲಿಯೂ ರಿಚ್ ಆಗಿ ರೂಪಿಸಲು ಆರ್. ಚಂದ್ರು ಶ್ರಮಿಸುತ್ತಿದ್ದಾರೆ. ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಈ ಚಿತ್ರ ಥರ ಥರದಲ್ಲಿ ಸದ್ದು ಮಾಡಿಕೊಂಡೇ ಬಂದಿದೆ. ಇದೀಗ ಮೈನವಿರೇಳಿಸೋ ಸಾಹಸ ಸನ್ನಿವೇಶಗಳ ಚಿತ್ರೀಕರಣದ ಮೂಲಕ ಮತ್ತೆ ಐ ಲವ್ ಯೂ ಚಿತ್ರದತ್ತ ಎಲ್ಲರ ಗಮನ ನೆಟ್ಟಿದೆ.a

#


Posted

in

by

Tags:

Comments

Leave a Reply