ಸ್ಟಾರ್ ವರ್ಚಸ್ಸು ಪಡೆದಿರುವ ಹೀರೋಗಳಿಂದ ಮಾತ್ರ ಜನರನ್ನು ಥೇಟರಿಗೆ ಕರೆತರಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಪುರುಷಪ್ರಧಾನವಾಗಿದೆ ಸಿನಿಮಾ ಜಗತ್ತು. ಆದರೆ ನಾನೇನು ಕಮ್ಮಿನಾ? ಅನ್ನುವಂತೆ ಅಲ್ಲೊಬ್ಬ ಇಲ್ಲೊಬ್ಬ ನಟಿಯರು ಎದ್ದು ನಿಲ್ಲುತ್ತಿರುತ್ತಾರೆ. ಕಳೆದೆರಡು ದಶಕಗಳಲ್ಲಿ ನೋಡಿದರೆ ಮಾಲಾಶ್ರೀ, ಪ್ರೇಮಾ, ರಮ್ಯ ಥರದ ಕೆಲವೇ ನಟಿಯರು ಕನ್ನಡದಲ್ಲಿ ಆ ಮಟ್ಟಿಗಿನ ಕ್ರೇಜ಼್ ಪಡೆದಿದ್ದರು. ಈಗ ರಚಿತಾ ಕೂಡಾ ಅಂಥದ್ದೇ ಹವಾ ಮೇಂಟೇನ್ ಮಾಡಿದ್ದಾಳೆ.
ಉಪೇಂದ್ರ ನಟಿಸಿದ್ದ ಐ ಲವ್ ಯೂ ಸಿನಿಮಾದಲ್ಲಿ ಹಸಿ ಬಿಸಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದವಳು ರಚಿತಾ. ಈಗ ಗುರು ದೇಶಪಾಂಡೆ ನಿರ್ಮಾಣದ ಲವ್ ಯೂ ರಚ್ಚು ತೆರೆಗೆ ಬರುತ್ತಿದೆ. ಅಜಯ್ ರಾವ್ ಜೊತೆ ರಚಿತಾ ಸಿಕ್ಕಾಪಟ್ಟೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪ್ರಮೋಷನ್ ಗೆ ಅದೇ ಬಂಡವಾಳವಾಗಿದೆ ಕೂಡಾ. ಹೀರೋ ಅಜಯ್ ರಾವ್ ಬಿಳೀ ಹಾಸಿಗೆಯಲ್ಲಿ ಕೆಡವಿಕೊಂಡು ಯರ್ರಾಬಿರ್ರಿ ಉಜ್ಜಾಡುವ ದೃಶ್ಯಗಳನ್ನು ಸಿನಿಮಾದ ಟ್ರೇಲರಿನಲ್ಲೇ ಇಡಲಾಗಿದೆ. ಅಜಯ್ ರಾವ್ ಪಾತ್ರದ ಒಳಗಿಳಿದು, ಕೂಡಾ ಪ್ರತಿಯೊಂದೂ ದೃಶ್ಯವನ್ನು ಅನುಭವಿಸೀ ಅನುಭವಿಸಿ ನಟಿಸಿದಂತೆ ಕಾಣುತ್ತಿದೆ. ಟ್ರೇಲರ್ ನೋಡಿದ ಪಡ್ಡೆಗಳು ಸಿನಿಮಾಗೇ ಹೋಗಲೇಬೇಕು ಅಂತಾ ತೀರ್ಮಾನಿಸೋದು ಗ್ಯಾರೆಂಟಿ.
ಈ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಹಿಂದೆ ವಾರಸ್ದಾರ, ರಾಜಾಹುಲಿ, ಪಡ್ಡೆಹುಲಿ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದವರು. ಈಗ ಕಾಲ ಬದಲಾಗಿದೆ. ಓಟಿಟಿ ಪ್ಲಾಟ್ ಫಾರ್ಮಿನಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೇ ಎಲ್ಲವೂ ಬಯಲಾಗುತ್ತಿದೆ.
ಈ ಸಂದರ್ಭಕ್ಕೆ ತಕ್ಕಂತೆ ಲವ್ ಯೂ ರಚ್ಚು ರೂಪುಗೊಂಡಂತಿದೆ. ಮರ್ಡರ್ ಮಿಸ್ಟರಿ ಕಥಾವಸ್ತುವನ್ನು ಹೊಂದಿರುವ ಲವ್ ಯೂ ರಚ್ಚು ಚಿತ್ರಕ್ಕೆ ಮತ್ತೊಬ್ಬ ನಿರ್ದೇಶಕ ಶಶಾಂಕ್ ಸ್ಕ್ರಿಪ್ಟ್ ನೀಡಿದ್ದಾರೆ. ಸದ್ಯ ನಿರ್ದೇಶನದೊಂದಿಗೆ ನಟನೆಯಲ್ಲೂ ಹೆಸರು ಮಾಡುತ್ತಿರುವ ರಾಘು ಶಿವಮೊಗ್ಗ ನೆಗೆಟೀವ್ ರೋಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರ ಸಿನಿಮಾ ತೆರೆಗೆ ಬರುತ್ತಿದೆ. ರಚಿತಾ ಬರಿಯ ಬೆಡ್ ರೂಂ ದೃಶ್ಯದಲ್ಲಿ ಮಾತ್ರ ಮಿಂಚಿದ್ದಾಳಾ? ಅಥವಾ ಸಿನಿಮಾ ಪೂರ್ತಿ ಸ್ಕೋರು ಮಾಡುತ್ತಾಳಾ ಅನ್ನೋದು ಗೊತ್ತಾಗಲಿದೆ…
Comments