ಭರಾಟೆ ಚಿತ್ರದ ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಲಿರುವ ಬಹುನಿರೀಕ್ಷಿತ ಸಿನಿಮಾ ಮದಗಜ. ಈಗಾಗಲೇ ಟೈಟಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಸೌಂಡು ಮಾಡಿದ್ದ ಈ ಸಿನಿಮಾ ಚಿತ್ರದ ಫಸ್ಟ್ ಲುಕ್ ನಿಂದಲೂ ಸಾಕಷ್ಟು ಗಮನ ಸೆಳೆದಿತ್ತು. ಸದ್ಯ ಮದಗಜ ಟೀಮು ಲೊಕೇಷನ್ ಹುಡುಕಾಟವನ್ನು ಶುರು ಮಾಡಿದೆಯಂತೆ.
ಹೌದು.. ನಾರ್ವೆ, ಜಾರ್ಜಿಯಾ, ಸ್ವಿಡ್ಜರ್ ಲ್ಯಾಂಡ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋಕೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ಹಾಗಾಗಿ ವಿದೇಶಕ್ಕೆ ಹಾರಲು ಸಜ್ಜಾಗಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಭಾರತದ ಅತಿ ದೊಡ್ಡ ಶ್ರೀಮಂತನ ಪಾತ್ರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಇನ್ನು ಮುಂದಿನ ವಾರ ಚಿತ್ರತಂಡ ಲೊಕೇಷನ್ ಹುಡುಕಾಟಕ್ಕೆ ನಾರ್ವೆಗೆ ತೆರಳಲಿದೆ. ಈಗಾಗಲೇ ಬಹುತೇಕ ಸ್ಟಾರ್ ಸಿನಿಮಾಗಳು ವಿದೇಶಿ ನೆಲದಲ್ಲಿ ಶೂಟ್ ಮಾಡಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ವು ಇದೀಗ ಮದಗಜ ಟೀಮ್ ಕೂಡ ಅದೇ ಹಾದಿಯಲ್ಲಿ ಸಾಗಲಿದೆ. ಇದೊಂದು ಮಾಸ್ ಅಂಡ್ ರೊಮ್ಯಾಂಟಿಕ್ ಸಿನಿಮಾವಾಗಿದ್ದು ಚಿತ್ರದಲ್ಲಿ ಯಾವೆಲ್ಲಾ ಸ್ಟಾರ್ಗಳು ಇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಲಿದ್ದು, ಅಯೋಗ್ಯ ಮಹೇಶ್ ನಿರ್ದೇಶನ ಮಾಡಲಿದ್ದಾರೆ.
No Comment! Be the first one.