ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ರಾಜಕಾರಣಿ ಎಲ್ಲವೂ ಆಗಿರುವ ಮದನ್ ಪಟೇಲ್ ಇತ್ತೀಚಿಗೆ ತಾನೆ ತಮಟೆ ಎನ್ನುವ ಸಿನಿಮಾವನ್ನು ಆರಂಭಿಸಿದ್ದರು. ಇದರ ಚಿತ್ರೀಕರಣದ ಕೆಲಸದಲ್ಲಿದ್ದಾಗಲೇ ಅವರ ತಾಯಿ ತೀರಿಕೊಂಡಿದ್ದಾರೆ. ಇಂದು ಮಧ್ಯಾಹ್ನನದ ವರೆಗೆ ದಿಮ್ಮಲೂರಿನ ಬಡಾವಣೆಯಲ್ಲಿ ಇರಿಸಿ ನಂತರ ಕಲ್ಪಲ್ಲಿ ರುದ್ರಭೂಮಿಯಲ್ಲಿ ಅಂತಿಮಸಂಸ್ಕಾರ ಮಾಡಲಾಗುವುದು.
ಒಂದು ಕಆಲದಲ್ಲಿ ಮದನ್ ಮಲ್ಲು ಆರ್ಕೇಸ್ಟ್ರಾ ತಂಡ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದವರು. ತೀರಾ ಕಷ್ಟದ ಹಿನ್ನೆಲೆಯನ್ನು ಕಂಡಿದ್ದ ಮದನ್ ಚಿತ್ರರಂಗ, ರಾಜಕಾರಣ ಇತ್ಯಾದಿ ರಂಗಗಳಲ್ಲಿ ಬೆಳೆದುನಿಲ್ಲುವಲ್ಲಿ ಅವರ ತಾಯಿ ಅಲುಮೇಲಮ್ಮನವರ ಪಾತ್ರ ಹಿರಿದು. ಈಗವರು ಇಹಲೋಕ ತ್ಯಜಿಸಿದ್ದಾರೆ. ಮದನ್ ಪಟೇಲ್, ಅವರ ಮಗ ಮಯೂರ್ ಸೇರಿದಂತೆ ಇಡೀ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗುವಂತಾಗಲಿ…