ದಕ್ಷಿಣ ಭಾರತದ ಚಿತ್ರಗಳು ಮಾತ್ರವಲ್ಲದೆ ಹಿಂದಿ ಚಿತ್ರಗಳಲ್ಲೂ ಮಾಧವನ್ ನಟಿಸಿದ್ದಾರೆ. ದಕ್ಷಿಣದಲ್ಲಿ ಅವರು ಹೆಸರಾಗಿರುವುದು ‘ಅಲೈಪಾಯಿದೆ’, ‘ಮಿನ್ನಲೇ’, ‘ದಮ್ ದಮ್ ದಮ್’ ಮುಂತಾದ ರೊಮ್ಯಾಂಟಿಕ್ ಸಿನಿಮಾಗಳಲ್ಲಿ. ಇತ್ತೀಚೆಗೆ ‘ಇರುಧು ಸುತ್ರು’, ‘ವಿಕ್ರಂ ವೇದ’ ತಮಿಳು ಚಿತ್ರಗಳಲ್ಲಿ ಅವರು ಭಿನ್ನ ಪಾತ್ರಗಳಲ್ಲಿ ಮಿಂಚಿದ್ದರು. ಇದೀಗ ಹೊಸ ಚಿತ್ರಕ್ಕಾಗಿ ಅವರು ಸಂಪೂರ್ಣವಾಗಿ ಮೇಕ್ಓವರ್ ಮಾಡಿಕೊಂಡು ನಟಿಸುತ್ತಿದ್ದಾರೆ. ‘ರಾಕೆಟ್ರಿ ದಿ ನಂಬಿ ಎಫೆಕ್ಟ್’ ಬಯೋಪಿಕ್ ಚಿತ್ರದಲ್ಲಿ ಅವರು ವಿಜ್ಞಾನಿ ನಂಬಿ ನಾರಾಯಣನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರವನ್ನು ಸ್ವತಃ ಮಾಧವನ್ ಅವರೇ ನಿರ್ದೇಶಿಸುತ್ತಿದ್ದಾರೆ ಎನ್ನುವುದು ವಿಶೇಷ.
ಪದ್ಮಭೂಷಣ ಪುರಸ್ಕøತ ನಂಬಿ ನಾರಾಯಣನ್ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದವರು. ಇಸ್ರೋಗೆ ಸಂಬಂಧಿಸದ ಅಮೂಲ್ಯ ದಾಖಲೆಗಳನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು 1994ರಲ್ಲಿ ಅವರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ಇದು ಸುಳ್ಳೆಂದು ಸಾಬೀತಾದ ನಂತರ ಅವರನ್ನು ಬಿಡುಗಡೆಗೊಳಿಸಿ ನ್ಯಾಯಾಲಯ ವಿಷಾದÀ ವ್ಯಕ್ತಪಡಿಸಿತ್ತು. ಇಂಥದ್ದೊಂದು ಅಪರೂಪದ ಕತೆಯನ್ನು ಮಾಧವನ್ ಕೈಗೆತ್ತಿಕೊಂಡು ತೆರೆಗೆ ಅಳವಡಿಸುತ್ತಿದ್ದಾರೆ. ಪಾತ್ರಕ್ಕಾಗಿ ಅವರು ಸುಮಾರು 94 ಕೆಜಿಯಷ್ಟು ದಪ್ಪಗಾಗಬೇಕಾಯ್ತು. ಸಹಜ ದಾಡಿ, ಮೀಸೆ ಬೆಳೆಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪಾತ್ರಕ್ಕಾಗಿ ತಾವು ದಪ್ಪಗಾಗಿದ್ದು, ಶೂಟಿಂಗ್ ನಂತರ ಕೆಲವೇ ದಿನಗಳಲ್ಲಿ ಮತ್ತೆ ಸಣ್ಣಗಾದ ಫಿಟ್ನೆಸ್ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ ನಾಯಕಿಯಾಗಿ ಸಿಮ್ರಾನ್ ನಟಿಸುತ್ತಿದ್ದಾರೆ.
No Comment! Be the first one.