ಸಾವಿತ್ರಿಯವರ ಬಯೋಪಿಕ್ ಮಹಾನಟಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ಟಾದ ಸಿನಿಮಾವಾಗಿದೆ. ಸದ್ಯ ಈ ಸಿನಿಮಾ 22ನೇ ಶಾಂಘೈ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದು, ಮಹಾನಟಿಗೆ ದೊರೆತ ಮತ್ತೊಂದು ಹೆಗ್ಗಳಿಕೆಯಾಗಿದೆ. ಈ ಫೆಸ್ಟಿವಲ್ ವಿಶ್ವದ ಪ್ರಮುಖ ಪ್ರದರ್ಶನಗಳಲ್ಲಿ ಹೆಚ್ಚಿನ ಹೆಸರುವಾಸಿಯಾದದ್ದು. ಈ ಈವೆಂಟ್ ಮುಂದಿನ ಜೂನ್ ನಲ್ಲಿ ಚೀನಾದ ಶಾಂಘೈನಲ್ಲಿ ನಡೆಸಲಾಗುತ್ತದೆ.
ಈ ಫೆಸ್ಟಿವಲ್ ಗೆ ಮೊಟ್ಟಮೊದಲ ಬಾರಿಗೆ ಆಯ್ಕೆಯಾದ ಭಾರತೀಯ ಸಿನಿಮಾ ಇದಾಗಿದ್ದು, ಎಸ್.ಐ.ಎಫ್.ಎಫ್ ಜ್ಯೂರಿ ಈ ಮುಕುಟಪ್ರಾಯವಾದ ಕಾರ್ಯಕ್ಕೆ ಸಾಥ್ ಕೊಟ್ಟವರಾಗಿದ್ದಾರೆ. ಮಹಾನಟಿ ಸಿನಿಮಾದಲ್ಲಿ ಕೀರ್ತಿ ಸುರೇಶ್, ನಾಗ್ ಅಶ್ವಿನ್, ದಲ್ಖರ್ ಸಲ್ಮಾನ್, ಜೆಮಿನಿ ಗಣೇಶನ್, ಬಹುಮುಖ ಪ್ರತಿಭೆ ಸಮತಾ ಅಕ್ಕಿನೇನಿ, ವಿಜಯ್ ದೇವರಕೊಂಡ, ನಟ ಕೀರ್ತಿ ರಾಜೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ಮಹಾನಟಿ ಕಳೆದ ವರ್ಷ ಮೇ ನಲ್ಲಿ ರಿಲೀಸ್ ಆಗಿತ್ತು.
No Comment! Be the first one.