ಸ್ಟಾರ್ ಗಳ ಹೆಂಡತಿಯರು ಅಂದಮೇಲೆ ಸ್ವಲ್ಪ ಗತ್ತು, ಗೈರತ್ತು ಇರಲೇಬೇಕಲ್ಲವೇ. ಜತೆಗೆ ಪೋಟೋಗೆ ಪೋಸು ಕೊಡುವಾಗಲೂ ಅಂದ ಚೆಂದವನ್ನು ನೋಡಿಕೊಂಡು ಕೊಡಬೇಕು ಅನ್ನೋದು ಬಹಳಷ್ಟು ಅಭಿಮಾನಿಗಳ ನಿರೀಕ್ಷೆ. ಹಾಗಂತ ಅದೇನೂ ಆದೇಶವೇನಲ್ಲ. ಮೇಲಾಗಿ ಮನಸ್ಸನ್ನು ಶುದ್ದವಾಗಿಟ್ಟುಕೊಂಡರೇ ಎಲ್ಲವೂ, ಎಲ್ಲರೂ ಸುಂದರರಾಗಿಯೇ ಕಾಣುತ್ತಾರೆ.

ಅಷ್ಟಕ್ಕೂ ಆಗಿದ್ದೇನಂದ್ರೆ ಗುರುವಾರವಷ್ಟೇ ಬಿಡುಗಡೆಯಾದ ‘ಮಹರ್ಷಿ’ ಸಿನಿಮಾ ಯಶಸ್ವಿಯಾದ ಸಂದರ್ಭದಲ್ಲಿ ಮಹೇಶ್, ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಕುಟುಂಬಿಕರು ಪಾರ್ಟಿ ಮಾಡಿಕೊಂಡಿದ್ದಾರೆ. “ಮಹರ್ಷಿ ಸೂಪರ್ ಡೂಪರ್ ಸಕ್ಸಸ್. ಇಷ್ಟು ದೊಡ್ಡ ಹಿಟ್ ಕೊಟ್ಟ ವಂಶಿಪೈಡಿಪಲ್ಲಿಗೆ ಧನ್ಯವಾದಗಳು” ಎಂದು ಎಲ್ಲರೊಂದಿಗಿನ ಫೋಟೋವನ್ನು ನಮ್ರತಾ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿನ ನಮ್ರತಾ ಲುಕ್ ಬಗ್ಗೆ ನೆಟ್ಟಿಗರೊಬ್ಬರು ಕಟುವಾಗಿ ಬರೆದಿದ್ದಾರೆ. “ನಮ್ರತಾ, ನೀನ್ಯಾಕೆ ಸ್ವಲ್ಪವೂ ಮೇಕಪ್ ಧರಿಸಲ್ಲ. ನೀವು ಖಿನ್ನತೆಯಲ್ಲಿದ್ದೀರಾ? ಅಥವಾ ಯಾವುದಾದರೂ ಫೋಬಿಯಾದಿಂದ ಬಳಲುತ್ತಿದ್ದೀರಾ?” ಎಂದು ಗೌರವ್ ಎಂಬ ವ್ಯಕ್ತಿ ಕಾಮೆಂಟ್ ಮಾಡಿದ್ದ.

ಇದಕ್ಕೆ ಪ್ರತಿಕ್ರಿಯಿರಿಸಿರುವ ನಮ್ರಾತಾ ಶಿರೋಡ್ಕರ್, “ಗೌರವ್ ನಿನ್ನಂತಹ ವ್ಯಕ್ತಿಗಳೂ ಮೇಕಪ್ ಹಾಕಿಕೊಂಡ ಮಹಿಳೆಯರನ್ನೇ ಇಷ್ಟಪಡುತ್ತಿರುತ್ತಾರೆ. ಇನ್ನು ಮುಂದೆ ನಿನ್ನ ಆಲೋಚನೆಗೆ ತಕ್ಕಂತಹವರನ್ನು ಫಾಲೋ ಮಾಡು. ಇಲ್ಲಿಂದ ನೀನು ನಿರ್ಗಮಿಸಬಹುದು. ಇದು ನನ್ನ ವಿನಮ್ರ ಮನವಿ” ಎಂದು ಕೌಂಟರ್ ನೀಡಿದ್ದಾರೆ. ಅವರ ಮೇಕಪ್ ಬಗ್ಗೆ ಮಾತನಾಡುವ ನೀನು ಅವರು ಒಂದು ಕಾಲದ ಮಿಸ್ ಇಂಡಿಯಾ ಎಂಬುದನ್ನು ಮರೆಯಬೇಡ. ನಿನ್ನ ಪ್ರೊಫೈಲ್ ನೋಡಿದ್ದೇನೆ. ನೀನು ಖಿನ್ನತೆಯಿಂದ ಬಳಲುತ್ತಿದ್ದೀಯ ಎಂದು ಗೊತ್ತಾಯಿತು. ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂಬ ಕಾಮೆಂಟ್‌ಗಳನ್ನೂ ಆ ನೆಟ್ಟಿಗನ ವಿರುದ್ಧ ಅಭಿಮಾನಿಗಳು ಹಾಕಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ದೂರಾ ದೂರಾ!

Previous article

ಐಪಿಲ್ ಫೈನಲ್ ಪಂದ್ಯವನ್ನು ಹೋಸ್ಟ್ ಮಾಡಲಿದ್ದಾರೆ ಭಾರತ್ ಜೋಡಿ!

Next article

You may also like

Comments

Leave a reply